ಕೃಷ್ಣ ಜನ್ಮಾಷ್ಟಮಿಗೆ ಲಂಡನ್‌ನಲ್ಲಿರುವ ದೇವಸ್ಥಾನಕ್ಕೆ ರಿಶಿ ಸುನಕ್ ಕುಟುಂಬ ಸಮೇತ ಭೇಟಿ!

By Suvarna NewsFirst Published Aug 19, 2022, 4:34 PM IST
Highlights

ಬ್ರಿಟೀಷ್ ಪ್ರಧಾನಿ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಕುಟುಂಬ ಸಮೇತ ಲಂಡನ್‌ನಲ್ಲಿರುವ ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಲಂಡನ್(ಆ.19): ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಇದೀಗ ಶ್ರೀಕೃಷ್ಣನ ಆಶೀರ್ವಾದ ಪಡೆದಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಲಂಡನ್‌ನ ವ್ಯಾಟ್‌ಫೋರ್ಡ್‌ನಲ್ಲಿರುವ ಇಸ್ಕಾನ್ ಕೃಷ್ಣ ದೇಗುಲಕ್ಕೆ ರಿಷಿ ಸುನಕ್ ಹಾಗೂ ಪತ್ನಿ ಅಕ್ಷತಾ ಭೇಟಿ ನೀಡಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ ಕೃಷ್ಣನ ಆಶೀರ್ವಾದ ಪಡೆದ ರಿಷಿ ಸುನಕ್, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಭಾರತೀಯ ಮೂಲದವರಾಗಿರುವ ರಿಷಿ ಸುನಕ್ ಹಾಗೂ ಅಕ್ಷತಾ ಕೃಷ್ಣನ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.  2019ರಲ್ಲಿ ರಿಷಿ ಸುನಕ್ ಬ್ರಿಟನ್ ಸಂಸತ್ತಿನಲ್ಲಿ ಭಗವದ್ಗೀತಾ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಗಮನಸೆಳೆದಿದ್ದರು. ಭಾರತೀಯ ಸಂಪ್ರದಾಯ, ಹಬ್ಬಗಳನ್ನು ಆಚರಿಸುವ ರಿಷಿ ಸುನಕ್, ಇದೀಗ ಪ್ರಧಾನಿ ರೈಸ್ ಪೈಪೋಟಿ ನಡುವೆ ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಇಸ್ಕಾನ್ ದೇಗುಲಕ್ಕೆ ಭೇಟಿ ನೀಡಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Rishi Sunak (@rishisunakmp)

 

ರಿಷಿ ಸುನಾಕ್‌ ಬ್ರಿಟನ್‌ ಪ್ರಧಾನಿಯಾಗುವ ಸಾಧ್ಯತೆ ಶೇ.10ಕ್ಕೆ ಕುಸಿತ!
ಭಾರತೀಯ ಮೂಲದ ರಿಷಿ ಸುನಾಕ್‌ ಬ್ರಿಟನ್ನಿನ ಪ್ರಧಾನಿಯಾಗುವ ಸಾಧ್ಯತೆ ಶೇ.10ಕ್ಕೆ ಕುಸಿದಿದೆ. ಅದೇ ವೇಳೆ, ಕನ್ಸರ್ವೇಟಿವ್‌ ಪಕ್ಷದಲ್ಲಿನ ಅವರ ಪ್ರತಿಸ್ಪರ್ಧಿ ಹಾಗೂ ಬ್ರಿಟನ್ನಿನ ಹಾಲಿ ವಿದೇಶಾಂಗ ಸಚಿವೆ ಲಿಸ್‌ ಟ್ರಸ್‌ ನೂತನ ಪ್ರಧಾನಿಯಾಗುವ ಸಾಧ್ಯತೆ ಶೇ.90ಕ್ಕೆ ಏರಿಕೆಯಾಗಿದೆ. ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಜೀನಾಮೆ ಪ್ರಕಟಿಸಿರುವುದರಿಂದ ಹೊಸ ಪ್ರಧಾನಿಯ ಆಯ್ಕೆಗೆ ಕನ್ಸರ್ವೇಟಿವ್‌ ಪಕ್ಷದಲ್ಲಿ ಆರು ವಾರಗಳ ಪ್ರಕ್ರಿಯೆ ಜಾರಿಯಲ್ಲಿದೆ. ಅದು ಬಹುತೇಕ ಕೊನೆಯ ಹಂತಕ್ಕೆ ಬಂದಿದ್ದು, ಲಿಜ್‌ ಟ್ರಸ್‌ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಬೆಟ್ಟಿಂಗ್‌ ಸಂಸ್ಥೆ ಸ್ಮಾರ್ಕೆಟ್ಸ್‌ ಪ್ರಕಾರ ಲಿಜ್‌ಗೆ ಶೇ.90 ಹಾಗೂ ಹಾಗೂ ಸುನಾಕ್‌ಗೆ ಶೇ.10ರಷ್ಟು‘ಚಾನ್ಸ್‌’ ಇದೆ. ನೂತನ ಪ್ರಧಾನಿ ಹುದ್ದೆಗೆ ಲಿಜ್‌ ಮತ್ತು ಸುನಕ್‌ ಇಬ್ಬರೇ ಶಾರ್ಚ್‌ಲಿಸ್ಟ್‌ ಆದಾಗ ಸುನಾಕ್‌ ಗೆಲ್ಲುವ ಸಾಧ್ಯತೆಗಳು ಹೆಚ್ಚಿದ್ದವು. ಆದರೆ ಈಗ ಪರಿಸ್ಥಿತಿ ಉಲ್ಟಾಆಗಿದೆ. ಸೆ.5ರಂದು ನೂತನ ಪ್ರಧಾನಿಯ ಹೆಸರು ಪ್ರಕಟವಾಗಲಿದೆ.

 

ದೆಹಲಿ ಸಿಎಂ ಕೇಜ್ರಿವಾಲ್‌ ರೀತಿಯಲ್ಲಿ ಬ್ರಿಟನ್‌ಗೆ ಫ್ರೀ ಗಿಫ್ಟ್‌ ಘೋಷಣೆ ಮಾಡಿದ ರಿಷಿ ಸುನಕ್‌!

ಭಾರತದಲ್ಲಿ ಗಳಿಸಿದ ಹಣಕ್ಕೂ ಬ್ರಿಟನ್‌ಗೆ ತೆರಿಗೆ ಕಟ್ಟುವೆ: ಅಕ್ಷತಾ ಮೂರ್ತಿ
ರಿಷಿ ಸುನಕ್‌ ಅವರ ಪತ್ನಿ ಅಕ್ಷತಾ ಮೂರ್ತಿ ತಾವು ಭಾರತದಲ್ಲಿ ಗಳಿಸಿದ ಆದಾಯಕ್ಕೂ ಬ್ರಿಟನ್‌ ಸರ್ಕಾರಕ್ಕೆ ತೆರಿಗೆ ಪಾವತಿಸುವುದಾಗಿ ಪ್ರಕಟಿಸಿದ್ದಾರೆ. ತನ್ಮೂಲಕ ನಾನ್‌-ಡೊಮಿಸಿಲ್‌ ಸ್ಟೇಟಸ್‌ನ ಅಪಬಳಕೆ ಮಾಡಿಕೊಂಡು ತೆರಿಗೆ ಪಾವತಿಸದೆ ತಪ್ಪಿಸಿಕೊಂಡಿದ್ದಾರೆ ಎಂಬ ವಿವಾದಕ್ಕೆ ಇತಿಶ್ರೀ ಹಾಡಲು ಯತ್ನಿಸಿದ್ದಾರೆ. 42 ವರ್ಷದ ಅಕ್ಷತಾ ಮೂರ್ತಿ ಬ್ರಿಟನ್‌ನಲ್ಲಿ ಒಂಭತ್ತು ವರ್ಷದಿಂದ ಪತಿಯ ಜೊತೆ ನೆಲೆಸಿದ್ದಾರೆ. ಅವರು ಇಸ್ಫೋಸಿಸ್‌ನಲ್ಲಿ ಶೇ.0.9 ಷೇರು ಹೊಂದಿದ್ದಾರೆ. ಅದಕ್ಕೆ ನೂರಾರು ಕೋಟಿ ರು. ಡಿವಿಡೆಂಡ್‌ ಗಳಿಸುತ್ತಾರೆ. ಆ ಹಣಕ್ಕೆ ಅವರು ಬ್ರಿಟನ್‌ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿಲ್ಲ ಎಂದು ಇತ್ತೀಚೆಗೆ ವಿವಾದವಾಗಿತ್ತು.

click me!