ಜೈಲಿನಲ್ಲಿ ನಾನಿದ್ದ ಕೋಣೆ, ಸ್ನಾನದ ಕೊಠಡಿಯಲ್ಲೂ ಕ್ಯಾಮೆರಾ ಇಟ್ಟಿದ್ರು: ಮಾಜಿ ಪಿಎಂ ಪುತ್ರಿ ಆರೋಪ!

By Suvarna NewsFirst Published Nov 13, 2020, 3:45 PM IST
Highlights

ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್‌ನ ಉಪಾಧ್ಯಕ್ಷೆ ಮರಿಯಮ್ ನವಾಜ್ ಷರೀಫ್ ಗಂಭೀರ ಆರೋಪ| ತಾನು ಜೈಲಿನಲ್ಲಿದ್ದಾಗ ಅಧಿಕಾರಿಗಳು ತನ್ನ ಸೆಲ್ ಹಾಗೂ ಬಾತ್‌ರೂಂಗೆ ಕ್ಯಾಮೆರಾ ಅಳವಡಿಸಿದ್ದರು| ಚೌಧರಿ ಶುಗರ್ ಮಿಲ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿ ಜೈಲು ಸೇರಿದ್ದ ಮರಿಯಮ್

ಇಸ್ಲಮಾಬಾದ್(ನ.13): ಪಾಕಿಸ್ತಾನ ಮಾಜಿ ಪ್ರಧಾನ ಮಂತ್ರಿ ನಾವಜ್ ಷರೀಫ್ ಮಗಳು ಹಾಗೂ ಅವರ ಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್‌ನ ಉಪಾಧ್ಯಕ್ಷೆ ಮರಿಯಮ್ ನವಾಜ್ ಷರೀಫ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ತಾನು ಜೈಲಿನಲ್ಲಿದ್ದಾಗ ಅಧಿಕಾರಿಗಳು ತನ್ನ ಸೆಲ್ ಹಾಗೂ ಬಾತ್‌ರೂಂಗೆ ಕ್ಯಾಮೆರಾ ಅಳವಡಿಸಿದ್ದರು ಎಂದು ಆರೋಪಿಸಿದ್ದಾರೆ. ಮರಿಯಮ್ ಓರ್ವ ಸಂಸದೆಯೂ ಹೌದು.

ಜಿಯೋ ನ್ಯೂಸ್ ಅನ್ವಯ ಇತ್ತೀಚೆಗಷ್ಟೇ ನೀಡಿರುವ ಸಂದರ್ಶನದಲ್ಲಿ ಮರಿಯಮ್ ನವಾಜ್ ಷರೀಫ್ ಜೈಲಿನಲ್ಲಿ ತಾವು ಎದುರಿಸಿದ್ದ ಸೌಲಭ್ಯ ಕೊರತೆ ಬಗ್ಗೆ ಮಾತನಾಡಿದ್ದಾರೆ. ಮರಿಯಮ್ ಕಳೆದ ವರ್ಷ ಚೌಧರಿ ಶುಗರ್ ಮಿಲ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿ ಜೈಲು ಸೇರಿದ್ದರು. ಹೀಗಿರುವಾಗ ಪಾಕಿಸ್ತಾನದ ಇಮ್ರಾನ್ ಸರ್ಕಾರದ ವಿರುದ್ಧ ಕಿಡಿ ಕಾರಿದ ಮರಿಯಮ್ ನಾನು ಜೈಲಿಗೆ ಹೋಗಿದ್ದೇನೆ. ಈ ವಿಚಾರದ ಬಗ್ಗೆ ಮಾತನಾಡುವುದಾದರೆ ಯಾವ ರೀತಿ ನನ್ನ, ಓರ್ವ ಮಹಿಳೆ ಜೊತೆ ನಡೆಸಿಕೊಂಡಿದ್ದರೆಂದು ವಿವರಿಸಿದರೆ ಅವರು ತಮ್ಮ ಮುಖವನ್ನೂ ಬೇರೆಯವರಿಗೆ ತೋರಿಸಲು ಹಿಂಜರಿಯುತ್ತಾರೆ' ಎಂದಿದ್ದಾರೆ.

ಇಮ್ರಾನ್ ನೇತೃತ್ವದ PTI ಸರ್ಕಾರದ ವಿರುದ್ಧ ಕಿಡಿ ಕಾರಿರುವ ಮರಿಯಮ್ ಅಧಿಕಾರಿಗಳು ಕೋಣೆಯೊಡೆದು ನನ್ನ ತಂದೆ ನವಾಜ್ ಷರೀಫ್‌ ಎಂದುರು ನನ್ನನ್ನು ಬಂಧಿಸುತ್ತಾರೆಂದಾದರೆ, ವೈಯುಕಗ್ತಿಕವಾಗಿ ನಿಂದಿಸುತ್ತಾರೆಂದಾದರೆ ಪಾಕಿಸ್ತಾನದಲ್ಲಿ ಮಹಿಳೆಯರು ಅದೆಷ್ಟು ಸುರಕ್ಷಿತರಾಗಿದ್ದಾರೆಂದು ನೀವೇ ಊಹಿಸಿ. ಪಾಕಿಸ್ತಾನವಾಗಲಿ ಅಥವಾ ಬೇರೆ ಯಾವುದೇಢ ದೇಶದವರಾಗಿರಲಿ ಮಹಿಳೆಯರು ಯಾವತ್ತೂ ಶಕ್ತಿಹೀನರಲ್ಲ ಎಂದಿದ್ದಾರೆ. 

click me!