
ಇಸ್ಲಾಂ ಧರ್ಮದ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸುವುದು ಸಾರ್ವಜನಿಕ ಸ್ಥಳದಲ್ಲಿ ಸುಡುವುದು ಇನ್ನು ಕಾನೂನು ಬಾಹಿರ ಈ ಬಗ್ಗೆ ಡೆನ್ಮಾರ್ಕ್‌ನ ಸಂಸತ್ತು ಕಾಯ್ದೆಯನ್ನು ಜಾರಿಗೆ ತಂದಿದ್ದು, ಈ ಕಾಯ್ದೆಗೆ ಅಲ್ಲಿನ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿದೆ. ಕೆಲ ತಿಂಗಳುಗಳ ಹಿಂದೆ ಡೆನ್ಮಾರ್ಕ್ ಹಾಗೂ ಸ್ವೀಡನ್‌ನಲ್ಲಿ(Sweden) ಪ್ರತಿಭಟನೆ ವೇಳೆ ಇಸ್ಲಾಂ ಪವಿತ್ರ ಗ್ರಂಥ ಕುರಾನ್ ಅನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದರು. ಇದನ್ನು ಖಂಡಿಸಿ ಮುಸ್ಲಿಂ ರಾಷ್ಟ್ರಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಡೆನ್ಮಾರ್ಕ್ (Denmark) ದೇಶದ ಭದ್ರತೆ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಇದಾದ ಬಳಿಕ ಈಗ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಕುರಾನ್ (Quran) ಸುಡುವುದನ್ನು ಅಪರಾಧವಾಗಿಸುವ ಕಾಯ್ದೆ ಜಾರಿಗೆ ತಂದಿದೆ.
ಕಾಯ್ದೆ ಪ್ರಕಾರ ಕುರಾನ್ ಪ್ರತಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಸುಡುವುದು, ಅಪವಿತ್ರಗೊಳಿಸುವುದು ಅಪರಾಧವಾಗಿದೆ. ಡೆನ್ಮಾರ್ಕ್ ಹಾಗೂ ಸ್ವೀಡನ್‌ನಲ್ಲಿ ಈ ವರ್ಷ ಹಲವು ಪ್ರತಿಭಟನೆಗಳು ನಡೆದಿದ್ದವು. ಈ ಪ್ರತಿಭಟನೆ ವೇಳೆ ಇಸ್ಲಾಂ ವಿರೋಧಿ (Anti Muslim) ಹೋರಾಟಗಾರರು ನಡುರಸ್ತೆಯಲ್ಲಿಯೇ ಕುರಾನ್‌ಗೆ ಬೆಂಕಿ ಇಟ್ಟಿದ್ದರು. ಇದು ದೇಶದಲ್ಲಿರುವ ಮುಸ್ಲಿಮರೊಂದಿಗೆ ಸ್ಥಳೀಯರ ಉದ್ವಿಗ್ನತೆಗೆ ಕಾರಣವಾಗಿತ್ತು. ಇದರಿಂದ ಸರ್ಕಾರ ಈಗ ಕಾಯ್ದೆ ಜಾರಿಗೆ ತಂದಿದೆ. ಡೆನ್ಮಾರ್ಕ್‌ನ ಕೇಂದ್ರಿಯ ಸಮ್ಮಿಶ್ರ ಸರ್ಕಾರವು ಈ ಹೊಸ ನಿಯಮವೂ ವಾಕ್ ಸ್ವಾತಂತ್ರ್ಯದ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಆದರೆ ಬೇರೆ ರೀತಿಯಲ್ಲಿ ಧರ್ಮವನ್ನು ಟೀಕೆ ಮಾಡುವುದಕ್ಕೆ ಕಾನೂನುಬದ್ಧವಾದ ಸ್ವಾತಂತ್ರವಿದೆ ಎಂದು ಹೇಳಿದೆ.
ಸ್ವೀಡನ್ ಮತ್ತು ಡೆನ್ಮಾರ್ಕ್‌ನ ದೇಶೀಯ ಚಿಂತನೆಯ ವಿಮರ್ಶಕರುಗಳು ಈ ಕಾಯ್ದೆಯೂ ಉದಾರವಾದಿ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತವೆ ಎಂದು ದೂರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ