ವಿವಾದಿತ ಹೇಳಿಕೆ: ಕನ್ನಡತಿ ರಾಜೀನಾಮೆ

By Kannadaprabha NewsFirst Published Feb 19, 2021, 8:35 AM IST
Highlights

ವಿವಾದಿತ ಹಾಗೂ ವರ್ಣಬೇಧ ನೀತಿಗಳನ್ನು ಬೆಂಬಲಿಸುವ ಸಂಬಂಧ ಅಸೂಕ್ಷ್ಮ ಹೇಳಿಕೆಗಳಿಂದಾಗಿ ಕನ್ನಡತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಲಂಡನ್‌ (ಫೆ.19): ಕಳೆದ ವಾರವಷ್ಟೇ ಆಕ್ಸ್‌ಫರ್ಡ್‌ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗುವ ಮೂಲಕ ಈ ಹುದ್ದೆ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಉಡುಪಿ ಮೂಲದ ರಶ್ಮಿ ಸಮಂತ್‌ ತಮ್ಮ ಈ ಹಿಂದಿನ ವಿವಾದಿತ ಹೇಳಿಕೆ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

ರಶ್ಮಿ ಅವರ ಕೆಲವು ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳು ಅಸೂಕ್ಷ್ಮ ಮತ್ತು ವರ್ಣಬೇಧ ನೀತಿ ಬೆಂಬಲಿಸುವಂತಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ರಾಜೀನಾಮೆ ನೀಡಿದ್ದಾರೆ. 2017ರಲ್ಲಿ ಬರ್ಲಿನ್‌ ಹತ್ಯಾಕಾಂಡ ಸ್ಮಾರಕಕ್ಕೆ ಭೇಟಿ ನೀಡಿದ್ದ ರಶ್ಮಿ ಆ ಸಂದರ್ಭದ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿ ‘ಚಿಂಗ್‌ ಚಾಂಗ್‌’ ಎಂಬ ಒಕ್ಕಣೆ ಬರೆದಿದ್ದರು. 

ಆಕ್ಸ್‌ಫರ್ಡ್‌ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಕನ್ನಡತಿ ರಶ್ಮಿ ಸಾವಂತ್‌

ಇದು ಚೀನಾ ವಿದ್ಯಾರ್ಥಿಗಳಿಗೆ ನೋವುಂಟು ಮಾಡಿತ್ತು. ಹಾಗೆಯೇ ಆಕ್ಸ್‌ಫರ್ಡ್‌ನ ಲೈಂಗಿಕ ಅಲ್ಪಸಂಖ್ಯಾತ ಆಂದೋಲನದ ಬಗ್ಗೆಯೂ ಟೀಕೆ ಮಾಡಿದ್ದರು. ಈ ಪೋಸ್ಟ್‌ಗಳ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿತ್ತು.

click me!