Omicron Variant: ಮೊದಲ ಬಲಿ ಪಡೆದುಕೊಂಡ ಒಮಿಕ್ರೋನ್

By Suvarna NewsFirst Published Dec 14, 2021, 12:31 AM IST
Highlights

*ಒಮಿಕ್ರೊನ್ ಗೆ ಮೊದಲ ಬಲಿ
* ಬ್ರಿಟನ್‌ನಲ್ಲಿ ವಿಶ್ವದ ಪ್ರಥಮ ಸಾವು ವರದಿ
* ಹಲವು ದೇಶಗಳಲ್ಲಿ ಮತ್ತೆ ಸೋಂಕು ಹೆಚ್ಚಳ

ಲಂಡನ್(ಡಿ. 13) ರೂಪಾಂತರಿ ಒಮಿಕ್ರೋನ್ (Omicron Variant )ಕೊರೋನಾದ (Coronavirus) ರೀತಿ ಪ್ರಾಣಕ್ಕೆ ಸಂಚಕಾರ ತರುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಇದೀಗ ಒಮಿಕ್ರೋನ್  ಮೊದಲ ಬಲಿ ಪಡೆದುಕೊಂಡಿದೆ. ಇಂಗ್ಲೆಂಡ್ ನಿಂದ (ಎನಗಲಾನದ) ಸುದ್ದಿ ವರದಿಯಾಗಿದೆ.

ರೂಪಾಂತರಿ ವೈರಸ್ ಸೋಂಕಿನಿಂದ ಲಂಡನ್‌ ನಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಒಮಿಕ್ರೋನ್ ನಿಂದ  ಸಾವನ್ನಪ್ಪಿದ (Death)ಮೊದಲ ಪ್ರಕರಣ ಇದಾಗಿದೆ ಎಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ (British PM Boris Johnson) ಅಧಿಕೃತವಾಗಿ ಪ್ರಕಟಿಸಿದ್ದಾರೆ..

 

ಪಶ್ಚಿಮ ಲಂಡನ್‍ನ ವ್ಯಾಕ್ಸಿನೇಷನ್ ಕ್ಲಿನಿಕ್‍ಗೆ ಭೇಟಿ ನೀಡಿದ ಬೋರಿಸ್ ಜಾನ್ಸನ್, ರೂಪಾಂತರಿ ಸೋಂಕಿನಿಂದವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ. ಕೋವಿಡ್ ಮುಂಜಾಗ್ರತಾ ಕ್ರಮ ತೆಗೆದುಕೊಂಡಿರುವ ಮೂರು ನಾಲ್ಕು ಗಂಟೆಗಳ ನಂತರ ಈ ಸಾವು ವರದಿಯಾಗಿದೆ.

Toothache Helped Detect Omicron: ಹಲ್ಲುನೋವಿನಿಂದ ಗೊತ್ತಾಯ್ತು ಒಮಿಕ್ರಾನ್‌ ಕೇಸ್‌ ಇದು ಹೇಗೆ..?

ಆಫ್ರಿಕಾ ಖಂಡದಲ್ಲಿ ಮೊದಲು ಪತ್ತೆಯಾಗಿ ಬಳಿಕ ಜಗತ್ತಿನಾದ್ಯಂತ ತಲ್ಲಣ ಮೂಡಿಸಿರುವ ಕೊರೋನಾದ ಹೊಸ ರೂಪಾಂತರಿ ಒಮಿಕ್ರೋನ್‌ ವಿಶ್ವದಲ್ಲಿ ಮೊದಲ ಬಲಿ ಪಡೆದಿದೆ. ಒಮಿಕ್ರೋನ್‌ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಸೋಮವಾರ ಪ್ರಕಟಿಸಿದ್ದಾರೆ. ಒಮಿಕ್ರೋನ್‌ ಸಾಂಕ್ರಾಮಿಕವಾದರೂ, ಅಷ್ಟೊಂದು ತೀವ್ರತೆ ಹೊಂದಿಲ್ಲ ಎಂಬ ವರದಿಗಳ ಬೆನ್ನಲ್ಲೇ ಮೊದಲ ಸಾವು ದಾಖಲಾಗಿರುವುದು ವಿಶ್ವದಾದ್ಯಂತ ಆತಂಕ ಹುಟ್ಟುಹಾಕಿದೆ.

ಈ ನಡುವೆ ಡೆಲ್ಟಾ, ಒಮಿಕ್ರೋನ್‌ ರೂಪಾಂತರಿಗಳು ಮತ್ತೆ ವಿಶ್ವದ ಹಲವಾರು ದೇಶಗಳಲ್ಲಿ ಅಬ್ಬರ ಶುರು ಮಾಡಿದ್ದು, ಭಾರೀ ಪ್ರಮಾಣದಲ್ಲಿ ಹೊಸ ಕೇಸು ಪತ್ತೆಗೆ ಕಾರಣವಾಗಿದೆ. ಇದು ಕೋವಿಡ್‌ ಮುಕ್ತಾಯದ ನಿರೀಕ್ಷೆಯಲ್ಲಿದ್ದ ವಿಶ್ವಕ್ಕೆ ಮತ್ತೆ ಅಪಾಯಕಾರಿಯಾಗಿ ಗೋಚರಿಸಿದೆ.

ಮೊದಲ ಬಲಿ:  ಹಾಲಿ ಬ್ರಿಟನ್‌ನ ಆಸ್ಪತ್ರೆಗಳಲ್ಲಿ ಒಮಿಕ್ರೋನ್‌ ಸೋಂಕು ಖಚಿತಪಟ್ಟ10 ಜನರು ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್‌ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಆದರೆ ಮೃತ ವ್ಯಕ್ತಿಯ ವಯಸ್ಸು, ಅವರು ಬೂಸ್ಟರ್‌ ಡೋಸ್‌ ತೆಗೆದುಕೊಂಡಿದ್ದರೆ ಎಂಬಿತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆಸ್ಪತ್ರೆಗೆ ದಾಖಲಾಗಿರುವ ಎಲ್ಲಾ 10 ಜನರೂ ಎರಡೂ ಡೋಸ್‌ ಲಸಿಕೆ ಪಡೆದವರೇ ಎಂಬುದು ಗಮನಾರ್ಹ.

ಈ ನಡುವೆ ದೇಶದಲ್ಲಿ ದಿನೇ ದಿನೇ ಸೋಂಕಿನ ಪ್ರಮಾಣ ಏರುತ್ತಿದ್ದು, ಒಮಿಕ್ರೋನ್‌ ಸೋಂಕು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳದೆ ಹೋದಲ್ಲಿ, 2022ರ ಏಪ್ರಿಲ್‌ ವೇಳೆಗೆ ಬ್ರಿಟನ್‌ನಲ್ಲಿ ಕನಿಷ್ಠ 2 ಲಕ್ಷದಿಂದ ಗರಿಷ್ಠ 4.50 ಲಕ್ಷ ಜನರು ಆಸ್ಪತ್ರೆಗೆ ದಾಖಲಾಗುವ ಮತ್ತು ಕನಿಷ್ಠ 25,000 ರಿಂದ ಗರಿಷ್ಠ 75,000 ಕೋವಿಡ್‌ ಸಂಬಂಧಿತ ಸಾವುಗಳು ಸಂಭವಿಸಬಹುದು ಎಂದು ಮಾದರಿ ಅಧ್ಯಯನವೊಂದು ತಿಳಿಸಿದೆ. ಇದುವರೆಗೂ ಬ್ರಿಟನ್‌ನಲ್ಲಿ 1 ಕೋಟಿಗೂ ಹೆಚ್ಚು ಜನ ಸೋಂಕಿತರಾಗಿದ್ದು, 1.46 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಕಳೆದ ಕೆಲ ತಿಂಗಳಿನಿಂದ ನಿತ್ಯವೂ ದೇಶದಲ್ಲಿ 40000-50000 ಹೊಸ ಕೇಸು ಪತ್ತೆಯಾಗುತ್ತಿವೆ.

ಮೊದಲ ಮತ್ತು 2ನೇ ಅಲೆಯಲ್ಲಿ ತತ್ತರಿಸಿದ್ದ ತತ್ತರಿಸಿದ್ದ ಹಲವು ದೇಶಗಳಲ್ಲಿ ಇದೀಗ ಮತ್ತೆ ಸೋಂಕಿನ ಎಲೆ ಎದ್ದಿರುವುದು ಆತಂಕ ಮೂಡಿಸಿದೆ. ಅಮೆರಿಕದಲ್ಲಿ ನಿತ್ಯ 40000, ಬ್ರಿಟನ್‌ನಲ್ಲಿ 45000, ಫ್ರಾನ್ಸ್‌ನಲ್ಲಿ 40000, ರಷ್ಯಾದಲ್ಲಿ 30000, ಜರ್ಮನಿಯಲ್ಲಿ 30000, ಇಟಲಿಯಲ್ಲಿ 19000 ಕೇಸು ಪತ್ತೆಯಾಗುತ್ತಿವೆ. ಇದಲ್ಲದೆ ದಕ್ಷಿಣ ಕೊರಿಯಾ, ಟರ್ಕಿ, ಹಾಲೆಂಡ್‌, ನೆದರ್ಲೆಂಡ್‌ ದೇಶಗಳಲ್ಲೂ ಮತ್ತೆ ಭಾರೀ ಪ್ರಮಾಣ ಕೇಸು ಪತ್ತೆಯಾಗಿವೆ. ಸೋಂಕಿತರ ಪೈಕಿ ಆಸ್ಪತ್ರೆ ದಾಖಲಾತಿ ಮತ್ತು ಸಾವಿನ ಪ್ರಮಾಣ ಹಿಂದಿನ ಅಲೆಗಿಂತ ಕಡಿಮೆ ಇದ್ದರೂ, ಇನ್ನೇನು ಕೋವಿಡ್‌ ಆತಂಕ ಮುಗಿಯಿತು ಅನ್ನುವ ಹೊತ್ತಿನಲ್ಲೇ ಮತ್ತೆ ಡೆಲ್ಟಾಮತ್ತು ಒಮಿಕ್ರೋನ್‌ ಪ್ರಭಾವದಿಂದಾಗಿ ಸೋಂಕು ಹೆಚ್ಚಳವಾಗಿರುವುದು ಆತಂಕ ಮೂಡಿಸಿದೆ.

ಮಹಾರಾಷ್ಟ್ರದಲ್ಲಿ ಸೋಮವಾರ ಇನ್ನೆರಡು ಒಮಿಕ್ರೋನ್‌ ಕೇಸ್‌ ಪತ್ತೆಯಾಗಿದ್ದು, ರಾಜ್ಯದಲ್ಲಿ ಪತ್ತೆಯಾದ ಒಟ್ಟು ಕೇಸ್‌ಗಳ ಸಂಖ್ಯೆ 20ಕ್ಕೆ ಏರಿದೆ.

 

click me!