4 ಲಕ್ಷ ಜನರ ಜೀವ ಉಳಿಸಿದ ಇಲಿಗೆ ನಿವೃತ್ತಿ: ಭಾವುಕ ಬೀಳ್ಕೊಡುಗೆ- ರೋಚಕ ಕಥೆ ಇಲ್ಲಿದೆ...

Published : May 18, 2025, 12:39 PM ISTUpdated : May 19, 2025, 09:39 AM IST
4 ಲಕ್ಷ ಜನರ ಜೀವ ಉಳಿಸಿದ ಇಲಿಗೆ ನಿವೃತ್ತಿ:  ಭಾವುಕ ಬೀಳ್ಕೊಡುಗೆ- ರೋಚಕ ಕಥೆ ಇಲ್ಲಿದೆ...

ಸಾರಾಂಶ

ಕ್ಷಯರೋಗ ಪತ್ತೆ ಮಾಡುವ ಮೂಲಕ ನಾಲ್ಕು ಲಕ್ಷಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ ಆಫ್ರಿಕಾದ ದೈತ್ಯ ಇಲಿ ಕೆರೊಲಿನಾ ಸ್ಟೋರಿ ನಿವೃತ್ತಿಯಾಗಿದೆ. ಏಳು ವರ್ಷಗಳ ಸೇವೆಯ ನಂತರ, ಭಾವುಕ ಬೀಳ್ಕೊಡುಗೆಯೊಂದಿಗೆ ಇಲಿಯನ್ನು ಸನ್ಮಾನಿಸಲಾಯಿತು.

ಇಲಿ ಎಂದರೆ ಎಂಥವರ ಬಾಯಲ್ಲೂ ಒಮ್ಮೆ ಛೀ ಎನ್ನುವ ಮಾತೇ ಬರುವುದು. ಇಲಿಗಳ ಕಾಟದಿಂದ ಬೇಸತ್ತವರ ಪಾಡು ಮಾತ್ರ ಯಾರಿಗೂ ಬೇಡ. ಗಣಪನ ವಾಹನ ಇಲಿಯನ್ನು ಪೂಜಿಸಿದರೂ, ಮನೆಗೆ ಬರುವ ಇಲಿಗಳನ್ನು ಸಾಯಿಸಲು ಹಲವು ಮಾರ್ಗಗಳನ್ನು ಹುಡುಕುವವರೇ ಹೆಚ್ಚು. ಇಲಿಗಳಿಂದ ಹಲವು ರೋಗಗಳೂ ಬರುವುದು ಇದೆ. ಆದರೆ, ಇಲ್ಲಿ ಹೇಳುತ್ತಿರುವ ಇಲಿ ಅಂತಿಂಥ ಇಲಿ ಅಲ್ಲ. ಬದಲಿಗೆ ನಾಲ್ಕು ಲಕ್ಷಕ್ಕೂ  ಅಧಿಕ ಮಂದಿ ಪ್ರಾಣವನ್ನು ಕಾಪಾಡಿರುವ ಮೂಷಕ ಇದು. ಹಲವು ವರ್ಷಗಳ ಸೇವೆಯ ಬಳಿಕ ಈ ಇಲಿ ಈಗ ನಿವೃತ್ತಿಯಾಗಿದ್ದು, ಅದಕ್ಕೆ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಲಾಗಿದೆ. ಕೇಕ್​ ಕತ್ತರಿಸಿ ಸಂಭ್ರಮಿಸಿ ಇಲಿಯನ್ನು ಭಾವುಕರಾಗಿ ಬೀಳ್ಕೊಡಲಾಗಿದೆ.

ಆಫ್ರಿಕಾದ ದೈತ್ಯ ಇಲಿ ಎಂದೇ ಖ್ಯಾತ ಪಡೆದಿರುವ ಕೆರೊಲಿನಾ ಸ್ಟೋರಿ ಇದು. ಕ್ಷಯರೋಗವನ್ನು ಕೇವಲ  20 ನಿಮಿಷಗಳಲ್ಲಿ ಪತ್ತೆ ಹಚ್ಚುವ ಚಾಕಚಕ್ಯತೆ ಇದಕ್ಕೆ ಇದೆ. 100 ಕಫ  ಮಾದರಿಗಳನ್ನು ಪರೀಕ್ಷಿಸಬಲ್ಲ ತಾಕತ್ತು ಇದಕ್ಕಿದೆ. ಆದರೆ, ಸೂಕ್ಷ್ಮದರ್ಶಕದೊಂದಿಗೆ ಅದೇ ಪ್ರಮಾಣದ ಮಾಹಿತಿಯನ್ನು ಪಡೆಯಲು ತಜ್ಞರಿಗೆ ಕನಿಷ್ಠ  ನಾಲ್ಕು ದಿನಗಳಾದರೂ ಬೇಕು. ಆದರೆ ಈ ಇಲಿ ಫಟಾಫಟ್​ ರೋಗವನ್ನು ಪತ್ತೆ ಹಚ್ಚುವ ಮೂಲಕ, ಟಾಂಜಾನಿಯಾ ಮತ್ತು ಇಥಿಯೋಪಿಯಾದಲ್ಲಿ ಕ್ಷಯರೋಗ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಹಾಯ ಮಾಡಿದೆ. ಈ ಮೂಲಕ ಆರಂಭದಲ್ಲಿಯೇ ರೋಗ ಪತ್ತೆಯನ್ನು ಮಾಡುವ ಮೂಲಕ ನಾಲ್ಕು ಲಕ್ಷಕ್ಕೂ ಅಧಿಕ ಮಂದಿಯ ಪ್ರಾಣ ಉಳಿಸಿರುವುದಾಗಿ ವರದಿಯಾಗಿದೆ.  2023 ರಲ್ಲಿ ಟಾಂಜಾನಿಯಾ ಮತ್ತು ಇಥಿಯೋಪಿಯಾ ಒಂದರಲ್ಲಿಯೇ 50 ಸಾವಿರಕ್ಕೂ ಹೆಚ್ಚು ಜನರು ಟಿಬಿಯಿಂದ ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ಸ್ಕೂಲ್ ಆಫ್ ಮೆಡಿಸಿನ್‌ನ ಕ್ಷಯರೋಗ ಸಂಶೋಧನಾ ಕೇಂದ್ರದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಟೆಸ್ ರೈಕ್‌ಮನ್ ಹೇಳುತ್ತಾರೆ. ಆದ್ದರಿಂದ ಈ ರೋಗ ಪತ್ತೆ ಮಾಡುವ ಮೂಲಕ ಕೆರೊಲಿನಾ ಲಕ್ಷಾಂತರ  ಮಂದಿಯ ಪ್ರಾಣ ಉಳಿಸಿದೆ ಎನ್ನುತ್ತಾರೆ. 

ವಿಶ್ವದ ದೊಡ್ಡ ಅನಕೊಂಡಾ ಪತ್ತೆ: ಕನಸಲ್ಲೂ ಬೆಚ್ಚಿಬೀಳೋ ದೈತ್ಯ ಇದು!

 ಈ ಇಲಿ ಇದೀಗ ನಿವೃತ್ತಿಯಾಗಿದೆ. ಆಸ್ಪತ್ರೆಯ ಸಹೋದ್ಯೋಗಿಗಳು ಸಾಲುಗಟ್ಟಿ ನಿಂತು ಇಲಿಯನ್ನು ಭಾವುಕರಾಗಿ ಬೀಳ್ಕೊಟ್ಟರು. ಚಪ್ಪಾಳೆ ತಟ್ಟಿ ಕೇಕ್ ಕತ್ತರಿಸಿದರು. ಅಷ್ಟಕ್ಕೂ ಈ ಇಲಿ ಏಳು ವರ್ಷಗಳ ಕಾಲ ಈ ಕಾರ್ಯದಲ್ಲಿ ತೊಡಗಿತ್ತು. ಇದೀಗ ಅದಕ್ಕೆ ವಯಸ್ಸಾಗಿರುವ ಕಾರಣ, ನಿವೃತ್ತಿ ನೀಡಲಾಗಿದೆ. ಆರಂಭದಲ್ಲಿಯೇ  3 ಸಾವಿರಕ್ಕೂ ಹೆಚ್ಚು ಕ್ಷಯರೋಗ ಪ್ರಕರಣಗಳನ್ನು ಅವರು ಪತ್ತೆಹಚ್ಚಿದ್ದ ಈ ಇಲಿ,  30 ಸಾವಿರಕ್ಕೂ ಹೆಚ್ಚು ಇತರ ಜನರನ್ನು ಸೋಂಕಿನಿಂದ ರಕ್ಷಿಸಿದೆ. ತನ್ನ ಇಡೀ ವೃತ್ತಿಜೀವನದಲ್ಲಿ 4 ಲಕ್ಷಕ್ಕೂ ಅಧಿಕ ಮಂದಿಗೆ ಸೇವೆ ಸಲ್ಲಿಸಿದೆ ಈ ಇಲಿ. 'ಇಲಿ ಎಂದಾಕ್ಷಣ ಅದನ್ನು ನಮ್ಮ ವೈರಿ ಎಂದುಕೊಳ್ಳುತ್ತೇವೆ. ಆದರೆ ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡಿದ ನಂತರ ಅವುಗಳ ಮೇಲೆ ಪ್ರೀತಿಯಲ್ಲಿ ಬೀಳುತ್ತೇವೆ' ಎನ್ನುತ್ತಾರೆ  APOPO ನ ಕ್ಷಯರೋಗ ವಿಭಾಗದ ಮುಖ್ಯಸ್ಥೆ ಟೆಫೆರಾ ಅಗಿಜೆವ್. 

ಅಂದಹಾಗೆ, ಆಫ್ರಿಕನ್ ದೈತ್ಯ ಚೀಲದ ಇಲಿಗಳು ವಿಭಿನ್ನ ಇಲಿಗಳಿಗಿಂತ ಭಿನ್ನ.  ಅವು ಶಾಂತವಾಗಿರುತ್ತವೆ. ಇವುಗಳಿಗೆ ತರಬೇತಿ ನೀಡುವುದು ಕೆಲವು ಜಾತಿ ನಾಯಿಗಳಿಗಿಂತಲೂ ಸುಲಭ ಎನ್ನುತ್ತಾರೆ ತಜ್ಞರು. ಏಳು ಅಥವಾ ಎಂಟು ವರ್ಷಗಳವರೆಗೆ ಕೆಲಸ ಮಾಡುವ ಸಾಮರ್ಥ್ಯ ಇವು ಹೊಂದಿವೆ. ಸಾಮಾನ್ಯವಾಗಿ 10 ವರ್ಷಗಳವರೆಗೆ ಇವು ಬದುಕಬಲ್ಲುದು. ಈ ಇಲಿಗಳ  ದೇಹವು ಸಾಮಾನ್ಯವಾಗಿ 13-ಇಂಚಿನ ಮ್ಯಾಕ್‌ಬುಕ್ ಏರ್‌ಗಿಂತ ಉದ್ದವಾಗಿರುತ್ತದೆ ಮತ್ತು ಅವುಗಳ ಬಾಲವು ಅಷ್ಟೇ ಉದ್ದವಾಗಿರುತ್ತದೆ. ಈ ದೈತ್ಯ  ಇಲಿಯ ವಾಸನೆಯ ಪ್ರಜ್ಞೆ ಎಷ್ಟು ಪ್ರಬಲವಾಗಿದೆಯೆಂದರೆ ಅವು 20 ಒಲಿಂಪಿಕ್ ಗಾತ್ರದ ಈಜುಕೊಳಗಳ ಗಾತ್ರದ ಜಾಗದಲ್ಲಿ ಅರ್ಧ ಹನಿ ಕ್ಲೋರಿನ್ ಅನ್ನು ಊಹಿಸಬಹುದಾದ ರೀತಿಯಲ್ಲಿ ಪತ್ತೆಹಚ್ಚಬಲ್ಲವು ಎಂದಿದ್ದಾರೆ ಸಂಶೋಧಕರು.  ಈ ಇಲಿಯ ವಾಸನೆಯ ಪ್ರಜ್ಞೆ ಎಷ್ಟು ಚುರುಕಾಗಿದೆಯೆಂದರೆ ಅದು 8 ಇಂಚುಗಳಷ್ಟು ಭೂಗತದಲ್ಲಿ ಟಿಎನ್‌ಟಿಯ ವಾಸನೆಯನ್ನು ಪತ್ತೆ ಮಾಡುತ್ತದೆ.  ಈ ಇಲಿಗಳು ಸಾಕಷ್ಟು ಹಗುರವಾಗಿರುತ್ತವೆ, ಅವು ಯಾವುದೇ ಸ್ಫೋಟಕಗಳನ್ನು ಸ್ಫೋಟಿಸುವುದಿಲ್ಲ.  ಟಾಂಜಾನಿಯಾದ ಮೊರೊಗೊರೊದಲ್ಲಿರುವ  ಪ್ರಧಾನ ಕಚೇರಿಯಲ್ಲಿ ನೆಲಬಾಂಬ್ ಅಥವಾ ಟಿಬಿ ಪತ್ತೆಗಾಗಿ ಈ ಇಲಿಗಳನ್ನು ಸಾಕಲಾಗುತ್ತದೆ  ಮತ್ತು ತರಬೇತಿ ನೀಡಲಾಗುತ್ತದೆ.

ನಿಜಕ್ಕೂ ಏಲಿಯನ್‌ಗಳು ಇವೆಯಾ? ಇಸ್ರೋ ಅಧ್ಯಕ್ಷ ಡಾ.ಸೋಮನಾಥ್‌ರಿಂದ ಅಚ್ಚರಿಯ ವಿಷಯ ರಿವೀಲ್!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!