ಕೆನಡ ಸೇರಿದ್ದ 18ನೇ ಶತಮಾನದ ಅನ್ನಪೂರ್ಣ ವಿಗ್ರಹ ಭಾರತಕ್ಕೆ ಹಸ್ತಾಂತರ!

By Suvarna NewsFirst Published Nov 20, 2020, 3:56 PM IST
Highlights

ಘಜ್ನಿ ದಾಳಿ, ಮೊಘಲರ ದಾಳಿ, ಬ್ರಟೀಷ್ ಆಕ್ರಮಣ ಸೇರಿದಂತೆ ಹಲವು ದಾಳಿಗಳನ್ನು ಭಾರತ ಕಂಡಿದೆ. ಇದು ಕೇವಲ ದಾಳಿಗಳಾಗಿ ಮಾತ್ರ ಉಳಿದಿಲ್ಲ. ಕಾರಣ ಇಲ್ಲಿನ ಅಪಾರ ಸಂಪತ್ತು ಕೂಡ ದೋಚಲಾಗಿದೆ. ಹೀಗೆ ಭಾರತದಿಂದ ಕಾಣೆಯಾಗಿ ಕೊನೆಗೆ ಕೆನಾಡ ಸೇರಿದ್ದ 18ನೇ ಶತಮಾನ ಅನ್ನಪೂರ್ಣೆ ವಿಗ್ರಹ ಇದೀಗ ಮರಳಿ ಭಾರತ್ತೆ ಹಸ್ತಾಂತರಿಸಲಾಗಿದೆ.

ನವದೆಹಲಿ(ನ.20): ಹಲವು ದಾಳಿಗಳನ್ನು ಎದುರಿಸಿರುವ ಭಾರತ, ಅಷ್ಟೇ ಅತ್ಯಮ್ಯೂಲ ವಸ್ತುಗಳನ್ನು ಕಳೆದುಕೊಂಡಿದೆ.  ವಿಗ್ರಹ, ಚಿನ್ನಾಭರಣ ಸೇರಿದಂತೆ ಲಕ್ಷ ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಹಲವು ದೇಶದ ಪಾಲಾಗಿದೆ. ಹೀಗೆ 18ನೇ ಶತಮಾನದ ಅನ್ನಪೂರ್ಣ ಕಲ್ಲಿನ ವಿಗ್ರಹವೊಂದು ಕೆನಡಾ ಪಾಲಾಗಿತ್ತು. ಇದೀಗ ಈ ವಿಗ್ರಹ ಮತ್ತೆ ಭಾರತಕ್ಕೆ ಮರಳಿದೆ.

ರಾಜ್ಯದಲ್ಲಿನ ಸಮಸ್ಯೆಗೆ ಶಿವಲಿಂಗವೇ ಕಾರಣ, ಮತ್ತೆ ಮುನ್ನೆಲೆಗೆ ಬಂದ ತಲಕಾವೇರಿ ಶಿವಲಿಂಗ.

ರೆಗೆನಿಯಾ ವಿಶ್ವವಿದ್ಯಾನಿಲಯ ವೈಸ್ ಚಾನ್ಸಲರ್ ಥೋಮಸ್ ಚೇಸ್ 18ನೇ ಶತಮಾನದ ಅನ್ನಪೂರ್ಣ ವಿಗ್ರಹವನ್ನು ಒಟ್ಟಾವದಲ್ಲಿರುವ ಭಾರತೀಯ ಹೈಕಮಿಶನ್ ಅಜಯ್ ಬಿಸಾರಿಯಾಗೆ ಹಸ್ತಾಂತರಿಸಿದ್ದಾರೆ.

ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಣ್ಣೆದುರಲ್ಲೇ ನಡೆದು ಹೋಯಿತು ಪವಾಡ!.

ರೆಗನಿಯಾ ವಿಶ್ವವಿದ್ಯಾನಿಲಯದ ಆರ್ಟ್ ಗ್ಯಾಲರಿಯಲ್ಲಿದ್ದ ಈ ವಿಗ್ರಹದ ಮೂಲ ವಾರಣಸಿ ಎಂದು ಹೇಳಲಾಗುತ್ತಿದೆ. ವಿಗ್ರಹ ಪಡೆದು  ಮಾತನಾಡಿ ಅಜಯ್ ಬಿಸಾರಿ ಭಾರತ ಹಾಗೂ ಕೆನಾಡ ಸಂಬಂಧ ಈ ಮೂಲಕ ಮತ್ತಷ್ಟು ಗಟ್ಟಿಗೊಂಡಿದೆ. ಸಾಂಸ್ಕೃತಿ ಪಾರಂಪರೆಯನ್ನು ಗೌರವಿಸಿ ಕೆನಾಡ ಈ ಮಹತ್ವದ ಹೆಜ್ಜೆ ಇಟ್ಟಿದೆ. ಇದಕ್ಕೆ ಅನಂತ ಅನಂತ ಧನ್ಯವಾದ ಎಂದು ಅಜಯ್ ಬಿಸಾರಿ ಹೇಳಿದ್ದಾರೆ.

ನಾಮರ್ನ್ ಮೆಕೆಂಜಿ ಆರ್ಟ್ ಗ್ಯಾಲರಿಯಲ್ಲಿ 1936ರಲ್ಲಿ ಈ ವಿಗ್ರಹವನ್ನು ಇಡಲಾಯಿತು. ಹೀಗಾಗಿ ಈ ಆರ್ಟ್ ಗ್ಯಾಲರಿಗೆ ನಾರ್ಮನ್ ಮೆಕಂಜಿ ಹೆಸರಿಡಲಾಗಿದೆ. ಕಾನೂನು ಬಾಹಿರವಾಗಿ ಈ ವಿಗ್ರಹ ಕೆನಾಡಗೆ ಆಗಮಿಸಿರುವ ಸಾಧ್ಯತೆ ಹೆಚ್ಚು. ಹೀಗಾಗಿ ಈ ವಿಗ್ರವನ್ನು ಭಾರತಕ್ಕೆ ಮರಳಿಸುತ್ತಿದ್ದೇವೆ ಎಂದು ಕೆನಾಡ ಹೇಳಿದೆ.

click me!