ಮೋದಿ ರಾಜತಾಂತ್ರಿಕತೆಗೆ ಕೆರಿಬಿಯನ್‌ ದೇಶಗಳ ಶ್ಲಾಘನೆ

By Kannadaprabha NewsFirst Published Feb 19, 2021, 11:07 AM IST
Highlights

ಲಸಿಕೆ ಪೂರೈಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ವಹಿಸಿದ ರಾಜತಾಂತ್ರಿಕತೆಯನ್ನು ಕೆರಿಬಿಯನ್‌ ದೇಶಗಳ ಒಕ್ಕೂಟ ಮುಕ್ತ ಕಂಠದಿಂದ ಶ್ಲಾಘಿಸಿದೆ.

ನವದೆಹಲಿ (ಫೆ.19): ಕೊರೋನಾ ಲಸಿಕೆಯನ್ನು ಪೂರೈಕೆ ಮಾಡಿದ್ದಕ್ಕೆ ಕೆರಿಬಿಯನ್‌ ದೇಶಗಳು ಭಾರತಕ್ಕೆ ಕೃತಜ್ಞತೆ ಸಲ್ಲಿಸಿವೆ. ಲಸಿಕೆ ಪೂರೈಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ವಹಿಸಿದ ರಾಜತಾಂತ್ರಿಕತೆಯನ್ನು ಕೆರಿಬಿಯನ್‌ ದೇಶಗಳ ಒಕ್ಕೂಟ ಮುಕ್ತ ಕಂಠದಿಂದ ಶ್ಲಾಘಿಸಿದೆ.ಈ ಸಂಬಂಧ ಕೆರಿಬಿಯನ್‌ ಸಮುದಾಯದ 14 ದೇಶಗಳ ಒಕ್ಕೂಟ ‘ಕ್ಯಾರಿಕೊಮ್‌’ ಗೊತ್ತುವಳಿಯೊಂದನ್ನು ಅಂಗೀಕರಿಸಿದೆ. ಅಲ್ಲದೇ ಲಸಿಕೆ ಪೂರೈಕೆ ರಾಷ್ಟ್ರಗಳ ಪೈಕಿ ಗೊತ್ತುವಳಿಯಲ್ಲಿ ಭಾರತಕ್ಕೆ ಮನ್ನಣೆ ನೀಡಲಾಗಿದೆ.

ಈ ಕುರಿತು ‘ಕನ್ನಡಪ್ರಭ’ದ ಮಾತೃಸಂಸ್ಥೆ ಏಷ್ಯಾನೆಟ್‌ ಜೊತೆ ಮಾತನಾಡಿರುವ ಆ್ಯಂಟಿಗುವಾ ಹಾಗೂ ಬಾರ್ಬುಡಾ ರಾಯಭಾರಿ ರೊನಾಲ್ಡ್‌ ಸ್ಯಾಂಡ​ರ್‍ಸ್ , ಲಸಿಕೆ ಪೂರೈಕೆಯಲ್ಲಿ ಭಾರತ ನಿರ್ವಹಿಸಿದ ಪಾತ್ರ ಶ್ಲಾಘನಿಯ.

ಬಾಹ್ಯಾಕಾಶಕ್ಕೆ ಭಗವದ್ಗೀತೆ, ಮೋದಿ ಫೋಟೋ! .

 ಶೇ.15ರಷ್ಟುಜನಸಂಖ್ಯೆಯನ್ನು ಹೊಂದಿರುವ ಶ್ರೀಮಂತ ದೇಶಗಳು ಜಾಗತಿಕವಾಗಿ ಲಭ್ಯವಿರುವ ಶೇ.60ರಷ್ಟುಲಸಿಕೆಯನ್ನು ಖರೀದಿಸಿ ಇಟ್ಟುಕೊಂಡಿವೆ. 

ಕೆರಿಬಿಯನ್‌ ರಾಷ್ಟ್ರಗಳಂತಹ ಅಭಿವೃದ್ಧಿಶೀಲ ದೇಶಗಳಿಗೆ ಲಸಿಕೆ ಪೂರೈಕೆಯಲ್ಲಿ ಭಾರತ ಗಣನೀಯ ಕೊಡುಗೆ ನೀಡಿದೆ. ಅಲ್ಲದೇ ಲಸಿಕೆ ಪೂರೈಸಲು ಭಾರತ ಯಾವುದೇ ಷರತ್ತುಗಳನ್ನು ವಿಧಿಸಿಲ್ಲ. ಅಗತ್ಯಕ್ಕೆ ತಕ್ಕಂತೆ ಲಸಿಕೆಯನ್ನು ಪೂರೈಕೆ ಮಾಡುವ ಭರವಸೆ ನೀಡಿದೆ ಎಂದು ಹೇಳಿದ್ದಾರೆ.

click me!