ಪ್ರತಿಭಟನಾ ನಿರತ ಭಾರತದ ರೈತರ ಪರ ನಿಂತ ಕೆನಡಾ ಪ್ರಧಾನಿ!

Published : Dec 01, 2020, 07:16 PM ISTUpdated : Dec 01, 2020, 07:19 PM IST
ಪ್ರತಿಭಟನಾ ನಿರತ ಭಾರತದ ರೈತರ ಪರ ನಿಂತ ಕೆನಡಾ ಪ್ರಧಾನಿ!

ಸಾರಾಂಶ

ಭಾರತದಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕೃಷಿ ಮಸೂದೆ, ರೈತ ಮಸೂದೆ ವಿರೋಧಿ ನಡೆಯುತ್ತಿರುವ ರೈತರ ಪ್ರತಿಭಟನೆ ಇದೀಗ ಭಾರತ ಮಾತ್ರವಲ್ಲ, ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ರೈತರ ಪ್ರತಿಭಟನೆ ಕುರಿತು ಕೆನಡಾ ಪ್ರಧಾನಿ ಮಹತ್ವದ ಮಾತುಗಳನ್ನಾಡಿದ್ದಾರೆ.

ನವದೆಹಲಿ(ಡಿ.01):  ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಇದೀಗ ದೆಹಲಿ ಮಾತ್ರವಲ್ಲ ದೇಶ-ವಿದೇಶದಲ್ಲೂ ಕಾವು ಪಡೆದುಕೊಳ್ಳುತ್ತಿದೆ.  ರೈತರ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಲಾಠಿ ಚಾರ್ಜ್ ಸೇರಿದಂತೆ ಹಲವು ಯತ್ನಗಳನ್ನು ನಡೆಸಿದೆ. ಇದೀಗ ರೈತರ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದು ಮಾಡುತ್ತಿದೆ. ಕೆನಾಡ ಪ್ರಧಾನಿ ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಕುರಿತು ಮಾತನಾಡಿದ್ದಾರೆ.

Fact Check : ಶಹೀನ್‌ ಭಾಗ್‌ ದಾದಿ ಈಗ ಪಂಜಾಬಿ ರೈತಳಾಗಿ ಪ್ರತಿಭಟನೆಯಲ್ಲಿ ಭಾಗಿ?

ಗುರುನಾನಕ್ ಜಯಂತಿ ಕುರಿತು ಆಯೋಜಿಸಿದ ವರ್ಚುವಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೆನಾಡ ಪ್ರಧಾನಿ ಜಸ್ಚಿನ್ ಟ್ರುಡೆಯು, ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ನಿಂತಿದ್ದಾರೆ. ಕೆನಡಾ ಯಾವತ್ತೂ ಶಾಂತಿಯುತವಾಗಿ ನಡೆಸುವ ಪ್ರತಿಭಟನೆಯ ಪರವಾಗಿದೆ. ಶಾಂತಿಯುತವಾಗಿ ನಡೆಸುವ ಪ್ರತಿಭಟನೆ ಅವರ ಹಕ್ಕು. ಈ ಹಕ್ಕನ್ನು ಕೆನಾಡ ಧಮಿಸುವಿದಿಲ್ಲ ಎಂದು ಭಾರತ ಸರ್ಕಾರಕ್ಕೆ ಪರಿಸ್ಥಿತಿಯ ಗಂಭೀರತೆ ಕುರಿತು ಸೂಚನೆ ನೀಡಿದೆ.

 

ರೈತರ ಪ್ರತಿಭಟನೆ ಕುರಿತು ಕೆನಾಡ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಭಾರತ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಶಾಂತಿಯುತ ಪ್ರತಿಭಟನೆಯನ್ನು ಗೌರವಿಸುವ ಹಾಗೂ ಪ್ರತಿಭಟನಾ ನಿರತರ ಬೇಡಿಕೆಯನ್ನು ಕೇಳುವ ತಾಳ್ಮೆ ಇರಬೇಕು ಎಂಬುದನ್ನು ಪರೋಕ್ಷವಾಗಿ ಹೇಳಿದೆ.

ಕೆನಾಡದಲ್ಲಿ ಸಿಖ್ ಸಮುದಾಯದ ಪಾಲು ಅತೀ ದೊಡ್ಡದಿದೆ. ಕೆನಾಡ ಸರ್ಕಾರದಲ್ಲೂ ಹಲವು ಸಚಿವರು ಸಿಖ್ ಸಮುದಾಯವರಾಗಿದ್ದಾರೆ. ಹೀಗಾಗಿ ಸಿಖ್ ರೈತರ ಪ್ರತಿಭಟನೆ ಕೆನಾಡದಲ್ಲಿ ಭಾರಿ ಸದ್ದು ಮಾಡುತ್ತಿದೆ . ಕೆನಾಡ ರಕ್ಷಣಾ ಮಂತ್ರಿ ಹರ್ಜಿತ್ ಸಿಂಗ್ ಸಜ್ಜನ್ ಭಾರತ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದರು. ಈ ಕುರಿತು ಟ್ವೀಟ್ ಮೂಲಕ ಗಮನಸೆಳೆಯುವ ಯತ್ನ ಮಾಡಿದ್ದರು.

ಇದರ ಬೆನ್ನಲ್ಲೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೆಯು ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ರೈತರ ಪ್ರತಿಭಟನೆಗೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ. ಇದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!