ಕೈ ಬಿಟ್ಟು 30 ಕಿಲೋ ಮೀಟರ್ ಸೈಕಲ್ ರೈಡ್ ಮಾಡಿದ ಯುವಕನಿಗೆ ಗಿನ್ನೆಸ್ ಗರಿ

By Anusha KbFirst Published Dec 9, 2023, 1:04 PM IST
Highlights

ಯುವಕನೋರ್ವ ಕೈ ಬಿಟ್ಟೆ 30  ಕಿಲೋ ಮೀಟರ್ ದೂರ  ಕಾಲಿನಲ್ಲಿ ಸೈಕಲ್ ತುಳಿದು ವಿಶ್ವ ದಾಖಲೆ ಪುಟ ಸೇರಿದ್ದಾರೆ.  ಇದು ಕೈಗಳ ಬಳಸದೇ ಅತೀ ದೂರ  ಸೈಕಲ್ ರೈಡ್ ಮಾಡಿದ ದಾಖಲೆಯಾಗಿದೆ ಎಂದು ವಿಶ್ವ ಗಿನ್ನೆಸ್ ಸಂಸ್ಥೆ ಪ್ರಶಸ್ತಿ ಗರಿ ನೀಡಿದೆ. ಕೆನಡಾದ ಅಲ್ಬೆರ್ಟಾದ ಸೈಕಲಿಸ್ಟ್ ರಾಬರ್ಟ್ ಮುರ್ರೆ ಈ ಸಾಧನೆ ಮಾಡಿದವರು. 

ಯುವಕನೋರ್ವ ಕೈ ಬಿಟ್ಟೆ 30  ಕಿಲೋ ಮೀಟರ್ ದೂರ  ಕಾಲಿನಲ್ಲಿ ಸೈಕಲ್ ತುಳಿದು ವಿಶ್ವ ದಾಖಲೆ ಪುಟ ಸೇರಿದ್ದಾರೆ.  ಇದು ಕೈಗಳ ಬಳಸದೇ ಅತೀ ದೂರ  ಸೈಕಲ್ ರೈಡ್ ಮಾಡಿದ ದಾಖಲೆಯಾಗಿದೆ ಎಂದು ವಿಶ್ವ ಗಿನ್ನೆಸ್ ಸಂಸ್ಥೆ ಪ್ರಶಸ್ತಿ ಗರಿ ನೀಡಿದೆ. ಕೆನಡಾದ ಅಲ್ಬೆರ್ಟಾದ ಸೈಕಲಿಸ್ಟ್ ರಾಬರ್ಟ್ ಮುರ್ರೆ ಈ ಸಾಧನೆ ಮಾಡಿದವರು. 

ಕೈ ಬಿಟ್ಟು 130.29 km ಸೈಕಲ್ ತುಳಿದ ಈ ಸಾಧನೆ ಮಾಡುವುದಕ್ಕೆ ಮುರ್ರೆ ಅವರಿಗೆ 5 ಗಂಟೆ 37 ನಿಮಿಷ ತೆಗೆದುಕೊಂಡಿದ್ದಾರೆ. ಕೈಗಳಲ್ಲಿ ಹ್ಯಾಂಡಲ್ ಹಿಡಿದೇ ಬಹಳ ದೂರ ಸೈಕಲ್ ತುಳಿಯುವುದು ಕಷ್ಟದ ಕೆಲಸ ಹೀಗಿರುವಾಗ ಈ ಯುವಕ ಬರೋಬ್ಬರಿ 130 ಕಿಲೋ ಮೀಟರ್ ಕೈ ಬಿಟ್ಟೆ ಸೈಕಲ್ ತುಳಿದಿದ್ದಾನೆ. ಹೀಗೆ ಸೈಕಲ್ ತುಳಿಯಲು ಸಮತೋಲನ, ತಾಳ್ಮೆ, ಗಮನ, ಏಕಾಗ್ರತೆ ಎಲ್ಲವೂ ಬೇಕಾಗುತ್ತದೆ.  

ಅಂದಹಾಗೆ ಸುಮ್ಮನೇ ರೆಕಾರ್ಡ್ ಮಾಡುವುದಕ್ಕಾಗಿ ಈ ಕಠಿಣ ಸಾಧನೆ ಮಾಡಿಲ್ಲ ಈ ಯುವಕ, ಕ್ಯಾಲ್ಗೇರಿಯಲ್ಲಿರುವ ಆಲ್‌ಝೈಮರ್ಸ್ ಸೊಸೈಟಿಗೆ ನಿಧಿ ಸಂಗ್ರಹಿಸುವುದಕ್ಕಾಗಿ ಈ ಸಾಧನೆ ಮಾಡಿದ್ದಾನೆ ಯುವಕ. ಆಲ್‌ಝೈಮರ್‌ ಕಾಯಿಲೆ ನಮ್ಮ ಕುಟುಂಬದಲ್ಲಿಯೂ ಇದ್ದು, ಈ ಕಾಯಿಲೆಯಿಂದ ನಾನು ನನ್ನ ಅಜ್ಜಿಯನ್ನು ಕಳೆದುಕೊಂಡಿದ್ದೇನೆ ಎಂದು ಈ ಕೈಬಿಟ್ಟು ಸೈಕಲ್ ತುಳಿದು ಸಾಧನೆ ಮಾಡಿದ ಯುವಕ ರಾಬರ್ಟ್ ತಿಳಿಸಿದ್ದಾನೆ. ವಿಶ್ವ ದಾಖಲೆ ನಿರ್ಮಿಸಿ ನಮ್ಮ ಪ್ರೀತಿಪಾತ್ರರಾಗಿ ನಿಧಿ ಸಂಗ್ರಹ ಮಾಡುತ್ತಿರುವುದು ನನ್ನ ಗೆಲುವನ್ನು ದ್ವಿಗುಣಗೊಳಿಸಿದೆ ಎಂದು ಅವರು ಹೇಳಿದರು. 

ಅಬ್ಬಬ್ಬಾ 5 ಸಾವಿರ ಕಿಮೀ ಸೈಕಲ್ ತುಳಿದು ದಾಖಲೆ ಮಾಡಿದ 63ರ ವೃದ್ಧ!

ಗಿನ್ನೆಸ್ ದಾಖಲೆ ಸಂಸ್ಥೆಯ ಪ್ರಕಾ, ರಾಬರ್ಟ್  ಅವರು ಬಾಲ್ಯದಲ್ಲಿಯೇ ಸೈಕ್ಲಿಂಗ್ ಶುರು ಮಾಡಿದ್ದರು. ಎಳವೆಯಲ್ಲೇ ಸ್ವಿಮ್ಮಿಂಗ್ ಕೂಡ ಕಲಿತ ಅವರು ಇದಕ್ಕಾಗಿ ಸಹೋದರಿ ಜೊತೆಗೆ ಮುಂಜಾನೆ ಎದ್ದು ಬೈಕ್‌ನಲ್ಲಿ ಹೋಗುತ್ತಿದ್ದರು.  ಮೊದಲಿಗೆ ನಾವು 10 ಕಿಲೋ ಮೀಟರ್ ಹೀಗೆ ಅಭ್ಯಾಸ ಮಾಡಿದೆವು, ಇದು ನಮಗೆ ಬಹಳ ದೂರ ಎನಿಸಿತು. ಆದರೆ ಇದನ್ನು ನಾವು 2 ವಾರಗಳ ಕಾಲ ನಿರಂತರ ಅಭ್ಯಾಸ ಮಾಡಿದ್ದೆವು. ಆ ಸಮಯದಲ್ಲಿ ನಾನು ತುಂಬಾ ನಿಧಾನವಾಗಿದ್ದೆ. ಆದರೆ ನನ್ನ ಸಹೋದರಿ ಬೈಕ್‌ನಲ್ಲಿ ಮುಂದೆ ಹೋಗುತ್ತಿದ್ದಳು ಆಕೆ ತಡ ಮಾಡುತ್ತಿರಲಿಲ್ಲ ಹೀಗಾಗಿ ಆಕೆಯ ಹಿಂದೆಯೇ ನಾನು ಸಾಗುತ್ತಿದ್ದೆ. 

ಸೈಕ್ಲಿಂಗ್ ಮೇಲೆ ಅತೀವ ಆಸಕ್ತಿ ಬೆಳೆಸಿಕೊಂಡ ರಾಬರ್ಟ್ 15ರ ವಯಸ್ಸಿಗೆ  ತಮ್ಮ ಮೊದಲ ರೋಡ್ ಸೈಕಲ್ ಕೊಂಡರಂತೆ ಅದರಲ್ಲೇ ಈಗ ಅವರು ಈಗ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

11 ದಿನಗಳಲ್ಲಿ 4,800 ಕಿಲೋ ಮೀಟರ್ ಸೈಕ್ಲಿಂಗ್: ಅಮೆರಿಕದ ಅಲ್ಟ್ರಾ ಸೈಕಲ್ ರೇಸಲ್ಲಿ ಬೆಂಗಳೂರಿಗ ಶ್ರೀನಿ ಸಾಧನೆ..!

click me!