- 69 ವರ್ಷದ ಬ್ರಿಟನ್ ರಾಣಿ ಆಳ್ವಿಕೆ ಅಂತ್ಯ?
- 95ರ ಹರೆಯದ ರಾಣಿ ಎಲಿಜಬೆತ್ ತೆರೆಮರೆಯತ್ತ
- ಇತ್ತೀಚಿನ ದಿನದಲ್ಲಿ ರಾಣಿಗೆ ಅನಾರೋಗ್ಯ ಸಮಸ್ಯೆ
- ಹಿರಿಯ ಸೊಸೆ ಕ್ಯಾಮಿಲ್ಲಾಗೆ ಪಟ್ಟಸಾಧ್ಯತೆ
ಲಂಡನ್ (ನ. 15): ಇತ್ತೀಚೆಗೆ ಸಾರ್ವಜನಿಕ ಕಾರ‍್ಯಕ್ರಮಗಳಿಗೆ ಗೈರಾಗುತ್ತಿದ್ದಾರೆ. ಹೀಗಾಗಿ ಎಲಿಜಬೆತ್ ಸ್ವಯಂಪ್ರೇರಿತರಾಗಿ ತೆರೆಮರೆಗೆ ಸರಿಯುತ್ತಿದ್ದಾರೆಯೇ ಎಂಬ ಸಂದೇಹ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಣಿ ಎಲಿಜಬೆತ್ ಕುರಿತ ಕುತೂಹಲಕಾರಿ ಸಂಗತಿಗಳು ಮತ್ತು ಮುಂದಿನ ಬ್ರಿಟನ್ ರಾಣಿ ಯಾರಾಗಬಹುದು ಎಂಬ ವಿವರ ಇಲ್ಲಿದೆ.
ಪುತ್ರ ಚಾರ್ಲ್ಸ್, ಸೊಸೆ ಕ್ಯಾಮಿಲಾ ಸಕ್ರಿಯ
ಜಗತ್ತಿನ ಪ್ರಾಚೀನ ಮತ್ತು ಸುದೀರ್ಘ ಆಡಳಿತ ನಡೆಸಿರುವ ಬ್ರಿಟನ್ ರಾಜ ಮನೆತನದ ರಾಣಿ ಎಲಿಜಬೆತ್ ಅವರಿಗೆ ವಯಸ್ಸಾಗಿರುವ ಕಾರಣ ಮತ್ತು ಅನಾರೋಗ್ಯ ಕಾರಣ ಇತ್ತೀಚೆಗೆ ಸಾರ್ವಜನಿಕ ಕಾರ‍್ಯಕ್ರಮಗಳಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಣಿಯ ಹಿರಿಯ ಪುತ್ರ ಮತ್ತು ಉತ್ತರಾಧಿಕಾರಿ ಚಾರ್ಲ್ಸ್ ರಾಣಿಯ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಿದ್ದಾರೆ. ಅಧಿಕೃತ ಸಭೆ, ಸಮಾರಂಭಗಳು ಸೇರಿದಂತೆ ರಾಜಮನೆತನದ ಜವಾಬ್ದಾರಿಗಳನ್ನು ತಾವೇ ನಿರ್ವಹಿಸುತ್ತಿದ್ದಾರೆ.
ಭಾರತಕ್ಕೊಂದು ಗುಡ್‌ನ್ಯೂಸ್: ಆರ್ಥಿಕತೆಯಲ್ಲಿ ಚೇತರಿಕೆ, ಅಂಕಿ ಅಂಶಗಳೇ ಸಾಕ್ಷಿ!
ಆದರೆ ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಚಾರ್ಲ್ಸ್ ಪತ್ನಿ ಕ್ಯಾಮಿಲ್ಲಾ ಹೆಚ್ಚಾಗಿ ರಾಜಮನೆತನದ ಅಧಿಕೃತ ಕಾರ‍್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅದು ಜೇಮ್ಸ್ ಬಾಂಡ್ ಸಿನಿಮಾದಿಂದ ಹಿಡಿದು ಇತ್ತೀಚೆಗೆ ನಡೆದ ಜಿ-7 ಮತ್ತು ವಿಶ್ವಸಂಸ್ಥೆಯ ಹವಾಮಾನ ಶೃಂಗದವರೆಗೂ ಸಾಬೀತಾಗಿದೆ. ಹೀಗಾಗಿ ಭವಿಷ್ಯದಲ್ಲಿ ಎಲಿಜಬೆತ್ ಸ್ಥಾನಕ್ಕೆ ಕ್ಯಾಮಿಲಾ ಬರಬಹುದು ಎಂಬ ಅನುಮಾನ ದಟ್ಟವಾಗಿದೆ.
ಕ್ಯಾಮಿಲ್ಲಾ ಯಾರು?
ಬ್ರಿಟಿಷ ರಾಜವಂಶದ ಸದಸ್ಯೆ, ರಾಣಿ ಎಲಿಜಬೆತ್
ಹಿರಿಯ ಮಗ ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲ್ಲಾ (74) ಅವರನ್ನು ಡಚ್ಚಸ್ ಆಫ್ ಕಾರ್ನ್‌ವಾಲ್ ಎಂದೂ ಕರೆಯುತ್ತಾರೆ. ರಾಜ ಮನೆತನದ ಸೊಸೆ ಆಗುವ ಮುನ್ನ 1973ರಲ್ಲಿ ಬ್ರಿಟಿಷ್ ಸೇನಾ ಅಧಿಕಾರಿಯನ್ನು ಅವರು ವಿವಾಹವಾಗಿ 1995ರಲ್ಲಿ ವಿಚ್ಛೇದನ ನೀಡಿದ್ದರು. ಬಳಿಕ 2005ರಲ್ಲಿ ಚಾರ್ಲ್ಸ್ರನ್ನು ವಿವಾಹವಾದರು. ಇತ್ತೀಚೆಗೆ ಎಲಿಜಬೆತ್ ಪತಿ ಪ್ರಿನ್ಸ್ ಫಿಲಿಪ್ ನಿಧನದ ನಂತರ ಚಾರ್ಲ್ಸ್ ಮುನ್ನೆಲೆಗೆ ಬರುತ್ತಿದ್ದಾರೆ. ಅವರ ಜೊತೆಗೆ ಕ್ಯಾಮಿಲಾ ಸಹ ರಾಜಮನೆತನದ ಎಲ್ಲಾ ಚಾರಿಟಿ ಕಾರ‍್ಯಕ್ರಮಗಳು ಅಧಿಕೃತ ಕಾರ‍್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕ್ಯಾಮಿಲ್ಲಾ ‘ಕೌನ್ಸಲರ್ ಆಫ್ ಸ್ಟೇಟ್’ ಆಗಬಹುದೆಂಬ ಊಹೆಗಳು ಗರಿಗೆದರುತ್ತಿವೆ.
ಹದಗೆಟ್ಟ ಎಲಿಜಬೆತ್ ಆರೋಗ್ಯ
ಬ್ರಿಟನ್ ರಾಣಿ ಎಲಿಜಬೆತ್ ಅವರಿಗೆ ಇದೀಗ 95 ವರ್ಷ ವಯಸ್ಸು. ಇತ್ತೀಚೆಗಷ್ಟೇ ಪತಿ ಪ್ರಿನ್ಸ್ ಫಿಲಿಪ್ ನಿಧನ ಹೊಂದಿದ್ದಾರೆ. ವಯಸ್ಸಾಗಿದ್ದರೂ ಬಹಳ ಉತ್ಸುಕರಾಗಿರುವ ಎಲಿಜಬೆತ್ ಕೆಲ ವರ್ಷಗಳ ಬಳಿಕ ಇತ್ತೀಚೆಗೆ ಒಂದು ರಾತ್ರಿಯನ್ನು ಆಸ್ಪತ್ರೆಯಲ್ಲಿ ಕಳೆದಿದ್ದರು. ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.
2018ರಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಹಾಗೂ 2003ರಲ್ಲಿ ಮಂಡಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲದೆ ಭಾನುವಾರ ಬೆನ್ನು ಉಳುಕಿ ಮಹತ್ವದ ಸಮಾರಂಭವೊಂದಕ್ಕೆ ಗೈರಾಗಿದ್ದಾರೆ. ಆರೋಗ್ಯ ಸಂಬಂಧಿತ ವಿಚಾರಗಳನ್ನು ಅರಮನೆ ಆಡಳಿತವು ಖಾಸಗಿ ವಿಷಯ ಎಂದು ಪರಿಗಣಿಸುತ್ತಿದ್ದು, ಹೆಚ್ಚು ಚರ್ಚೆ ಅಥವಾ ವಿವರಣೆ ನೀಡುವುದಿಲ್ಲ. ಆದಾಗ್ಯೂ ರಾಣಿಯ ಬಹುತೇಕ ಜವಾಬ್ದಾರಿಗಳನ್ನು ಇತ್ತೀಚೆಗೆ ಮಕ್ಕಳು ನಿಭಾಯಿಸುತ್ತಿರುವುದು ರಾಣಿಯು ತೆರೆಮರೆಗೆ ಸರಿಯುತ್ತಿದ್ದಾರೆಯೇ ಎಂಬ ಸಂದೇಹಕ್ಕೆ ಕಾರಣವಾಗಿದೆ.
ಇದೊಂದೇ ರಾಜ್ಯದ ಚಿಂತೆ, ಭಾರತದ ಸರಾಸರಿಗಿಂತ ಶೇ. 15 ರಷ್ಟು ಹೆಚ್ಚಿದೆ Covid 19 ದರ!
ಮುಂದಿನ ವರ್ಷ ರಾಣಿಯಾಗಿ 70 ವರ್ಷ!
ಎಲಿಜಬೆತ್ ರಾಣಿಯಾಗಿ ಮುಂದಿನ ವರ್ಷಕ್ಕೆ 70 ವರ್ಷ ಪೂರ್ಣಗೊಳ್ಳುತ್ತದೆ. ಮಧ್ಯ ಲಂಡನ್‌ನ ಬ್ರೂಟನ್ ಸ್ಟ್ರೀಟ್‌ನಲ್ಲಿ ಏಪ್ರಿಲ… 21, 1926ರಂದು ಜನಿಸಿದ ಎಲಿಜಬೆತ್ ರಾಣಿಯಾಗುವ ನಿರೀಕ್ಷೆಯಿಲ್ಲದೆ ಬೆಳೆದರು. ಆಕೆಯ ತಂದೆ ಜಾಜ್‌ರ್
ಅವರ ಹಿರಿಯ ಸಹೋದರ ಎಡ್ವರ್ಡ್
ಅಧಿಕಾರ ತ್ಯಜಿಸಿದಾಗ 1952ರಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಸಿಂಹಾಸನಕ್ಕೆ ಏರಿದರು. ಈ ಮೂಲಕ ಅತ್ಯಂತ ಸುದೀರ್ಘ ಕಾಲ ಬ್ರಿಟನ್ನಿನ ರಾಣಿ ಆಗಿರುವ ಹಿರಿಮೆ ರಾಣಿ ಎಲಿಜಬೆತ್ ಅವರಿಗಿದೆ. ಅಲ್ಲದೆ ಈ ಮೂಲಕ ಮುತ್ತಜ್ಜಿ ರಾಣಿ ವಿಕ್ಟೋರಿಯಾಳ ಅವರ ದಾಖಲೆಯನ್ನು ಮೀರಿಸಿದರು.
ಎಲಿಜಬೆತ್ ಸೀಕ್ರೆಟ್!
-ರಾಣಿ ಎಲಿಜಬೆತ್
ಶಾಲೆಗೇ ಹೋಗಿಲ್ಲ. ಹಾಗಂತ ಅವರು ಅನಕ್ಷರಸ್ಥರೇನಲ್ಲ. ಮನೆಯಲ್ಲಿಯೇ ಖಾಸಗಿಯಾಗಿ ಅವರಿಗೆ ಶಿಕ್ಷಣ ನೀಡಲಾಗಿದೆ.
-1952ರಲ್ಲಿ ಬ್ರಿಟನ್ ರಾಣಿಯಾಗಿ ಪಟ್ಟಕ್ಕೇರುತ್ತಾರೆ. ಈ ಸಂದರ್ಭವನ್ನು 2 ಕೋಟಿಗೂ ಅಧಿಕ ಮಂದಿ ದೂರದರ್ಶನ ಮೂಲಕ ವೀಕ್ಷಿಸಿದ್ದರು.
-ಬೋರಿಸ್ ಜಾನ್ಸನ್ ಸೇರಿ 14 ಬ್ರಿಟನ್ ಪ್ರಧಾನಿಗಳು ಇವರ ಅವಧಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
- ವರ್ಷಕ್ಕೆ ಎರಡು ಬಾರಿ ಹುಟ್ಟುಹಬ್ಬ ಆಚರಿಸುತ್ತಾರೆ. ಏಪ್ರಿಲ್ 21 ಮತ್ತು ಜೂನ್ 11ರಂದು ಆಚರಿಸಿಕೊಳ್ಳುತ್ತಾರೆ.
-ಬ್ರಿಟನ್‌ನಲ್ಲಿ ವಾಹನ ಪರವಾನಗಿ ಇಲ್ಲದೆ ವಾಹನ ಚಲಾಯಿಸಲು ಅನುಮತಿ ಪಡೆದ ಏಕೈಕ ವ್ಯಕ್ತಿ ರಾಣಿ ಎಲಿಜಬೆತ್. ಈಗಲೂ ಪರವಾನಗಿ ಇಲ್ಲದೆ ಕಾರು ಚಲಾಯಿಸುತ್ತಾರೆ.
-ಕುದುರೆ ಸವಾರಿ, ಪಾರಿವಾಳ ರೇಸಿಂಗ್, ಫುಟ್‌ಬಾಲ್ ಎಂದರೆ ಇಷ್ಟ.
-ರಾಣಿಯಾದಾಗಿನಿಂದ 260 ಸಾಗರೋತ್ತರ ಪ್ರವಾಸ ಕೈಗೊಂಡಿದ್ದಾರೆ.
-ರಾಣಿಯಾದ ಕಾರಣದಿಂದ ತೆರಿಗೆ ಕಟ್ಟಬೇಕಾದ ಅಗತ್ಯ ಇಲ್ಲ. ಆದರೆ 1993ರಿಂದ ಅವರು ತೆರಿಗೆ ಪಾವತಿಸುತ್ತಿದ್ದಾರೆ.