ಜಾಗತಿಕ ತಾಪದಿಂದ ಸಮಸ್ಯೆ: ವಿಶ್ವದ ಮೊದಲ ರೋಗಿ ಪತ್ತೆ!

By Suvarna News  |  First Published Nov 10, 2021, 9:35 AM IST

* ಹವಾಮಾನ ಬದಲಿನಿಂದ ಉಸಿರಾಟ ಸಮಸ್ಯೆ

* ಕೆನಡಾದಲ್ಲಿ ಜಗತ್ತಿನ ಮೊದಲ ಪ್ರಕರಣ ದೃಢ

* ಜಾಗತಿಕ ತಾಪದಿಂದ ಸಮಸ್ಯೆ: ವಿಶ್ವದ ಮೊದಲ ರೋಗಿ ಪತ್ತೆ


ವಿಕ್ಟೋರಿಯಾ(ನ.10): ಹವಾಮಾನ ಬದಲಾವಣೆಯಿಂದ (Climate Change) ಹಲವಾರು ಅನಾಹುತಗಳು ಸಂಭವಿಸಲಿವೆ ಎಂದು ತಜ್ಞರು ನಿರಂತರವಾಗಿ ಎಚ್ಚರಿಕೆ ನೀಡುತ್ತಿರುವಾಗಲೇ, ಅದರಿಂದ ಈಗಾಗಲೇ ಸಮಸ್ಯೆಗೀಡಾಗಿರುವ ವಿಶ್ವದ ಮೊದಲ ವ್ಯಕ್ತಿಯೊಬ್ಬರು ಪತ್ತೆಯಾಗಿದ್ದಾರೆ. ಕೆನಡಾದ ಬ್ರಿಟಿಷ್‌ ಕೊಲಂಬಿಯಾ (British Columbia, Canada) ಪ್ರಾಂತ್ಯದಲ್ಲಿರುವ ವ್ಯಕ್ತಿಯೊಬ್ಬರಿಗೆ ಹವಾಮಾನ ಬದಲಾವಣೆ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಜಾಗತಿಕ ತಾಪಮಾನದ ಅಡ್ಡಪರಿಣಾಮಕ್ಕೆ ಈಡಾದ ವಿಶ್ವದ ಮೊದಲ ವ್ಯಕ್ತಿ ಇವರು ಎಂದು ಹೇಳಲಾಗುತ್ತಿದೆ.

ಉಸಿರಾಟ ಸಮಸ್ಯೆ (Respiratory Disease) ಎಂದು ಹೇಳಿಕೊಂಡು ಬಂದ ವ್ಯಕ್ತಿಗೆ ಆ ಸಮಸ್ಯೆಯ ಮೂಲ ಜಾಗತಿಕ ಹವಾಮಾನ ಬದಲಾವಣೆ ಎಂದು ವೈದ್ಯರು ಪತ್ತೆ ಹಚ್ಚಿದ್ದಾರೆ. ಇತ್ತೀಚೆಗೆ ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಆ ಬಳಿಕ ಈ ವ್ಯಕ್ತಿಯಲ್ಲಿ ಆಸ್ತಮಾ ಉಲ್ಬಣವಾಗಿ ಉಸಿರಾಟದ ಸಮಸ್ಯೆ ತೀವ್ರವಾಗಿತ್ತು. ಇದಕ್ಕೆ ಹವಾಮಾನ ಬದಲಾವಣೆಯೇ ಮುಖ್ಯ ಕಾರಣ ಎನ್ನುತ್ತಿದ್ದಾರೆ ವೈದ್ಯರು.

Latest Videos

undefined

ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದಲ್ಲಿ ಕಳೆದ ಹಣಕಾಸು ವರ್ಷದಲ್ಲಿ 1600 ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ವಾತಾವರಣದಲ್ಲಿ ಉಷ್ಣ ಗಾಳಿ ಸೃಷ್ಟಿಯಾಗಿ ಮಧುಮೇಹ, ಹೃದ್ರೋಗದಂತಹ ಸಮಸ್ಯೆಗಳು ಉಲ್ಬಣವಾಗುತ್ತಿವೆ ಎಂದು ವೈದ್ಯರಾದ ಡಾ| ಕೈಲ್‌ ಮೆರಿಟ್‌ ತಿಳಿಸಿದ್ದಾರೆ.

ಜಾಗತಿಕ ತಾಪಮಾನ ಏರಿಕೆ ಎಫೆಕ್ಟ್: ಮುಳುಗಲಿದೆ ಮಂಗಳೂರು, ಮುಂಬೈ!

ಇನ್ನೊಂದು ದಶಕದಲ್ಲಿ ಭೂಮಿಯ ತಾಪಮಾನ ಅಂದಾಜು ಮಟ್ಟಕ್ಕಿಂತ ಏರಿಕೆಯಾಗಲಿದೆ ಎಂದು ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆ ವರದಿ ಎಚ್ಚರಿಸಿದ ಬೆನ್ನಲ್ಲೇ, ಶತಮಾನದ (2100ನೇ ಇಸವಿ) ಒಳಗಾಗಿ ಮಂಗಳೂರು ಸೇರಿದಂತೆ ಭಾರತದ ಸಮುದ್ರದಂಚಿನ 12 ನಗರಗಳು ಮುಳುಗಲಿವೆ ಎಂಬ ಮತ್ತೊಂದು ಆಘಾತಕಾರಿ ಎಚ್ಚರಿಕೆ ಸಂದೇಶ ಬಂದಿದೆ. ವಿಶ್ವಸಂಸ್ಥೆಯ ವರದಿಯನ್ನಾಧರಿಸಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ವರದಿ ಬಿಡುಗಡೆ ಮಾಡಿದೆ.

ಕೈ ಮೀರಿ ಹೋಗುತ್ತಿದೆ ಜಾಗತಿಕ ತಾಪಮಾನ: ಹೀಗಾದರೆ ಮನುಕುಲ ಉಳಿಯುವುದೇ ಅನುಮಾನ

ಯಾವ ನಗರಗಳು ಮುಳುಗುತ್ತವೆ:

ಮಂಗಳೂರು, ಮುಂಬೈ, ಮರ್ಮಗೋವಾ, ಕೊಚ್ಚಿ, ಪಾರಾದೀಪ್‌, ಖಿದೀರ್‌ಪುರ, ವಿಶಾಖಪಟ್ಟಣಂ, ಚೆನ್ನೈ, ತೂತ್ತುಕುಡಿ, ಕಾಂಡ್ಲಾ, ಒಖಾ, ಭಾವನಗರ ಅಪಾಯದಲ್ಲಿವೆ. ಜಗತ್ತಿನಾದ್ಯಂತ ಸಮುದ್ರ ಮಟ್ಟದಲ್ಲಾಗುತ್ತಿರುವ ಬದಲಾವಣೆಯನ್ನು ಆಧರಿಸಿ ಈ ವರದಿ ನೀಡಲಾಗಿದೆ. ಈಗಿನ ಟ್ರೆಂಡ್‌ ಪ್ರಕಾರ ಸಮುದ್ರ ಏರಿದರೆ 2 ಅಡಿಯಷ್ಟುಏರಲಿದೆ. ಶತಮಾನದ ಅಂತ್ಯದೊಳಗೆ ಇದು ಮತ್ತಷ್ಟುತೀವ್ರಗೊಂಡರೆ, 2100ರ ಅಂತ್ಯಕ್ಕೆ 3 ಅಡಿಯಷ್ಟು ಸಮುದ್ರ ಮಟ್ಟಏರಿಕೆಯಾಗಿ ಈ ನಗರಗಳು ಮುಳುಗಲಿವೆ ಎಂದು ತಿಳಿಸಿದೆ.

ವಿಶ್ವಸಂಸ್ಥೆಯ ಈ ಸಮಿತಿಯು 1988ರಿಂದ ಪ್ರತಿ 5-7 ವರ್ಷಕ್ಕೊಮ್ಮೆ ತಾಪಮಾನ ಏರಿಕೆ, ಸಮುದ್ರಮಟ್ಟ, ಹಸಿರು ಮನೆ ಅನಿಲ ಪರಿಣಾಮ, ಮಂಜು ಕರಗುವಿಕೆ ಕುರಿತ ವರದಿ ನೀಡುತ್ತಿದೆ.

ಕರಾವಳಿ ನಗರಗಳೇಕೆ ಅಪಾಯದಲ್ಲಿವೆ?:

ವರದಿ ಪ್ರಕಾರ ಏಷ್ಯಾದ ಸುತ್ತಮುತ್ತಲಿನ ಸಮುದ್ರ ಮಟ್ಟವು ಜಾಗತಿಕ ಸರಾಸರಿ ದರಕ್ಕಿಂತ ವೇಗವಾಗಿ ಹೆಚ್ಚುತ್ತಿದೆ. ಈ ಹಿಂದೆ ಸಮುದ್ರ ಮಟ್ಟದಲ್ಲಿ ಇಂಥ ತೀವ್ರ ಬದಲಾವಣೆಗಳು ಪ್ರತಿ 100 ವರ್ಷಕ್ಕೊಮ್ಮೆ ಕಾಣಬಹುದಿತ್ತು. ಆದರೆ ಇನ್ಮುಂದೆ 2050ರ ಒಳಗಾಗಿ ಪ್ರತಿ 6ರಿಂದ 9 ವರ್ಷಕ್ಕೊಮ್ಮೆ ಸಂಭವಿಸಬಹುದು. 2006ರಿಂದ 2018ರ ವರೆಗೆ ನಡೆಸಿದ ಅಧ್ಯಯನದ ಅಂದಾಜಿನ ಪ್ರಕಾರ ಜಾಗತಿಕ ಸರಾಸರಿ ಸಮುದ್ರ ಮಟ್ಟಪ್ರತಿ ವರ್ಷ ಸುಮಾರು 3.7 ಮಿಲಿಮೀಟರ್‌ನಷ್ಟು ಏರಿಕೆಯಾಗುತ್ತಿದೆ.

ನೀರ್ಗಲ್ಲು ಕರಗದಂತೆ ತಡೆಗೆ ಬ್ಲಾಂಕೆಟ್‌ ಬಳಕೆ!

ಉ.ಕನ್ನಡ, ಉಡುಪಿ ಜಿಲ್ಲೆಗೂ ಅಪಾಯ

ನಾಸಾದ ಸಂದೇಶದ ಪ್ರಕಾರ ಕರ್ನಾಟಕದಲ್ಲಿ ಮಂಗಳೂರಷ್ಟೇ ಅಲ್ಲ, ಕರಾವಳಿಗೆ ಹೊಂದಿಕೊಂಡಿರುವ ಉಡುಪಿ ಜಿಲ್ಲೆಯ ಕಡಲ ತಡಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ, ಗೋಕರ್ಣ, ಕಾರವಾರ ಕಡಲ ತೀರಗಳಿಗೂ ಮುಳುಗಡೆಯ ಅಪಾಯ ಕಾದಿದೆ ಎಂದು ವಿಶ್ಲೇಷಿಸಬಹುದಾಗಿದೆ.

ಮುಳುಗುವ 12 ನಗರಗಳು

ನಗರ ಏರಲಿರುವ ಸಮುದ್ರ ಮಟ್ಟ

ಮಂಗಳೂರು 1.87 ಅಡಿ

ಮುಂಬೈ 1.90 ಅಡಿ

ಮರ್ಮಗೋವಾ 2.06 ಅಡಿ

ಕೊಚ್ಚಿ 2.32 ಅಡಿ

ಪಾರಾದೀಪ್‌ 1.93 ಅಡಿ

ಖಿದೀರ್‌ಪುರ್‌ 0.49 ಅಡಿ

ವಿಶಾಖಪಟ್ಟಣಂ 1.77ಅಡಿ

ಚೆನ್ನೈ 1.87 ಅಡಿ

ತೂತ್ತುಕುಡಿ 1.9 ಅಡಿ

ಕಾಂಡ್ಲಾ 1.87 ಅಡಿ

ಒಖಾ 1.96 ಅಡಿ

ಭಾವನಗರ 2.70 ಅಡಿ

click me!