ಕುಟುಂಬ ಕತೆಯ ಮೂಲಕ ಬ್ರಿಟನ್ ಮುಂದಿನ ಪ್ರಧಾನಿ ಸಾಲಿನಲ್ಲಿದ್ದೇನೆ ಎಂದು ಘೋಷಿಸಿದ ರಿಷಿ ಸುನಕ್

By Suvarna News  |  First Published Jul 8, 2022, 9:43 PM IST
  • ಕತೆಯೊಂದಿಗೆ ಮುಂದಿನ ಪ್ರಧಾನಿ ಆಕಾಂಕ್ಷಿ ಎಂದ ರಿಷಿ ಸುನಕ್
  • ಮುಂದಿನ ಪ್ರಧಾನಿ ಸಾಲಿನಲ್ಲಿ ನಿಂತಿದ್ದೇನೆ ಎಂದ ರಿಶಿ
  • ಇನ್ಫೋಸಿಸ್ ಮೂರ್ತಿ ಅಳಿಯ ರಿಷಿ ಸುನಕ್ ಮುಂದಿನ ಪ್ರಧಾನಿ?

ಲಂಡನ್(ಜು.08): ಬ್ರಿಟನ್ ಮುಂದಿನ ಪ್ರಧಾನಿ ಯಾರು ಅನ್ನೋ ಕುತೂಹಲ, ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ನಡುವೇ ಪ್ರದಾನಿ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಶಿ ಸುನಕ್ ಟ್ವಿಟರ್ ಮೂಲಕ ಹೊಸ ಘೋಷಣೆ ಮಾಡಿದ್ದಾರೆ. ಬ್ರಿಟನ್ ಕನ್ಸರ್ವೇಟೀವ್ ಪಕ್ಷದ ಮುಂದಿನ ನಾಯಕ ಹಾಗೂ ಬ್ರಿಟನ್ ಪ್ರಧಾನಿಯಾಗಲು ನಿಂತಿದ್ದೇನೆ ಎಂದಿದ್ದಾರೆ.

ವಿಡಿಯೋ ಸಂದೇಶ ನೀಡಿರುವ ರಿಷಿ ಸುನಕ್, ತಾನು ಪ್ರಧಾನಿಯಾಗಲು ಸೂಕ್ತ ಅಭ್ಯರ್ಥಿ ಎಂದಿದ್ದಾರೆ. ಇಷ್ಟೇ ಅಲ್ಲ ಪ್ರಧಾನಿಯಾದ ಬಳಿಕ ಮುಂದಿರುವ ಸವಾಲುಗಳನ್ನು ಎದುರಿಸುವ ರೂಪುರೇಶೆಯನ್ನು ತೆರೆದಿಟ್ಟಿದ್ದಾರೆ. ವಿಶೇಷ ಅಂದರೆ ರಿಷಿ ವಿಡಿಯೋದಲ್ಲಿ ತಮ್ಮ ಕುಟುಂಬದ ಕುರಿತು ಹೇಳಿದ್ದಾರೆ. ಪೋಷಕರು, ಕುಟುಂಬ, ದೇಶ ಪ್ರೇಮ, ಆರ್ಥಿಕತೆ ಕುರಿತು ಮಾತನಾಡಿದ್ದಾರೆ.

ಬ್ರಿಟನ್ ಪ್ರಧಾನಿ ಬೋರಿಸ್‌ ರಾಜಕೀಯ ಜೀವನ ಸರ್ವನಾಶಗೊಳಿಸಿದ ಐದು ವಿವಾದಗಳು!

Tap to resize

Latest Videos

ಎರಡು ವರ್ಷ ಕೊರೋನಾದಿಂದ ತತ್ತರಿಸಿದ ಸಂದರ್ಭದಲ್ಲಿ ಅತ್ಯುತ್ತಮವಾಗಿ ಆರ್ಥಿಕತೆಯನ್ನು ನಿರ್ವಹಿಸಿದ್ದೇನೆ. ಇದೀಗ ಹೊಸ ಬ್ರಿಟನ್ ಕಟ್ಟಬೇಕಿದೆ. ಹೊಸ ಆರ್ಥಿಕತೆ ಬೇಕಿದೆ ಎಂದಿದ್ದಾರೆ. ತಮ್ಮ ತಾಯಿ ಬ್ರಿಟನ್‌ಗೆ ಆಗಮಿಸಿದ ಕತೆಯಿಂದ ಹಿಡಿದು ಇದೀಗ ಪ್ರಧಾನಿಯಾಗುವ ವರೆಗಿನ ಕತೆಯನ್ನು ಪುಟ್ಟದಾಗಿ ಚೊಕ್ಕವಾಗಿ ರಿಷಿ ಹೇಳಿದ್ದಾರೆ. ಇಲ್ಲಿವರೆಗೆ ನನ್ನ ಕತೆ ಹೇಳಿದರೆ, ಮುಂದಿ ನಿಮ್ಮ ಕತೆ, ಈ ದೇಶದ ಕತೆಯನ್ನು ಮತ್ತಷ್ಟು ಸುಂದರವಾಗಿಸಬೇಕಿದೆ ಎಂದು ಹೊಸ ಭರವಸೆ ತುಂಬಿದ್ದಾರೆ.

 

I’m standing to be the next leader of the Conservative Party and your Prime Minister.

Let’s restore trust, rebuild the economy and reunite the country.

Sign up 👉 https://t.co/KKucZTV7N1 pic.twitter.com/LldqjLRSgF

— Ready For Rishi (@RishiSunak)

 

ಯುರೋಪ್‌ ಒಕ್ಕೂಟವನ್ನು ಬ್ರಿಟನ್‌ ತೊರೆದ (ಬ್ರೆಕ್ಸಿಟ್‌) ನಂತರದ ನಿರ್ವಹಣಾ ವೈಫಲ್ಯ, ಹಲವು ಹಗರಣಗಳು, ವಿವಾದಗಳಿಂದ ಕೂಡಿದ 3 ವರ್ಷಗಳ ಆಡಳಿತ ಬಳಿಕ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ನಿನ್ನೆ(ಜು.06) ಬೋರಿಸ್‌ ನಾಯಕತ್ವ ವಿರೋಧಿಸಿ ಅವರ ಸಂಪುಟದ ಸದಸ್ಯರು ಸಾಲು ಸಾಲು ರಾಜೀನಾಮೆ ನೀಡಿದ ನಂತರ ಬೊರಿತ್ ಪದತ್ಯಾಗಕ್ಕೆ ಭಾರಿ ಒತ್ತಡ ಕೇಳಿಬಂದಿತ್ತು. ಬೊರಿಸ್ ರಾಜೀನಾಮೆ ಬಳಿಕ ಮುಂದಿನ ಪ್ರಧಾನಿ ರಿಶಿ ಸುನಕ್ ಎಂದೇ ಬಿಂಬಿತವಾಗಿದೆ. 

ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷದಲ್ಲಿ ಮುಂದಿನ ಪ್ರಧಾನಿಗೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.  ಕನ್ಸರ್ವೇಟಿವ್‌ ಪಕ್ಷದ 716 ಸದಸ್ಯರ ಸಮೀಕ್ಷೆಯಲ್ಲಿ ರಕ್ಷಣಾ ಸಚಿವ ಬೆನ್‌ ವ್ಯಾಲೇಸ್‌ ಮುಂಚೂಣಿಯಲ್ಲಿದ್ದಾರೆ ಎಂದು ‘ಮೈ ಗವ್‌’ ಸಮೀಕ್ಷೆ ಹೇಳಿದೆ. ಈನ್ನೂ ಕೆಲವು ಮಾಧ್ಯಮಗಳು ಗೋವಾ ಮೂಲದ ರಾಜಕಾರಣಿ, ಬ್ರಿಟನ್‌ನ ಹಾಲಿ ಅಟಾರ್ನಿ ಜನರಲ್‌ ಸುಯೆಲ್ಲಾ ಬ್ರೇವರ್‌ಮ್ಯಾನ್‌ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿವೆ. ಪ್ರೀತಿ ಪಟೇಲ್‌, ಪೆನ್ನಿ ಮೊರ್ಡುವಾಂಟ್‌, ಸ್ಟೀವ್‌ ಬೇಕರ್‌, ಸಾಜಿದ್‌ ಜಾವಿದ್‌ ಹೆಸರು ಕೂಡ ಚಾಲ್ತಿಯಲ್ಲಿದೆ.

\Breaking ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ!

ಕನ್ಸರ್ವೇಟಿವ್‌ ಪಕ್ಷ ಆಂತರಿಕ ಚುನಾವಣೆ ನಡೆಸಿ ಮುಂದಿನ ಪ್ರಧಾನಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಆಂತರಿಕ ಚುನಾವಣೆ ತಕ್ಷಣವೇ ಏರ್ಪಡದು. ಅಕ್ಟೋಬರ್‌ನಲ್ಲಿ ನಡೆಯಬಹುದು ಎಂದು ವರದಿಗಳು ಹೇಳಿವೆ. ಅಲ್ಲಿವರೆಗೂ ಬೋರಿಸ್‌ ಜಾನ್ಸನ್‌ ಅವರು ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಜಗತ್ತಿನ ಅತ್ಯುತ್ತಮ ಕೆಲಸವನ್ನು ನಾನು ಕೈಬಿಡುತ್ತಿದ್ದೇನೆ. ಇದರಿಂದ ನಾನೆಷ್ಟುದುಃಖಿತನಾಗಿದ್ದೇನೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು’ ಎಂದು ನುಡಿದರು. ‘ರಾಜಕೀಯದಲ್ಲಿ ಯಾರೂ ತೀರಾ ಅನಿವಾರ್ಯವಲ್ಲ. ಹೀಗಾಗಿ ಮುಂದಿನ ನಾಯಕನಿಗೆ ಸಾಧ್ಯವಾದಷ್ಟುಬೆಂಬಲವನ್ನು ನೀಡುತ್ತೇನೆ’ ಎಂದೂ ವಿಷಾದ ಭಾವದಿಂದಲೇ ಜಾನ್ಸನ್ ಹೇಳಿದರು.

click me!