ಅಮೆರಿಕ ಮಾಜಿ ಅಧ್ಯಕ್ಷನ ಆತ್ಮ,ಕತೆಯಲ್ಲಿ ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಉಲ್ಲೇಖ| ರಾಹುಲ್ ಗಾಂಧಿಯಲ್ಲಿ ಯೋಗ್ಯತೆ ಕೊರತೆ, ಮನಮೋಹನ್ ಸಿಂಗ್ ಪ್ರಾಮಾಣಿಕ ನಾಯಕ| ಸೋನಿಯಾ ಬಗ್ಗೆಯೂ ಕೃತಿಯಲ್ಲಿ ಉಲ್ಲೇಖ
ವಾಷಿಂಗ್ಟನ್(ನ.13) ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರವಾಗಿ ತಮ್ಮ ಕೃತಿಯಲ್ಲಿ ಮಹತ್ವದ ವಿಚಾರ ಬಹಿರಂಗಪಡಿಸಿದ್ದಾರೆ. ಅವರು ತಮ್ಮ ಆತ್ಮಕತೆ 'ಎ ಪ್ರಾಮಿಸ್ಡ್ ಲ್ಯಾಂಡ್'ನಲ್ಲಿ ರಾಹುಲ್ ಗಾಂಧಿ ಬಗ್ಗೆ ಉಲ್ಲೇಖಿಸಿದ್ದಾರೆ. ಇಲ್ಲಿ ಅವರು ರಾಹುಲ್ ಗಾಂಧಿಯನ್ನು ನರ್ವಸ್ ನಾಯಕ ಹಾಗೂ ಕಡಿಮೆ ಯೋಗ್ಯತೆ ಇರುವ ವ್ಯಕ್ತಿ ಎಂದೂ ಕರೆದಿದ್ದಾರೆ. ತಮ್ಮ ಈ ಕೃತಿಯಲ್ಲಿ ಒಬಾಮಾ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆಯೂ ಉಲ್ಲೇಖಿಸಿದ್ದಾರೆ.
ಈ ಇಬ್ಬರು ನಾಯಕರ ಬಗ್ಗೆ ತಮ್ಮ ಆತ್ಮಕತೆಯಲ್ಲಿ ಬರೆದಿರುವ ಒಬಾಮಾ 'ರಾಹುಲ್ ಗಾಂಧಿ ಕೋರ್ಸ್ ವರ್ಕ್ ಮಾಡಿರುವ ವಿದ್ಯಾರ್ಥಿ ಹಾಗೂ ತಮ್ಮ ಶಿಕ್ಷಕರನ್ನು ಮೆಚ್ಚಿಸುವಲ್ಲೂ ಯಶಸ್ವಿಯಾಗಿದ್ದಾರೆ. ಹೀಗಿದ್ದರೂ ಅವರಲ್ಲಿ ಒಂದೋ ಯೋಗ್ಯತೆ ಕೊರತೆ ಇದೆ. ಇಲ್ಲವೇ ಉತ್ಸಾಹದ ಕೊರತೆ ಇದೆ' ಎಂದಿದ್ದಾರೆ.
ಯೋಗ್ಯತೆ ಅಥವಾ ಉತ್ಸಾಹದ ಕೊರತೆ
ನ್ಯೂಯಾರ್ಕ್ ಟೈಮ್ಸ್ ಒಬಾಮಾರ ಈ ಕೃತಿಯ ಸಮೀಕ್ಷೆ ನಡೆಸಿದೆ. ಇದರಲ್ಲಿ ಮಾಜಿ ಅಧ್ಯಕ್ಷ ಒಬಾಮಾ ವಿಶ್ವದ ಅನೇಕ ರಾಜಕೀಯ ನಾಯಕರನ್ನು ಹೊರತುಪಡಿಸಿ ಇನ್ನೂ ಹಲವು ಇತರ ವಿಚಾರಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಸೋನಿಯಾ ಬಗ್ಗೆಯೂ ಉಲ್ಲೇಖ
ಇನ್ನು ತಮ್ಮ ಈ ಕೃತಿಯಲ್ಲಿ ಒಬಾಮಾ ರಾಹುಲ್ ಗಾಂಧಿ ಜೊತೆ ಅವರ ತಾಯಿ ಸೋನಿಯಾ ಗಾಂಧಿ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಸೋನಿಯಾ ಬಗ್ಗೆ ಬರೆದಿರುವ ಒಬಾಮಾ 'ನಮಗೆ ಚಾರ್ಲಿ ಕ್ರಿಸ್ಟ್ ಹಾಗೂ ರಹಂ ಇಮ್ಯಾನುಯೆಲ್‌ರಂತರ ಪುರುಷರ ಸೌಂದರ್ಯದ ಬಗ್ಗೆ ಹೇಳಲಾಗುತ್ತದೆ. ಆದರೆ ಮಹಿಳೆಯರ ಸೌಂದರ್ಯದ ಬಗ್ಗೆ ಅಲ್ಲ. ಇದರಲ್ಲಿ ಸಿಕ್ಕ ಒಂದು ಅಥವಾ ಎರಡು ಉದಾಹರಣೆಗಳಷ್ಟೇ ಅಪದವಾದಗಳಾಗಿವೆ. ಅದರಲ್ಲಿ ಸೋನಿಯಾ ಗಾಂಧಿ ಕೂಡಾ ಇದ್ದಾರೆ' ಎಂದಿದ್ದಾರೆ.
ಮನಮೋಹನ್ ಸಿಂಗ್ ಹೊಗಳಿದ ಒಬಾಮಾ, ಪುಟಿನ್ ಚಾಲಾಕಿ ಬಾಸ್!
ಅಮೆರಿಕದ ಮಾಜಿ ರಕ್ಷಣಾ ಸಚಿವ ಬಾಬ್ ಗೇಟ್ಸ್ ಹಾಗೂ ಭಾರತದ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಇಬ್ಬರಲ್ಲೂ ಪ್ರಾಮಾಣಿಕತೆ ಇದೆ ಎಂದಿದ್ದಾರೆ. ಇನ್ನು ರಷ್ಯಾ ಅಧ್ಯಕ್ಷ ಪುಟಿನ್ ಬಗ್ಗೆ ಬರೆದಿರುವ ಒಬಾಮಾ ಇವರು ನನಗೆ ಶಿಕಾಗೋ ಮಷೀನ್ ಚಲಾಯಿಸುವ ಓರ್ವ ಶಕ್ತಿಶಾಲಿ, ಚಾಲಾಕಿ ಬಾಸ್ ನೆನಪಿಸಿಕೊಳ್ಳುವಂತೆ ಮಾಡುತ್ತಾರೆ. ಶಾರೀರಿಕವಾಗಿ ಸಾಧಾರಣ ವ್ಯಕ್ತಿಯಾಗಿದ್ದರೂ ಅವರೊಬ್ಬ ಶಕ್ತಿಶಾಲಿ ನಾಯಕ ಎಂದಿದ್ದಾರೆ.
ಒಬಾಮಾರವರ 768 ಪುಟಗಳ ಈ ಕೃತಿ ನವೆಂಬರ್ 17 ರಂದು ಮಾರುಕಟ್ಟೆಗೆ ಬರಲಿದೆ. ಅಮೆರಿಕದ ಮೊದಲ ಆಫ್ರಿಕನ್-ಅಮೆರಿಕನ್ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಅಧಿಕಾರವಧಿಯಲ್ಲಿ ಎರಡು ಬಾರಿ 2010 ಹಾಗೂ 2015ರಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದರು.