Covid Crisis| ಚೀನಾದಲ್ಲಿ ಮಕ್ಕಳ ಹೊಸ ಬಟ್ಟೆಯಿಂದ ಸೋಂಕು ಭೀತಿ!

Published : Nov 13, 2021, 09:57 AM ISTUpdated : Nov 13, 2021, 10:00 AM IST
Covid Crisis| ಚೀನಾದಲ್ಲಿ ಮಕ್ಕಳ ಹೊಸ ಬಟ್ಟೆಯಿಂದ ಸೋಂಕು ಭೀತಿ!

ಸಾರಾಂಶ

* ಮಕ್ಕಳ ಬಟ್ಟೆಉತ್ಪಾದಕ ಕಂಪನಿಯ 3 ನೌಕರರಿಗೆ ಸೋಂಕು * ಚೀನಾದಲ್ಲಿ ಮಕ್ಕಳ ಹೊಸ ಬಟ್ಟೆಯಿಂದ ಸೋಂಕು ಭೀತಿ! * ಈ ಉಡುಪು ಖರೀದಿಸಿದವರು ಪರೀಕ್ಷಿಸಿಕೊಳ್ಳಿ: ಚೀನಾ ಸರ್ಕಾರ

ಬೀಜಿಂಗ್‌(ನ.13): ಪ್ರಸಕ್ತ ವರ್ಷದ ಚೀನಾದ (China) ವಾರ್ಷಿಕ ‘ಸಿಂಗಲ್ಸ್‌ ಡೇ ಫೆಸ್ಟಿವಲ್‌’ (Singles Day Festival) ಆನ್‌ಲೈನ್‌ ಶಾಪಿಂಗ್‌ನಲ್ಲಿ ಭಾಗವಹಿಸಿದ ಕೆಲ ಗ್ರಾಹಕರಿಗೂ ಕೋವಿಡ್‌ (Covid 19) ಹರಡಬಹುದು ಎಂದು ಚೀನಾ (China) ಎಚ್ಚರಿಕೆ ನೀಡಿದೆ.

ಹಿಬೇ ಪ್ರಾಂತ್ಯದ ಈಶಾನ್ಯ ಭಾಗದಲ್ಲಿ ಮಕ್ಕಳ ಉಡುಪುಗಳನ್ನು ಉತ್ಪಾದಿಸುವ ಕಂಪನಿಯ ಮೂವರು ನೌಕರರಲ್ಲಿ ಸೋಂಕು ಪತ್ತೆಯಾಗಿದೆ. ಈ ಸಿಂಗಲ್ಸ್‌ ಡೇ ಫೆಸ್ಟಿವಲ್‌ ಮುಖಾಂತರ ಈ ಕಂಪನಿ ಉತ್ಪಾದಿಸಿದ ಮಕ್ಕಳ ಉಡುಪುಗಳನ್ನು ಖರೀದಿಸಿದ ಗ್ರಾಹಕರು ಸೋಂಕಿಗೆ ತುತ್ತಾಗಿರುವ ಸಾಧ್ಯತೆಯಿದೆ. ಹೀಗಾಗಿ ಈ ವಸ್ತುಗಳನ್ನು ಖರೀದಿಸಿದ ಗ್ರಾಹಕರು ಕೋವಿಡ್‌ (Covid 19) ಪರೀಕ್ಷೆಗೊಳಪಡಿಸಬೇಕು ಎಂದು ಸೂಚಿಸಲಾಗಿದೆ.

ಹೊರ ದೇಶಗಳಿಂದ ತರಿಸಿಕೊಳ್ಳಲಾಗುತ್ತಿರುವ ಘನೀಕರಿಸಿದ ಎಲ್ಲಾ ವಸ್ತುಗಳನ್ನು ಕೋವಿಡ್‌ ಪರೀಕ್ಷೆಗೊಳಪಡಿಸಲಾಗುತ್ತಿದೆ. ಹೊರ ದೇಶಗಳಿಂದ ಬರುವ ಯಾವುದೇ ವಸ್ತುಗಳನ್ನು ಸ್ವೀಕರಿಸುವ ಮುನ್ನ ಅವುಗಳನ್ನು ಸ್ಯಾನಿಟೈಸ್‌ ಮಾಡಬೇಕು. ಕಡಿಮೆ ಸೋಂಕು ಇರುವ ಸ್ಥಳಗಳಿಂದ ಬಂದಿರುವ ಪಾರ್ಸೆಲ್‌ ವಸ್ತುಗಳನ್ನು ಗ್ರಾಹಕರು ಮುಖಕ್ಕೆ ಮಾಸ್ಕ್‌, ಕೈಗೆ ಗ್ಲೌಸ್‌ಗಳನ್ನು ಧರಿಸಿಯೇ ಸ್ವೀಕರಿಸಬೇಕು ಎಂದು ಗ್ರಾಹಕರಿಗೆ ಅಧಿಕಾರಿಗಳು ಹೇಳಿದ್ದಾರೆ.

ಚೀನಾ ಸಿಂಗಲ್ಸ್‌ ಡೇ ಫೆಸ್ಟ್‌ನಲ್ಲಿ 10 ಲಕ್ಷ ಕೋಟಿ ರು. ವಸ್ತು ಖರೀದಿ!

ಪ್ರಸಕ್ತ ವರ್ಷದ ಚೀನಾದ (China) ವಾರ್ಷಿಕ ‘ಸಿಂಗಲ್ಸ್‌ ಡೇ ಫೆಸ್ಟಿವಲ್‌’ನಲ್ಲಿ ಬರೋಬ್ಬರಿ 10 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳು ಬಿಕರಿಯಾಗಿವೆ. ಈ ಮೂಲಕ ಕೊರೋನಾ ಸಾಂಕ್ರಾಮಿಕ ನಡುವೆಯೂ ಕಳೆದ ವರ್ಷಕ್ಕಿಂತ ದಾಖಲೆಯ ವ್ಯವಹಾರ ನಡೆದಿದೆ. ನ.1ರಿಂದ ನ.11ರ ವರೆಗೆ ನಡೆದ ಉತ್ಸವದಲ್ಲಿ ಆಲಿಬಾಬಾ ಕಂಪನಿಯು (Alibaba Company) 6.27 ಲಕ್ಷ ಕೋಟಿ ಗಳಿಸಿದೆ.

ಜೆಡಿ.ಕಾಂ 4.05 ಲಕ್ಷ ಕೋಟಿ ವ್ಯವಹಾರ ಮಾಡಿದೆ. ಚೀನಾದ ಸಿಂಗಲ್ಸ್‌ ಡೇ ಅನ್ನು ಜಗತ್ತಿನ ಅತಿ ದೊಡ್ಡ ಆನ್‌ಲೈನ್‌ ಶಾಪಿಂಗ್‌ (Online Shopping) ಮಾರ್ಕೆಟಿಂಗ್‌ ಫೆಸ್ಟಿವಲ್‌ ಎಂದೇ ಕರೆಯಲಾಗುತ್ತದೆ. ಈ ಉತ್ಸವದಲ್ಲಿ ಅತ್ಯಾಕರ್ಷಕ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟಕ್ಕೆ ಇಡಲಾಗುತ್ತದೆ. ಪ್ರತಿ ವರ್ಷ ನ.11ರಂದು ನಡೆಯುವ ಸಿಂಗಲ್ಸ್‌ ಡೇ ಫೆಸ್ಟ್‌ ಅನ್ನು ಜನತೆ ಅಥವಾ ಅವಿವಾಹಿತ ಚೀನೀಯರು ಹೆಚ್ಚಾಗಿ ಆಚರಿಸುತ್ತಾರೆ.

ಬೀಜಿಂಗ್‌ನಲ್ಲಿ ಎಲ್ಲ ಸಭೆ, ಕಾರ‍್ಯಕ್ರಮಕ್ಕೂ ನಿರ್ಬಂಧ

ಪ್ರಸಕ್ತ ವರ್ಷದ ಚೀನಾದ ವಾರ್ಷಿಕ ‘ಸಿಂಗಲ್ಸ್‌ ಡೇ ಫೆಸ್ಟಿವಲ್‌’ ಆನ್‌ಲೈನ್‌ ಶಾಪಿಂಗ್‌ನಲ್ಲಿ ಭಾಗವಹಿಸಿದ ಕೆಲ ಗ್ರಾಹಕರಿಗೂ ಕೋವಿಡ್‌ ಹರಡಬಹುದು ಎಂದು ಚೀನಾ ಎಚ್ಚರಿಕೆ ನೀಡಿದೆ.

ಹಿಬೇ ಪ್ರಾಂತ್ಯದ ಈಶಾನ್ಯ ಭಾಗದಲ್ಲಿ ಮಕ್ಕಳ ಉಡುಪುಗಳನ್ನು ಉತ್ಪಾದಿಸುವ ಕಂಪನಿಯ ಮೂವರು ನೌಕರರಲ್ಲಿ ಸೋಂಕು ಪತ್ತೆಯಾಗಿದೆ. ಈ ಸಿಂಗಲ್ಸ್‌ ಡೇ ಫೆಸ್ಟಿವಲ್‌ ಮುಖಾಂತರ ಈ ಕಂಪನಿ ಉತ್ಪಾದಿಸಿದ ಮಕ್ಕಳ ಉಡುಪುಗಳನ್ನು ಖರೀದಿಸಿದ ಗ್ರಾಹಕರು ಸೋಂಕಿಗೆ ತುತ್ತಾಗಿರುವ ಸಾಧ್ಯತೆಯಿದೆ. ಹೀಗಾಗಿ ಈ ವಸ್ತುಗಳನ್ನು ಖರೀದಿಸಿದ ಗ್ರಾಹಕರು ಕೋವಿಡ್‌ ಪರೀಕ್ಷೆಗೊಳಪಡಿಸಬೇಕು ಎಂದು ಸೂಚಿಸಲಾಗಿದೆ.

ಹೊರ ದೇಶಗಳಿಂದ ತರಿಸಿಕೊಳ್ಳಲಾಗುತ್ತಿರುವ ಘನೀಕರಿಸಿದ ಎಲ್ಲಾ ವಸ್ತುಗಳನ್ನು ಕೋವಿಡ್‌ ಪರೀಕ್ಷೆಗೊಳಪಡಿಸಲಾಗುತ್ತಿದೆ. ಹೊರ ದೇಶಗಳಿಂದ ಬರುವ ಯಾವುದೇ ವಸ್ತುಗಳನ್ನು ಸ್ವೀಕರಿಸುವ ಮುನ್ನ ಅವುಗಳನ್ನು ಸ್ಯಾನಿಟೈಸ್‌ ಮಾಡಬೇಕು. ಕಡಿಮೆ ಸೋಂಕು ಇರುವ ಸ್ಥಳಗಳಿಂದ ಬಂದಿರುವ ಪಾರ್ಸೆಲ್‌ ವಸ್ತುಗಳನ್ನು ಗ್ರಾಹಕರು ಮುಖಕ್ಕೆ ಮಾಸ್ಕ್‌, ಕೈಗೆ ಗ್ಲೌಸ್‌ಗಳನ್ನು ಧರಿಸಿಯೇ ಸ್ವೀಕರಿಸಬೇಕು ಎಂದು ಗ್ರಾಹಕರಿಗೆ ಅಧಿಕಾರಿಗಳು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!