
ಪ್ರಸಿದ್ಧ ಶೆಫ್ ಗಾರ್ಡೊನ್ ರಾಮ್ಸೆ ಭಾರತದಲ್ಲಿ ರೆಸ್ಟೋರೆಂಟ್ ಓಪನ್ ಮಾಡ್ತಾರಂತೆ. ಭಾರತದಲ್ಲಿ ರೆಸ್ಟೋರೆಂಟ್ ಓಪನ್ ಮಾಡೋ ಪ್ಲಾನ್‌ನಲ್ಲಿರುವ ಬ್ರಿಟಿಷ್ ಶೆಫ್ ರೆಸ್ಟೋರೆಂಟ್ ಕೇರಳದಲ್ಲಿ ಆರಂಭವಾಗಲಿದೆ ಎಂಬ ಸುದ್ದಿ ಇದೆ.
ಭಾರತ ಹಾಗೂ ಭಾರತದ ವೈವಿಧ್ಯತೆ ಬಗ್ಗೆ ಅತೀವ ಪ್ರೀತಿ ಇದೆ. ಇಲ್ಲಿ ನನಗೆ ರೆಸ್ಟೋರೆಂಟ್ ಓಪನ್ ಮಾಡಬೇಕು ಎಂದು ಗೋರ್ಡನ್ ರಾಮ್ಸೆ ಹೇಳಿದ್ದಾರೆ. ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ವಿಮಕ್ಕೆ ವೈವಿಧ್ಯ ಆಹಾರ ಪದ್ಧತಿ ಇರುವಂತಹ ಕೆಲವೇ ಕೆಲವು ರಾಷ್ಟ್ರಗಳಿವೆ.
ಮೃತದೇಹ ರಕ್ಷಣೆಗೆ ಬಳಸೋ ಫಾರ್ಮಲಿನ್ ಮೀನಿಗೂ ಬಳಸ್ತಾರೆ, ಸೀಫುಡ್ ಸೇವಿಸುವಾಗ ಇರಲಿ ಎಚ್ಚರ
ಭಾರತದಲ್ಲಿ ಪ್ರತಿ ರಾಜ್ಯ, ಪ್ರತಿ ಪ್ರದೇಶವೂ ಅದರದ್ದೇ ಆದ ಆಹಾರ ವೈವುಧ್ಯತೆ ಹೊಂದಿದೆ. ನಾನು ಕಳೆದ ಹಲವಾರು ವರ್ಷಗಳಿಂದ ಭಾರತಕ್ಕೆ ಬರುತ್ತಿದ್ದೇನೆ. ಪ್ರತಿ ಬಾರಿ ಬಂದಾಗಲೂ ಹೊಸತೇನೋ ಸಿಗುತ್ತದೆ.
ಸ್ಥಳೀಯ ಜನರ ಪ್ರೀತಿಯೇ ನನ್ನನ್ನು ಮತ್ತೆ ಮತ್ತೆ ಇಲ್ಲಿಗೆ ಸೆಳೆಯುತ್ತದೆ. ನಾನು ಭಾರತೀಯರಿಗಾಗಿ ಭಾರತದಲ್ಲಿ ರೆಸ್ಟೋರೆಂಟ್ ತೆರಯಬೇಕು ಎಂದಿದ್ದಾರೆ. ಕೊರೋನಾ ವೈರಸ್ ಕಾಣಿಸಿಕೊಳ್ಳುವ ಮುನ್ನ ಗಾರ್ಡೊನ್ ದಕ್ಷಿಣ ಭಾರತದ ಪ್ರಸಿದ್ಧ ಹಿಲ್‌ಸ್ಟೇಷನ್ ಕೊಡಗಿಗೆ ಭೇಟಿ ನೀಡಿದ್ದರು.
ಮಜ್ಜಿಗೆ ಯಾ ಲಸ್ಸಿ : ತೂಕ ಇಳಿಸಲು ಯಾವುದು ಒಳ್ಳೆಯದು?
ನ್ಯಾಷನಲ್ ಜಿಯೋಗ್ರಫಿಕ್ಸ್‌ನ ಗಾರ್ಡೊನ್ ರಾಮ್ಸೆ ಅನ್‌ಚಾರ್ಟಡ್‌ನ ಎರಡನೇ ಸೀಸನ್ ಶೂಟಿಂಗ್‌ಗಾಗಿ ಕೊಡಗಿಗೆ ಬಂದಿದ್ದರು. ಕೊಡಗಿನ ಸ್ಥಳೀಯ ಮಹಿಳೆಯರಿಗಾಗಿ ಗಾರ್ಡೊನ್ ಪ್ರಸಿದ್ಧ 'ಪಂದಿ ಕರಿ' (ಪೋರ್ಕ್ ಕರಿ) ತಯಾರಿಸಿ ಕೊಟ್ಟಿದ್ದರು. ಇನ್ನು ಕೇರಳದ ಹಲವು ಭಾಗಗಳಲ್ಲಿಯೂ ಶೂಟ್ ಮಾಡಿದ್ದರು.
ದಕ್ಷಿಣ ಭಾರತ ಅಂದ್ರೆ ಬರೀ ಸ್ಪೈಸಸ್. ಅಲ್ಲಿನ ಮಸಾಲೆಗಳ ಪರಿಮಳವೇ ಅದ್ಭುತವಾಗಿದೆ. ಈ ಬಾರಿ ಭಾರತಕ್ಕೆ ಭೇಟಿ ನೀಡಿದ್ದು ಮರೆಯಲಾಗದ ಅನುಭವ. ನಾನು ಮಹಿಳಾ ಅಡುಗೆಯವರೊಂದಿಗೆ ಕೆಲಸ ಮಾಡಿದೆ. ನಿಜಕ್ಕೂ ಅವರು ನನಗಿಂತ ಭಾರೀ ಎಕ್ಸ್‌ಪರ್ಟ್. ಅಂತಹ ಬಿಸಿ ವಾತಾವರಣದಲ್ಲಿ ಅಡುಗೆ ಮಾಡುವಾಗಲೂ ಅವರು ಬೆವರುತ್ತಿರಲಿಲ್ಲ ಎಂದಿದ್ದಾರೆ. ಶಿಕ್ಷಣದಲ್ಲಿ ಆಹಾರದ ಬಗ್ಗೆ ಪಠ್ಯ ಸೇರಿಸುವ ಪ್ರಾಮುಖ್ಯತೆ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಕಂಗನಾ ರನೌತ್ ತಿಂದ ನಮ್ಮ ಕರಾವಳಿಯ ಫುಡ್ ಯಾವ್ದು ಗೊತ್ತಾ?
ನಾನು ಪ್ರತಿದಿನ ಎದ್ದಾಗ ಸುಸ್ಥಿರತೆ ಬಗ್ಗೆ ಯೋಚಿಸುತ್ತೇನೆ. ಕಾಲಮಾನದ ಅಡುಗೆ, ಆರೋಗ್ಯಕರ ಆಹಾರದ ಬಗ್ಗೆ ಚಿಂತಿಸುತ್ತೇನೆ. ಬೆಳೆಯುವ ಮಕ್ಕಳ ದೇಹದಲ್ಲಿ ಸರಿಯಾದ ಸಕ್ಕರೆ ಪ್ರಮಾಣ, ಡಯಾಬಿಟೀಸ್‌ನಂತಹ ರೋಗದ ಬಗ್ಗೆ ಯೋಚಿಸುತ್ತೇನೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ