
ಒಬ್ಬೊಬ್ಬರಿಗೆ ಒಬ್ಬೊಬ್ಬರು ನೆಚ್ಚಿನ ನಟ, ನಟಿ ಇರ್ತಾರೆ. ಒಬ್ಬೊಬ್ಬರು ಆದರ್ಶ ಇರುತ್ತಾರೆ. ಅದೇ ರೀತಿ ನಿಮಗೆ ಸುರಸುಂದರ ನಟ ಯಾರು ಎಂದು ಪ್ರಶ್ನಿಸಿದ್ರೆ ಅವರವರ ಭಾವಕ್ಕೆ ಅವರವರಿಗೆ ಒಬ್ಬೊಬ್ಬರು ಕಣ್ಣೆದುರು ಬರುತ್ತಾರೆ. ಏಕೆಂದ್ರೆ ಸೌಂದರ್ಯ ಎನ್ನುವುದು ನೋಡುಗರ ಕಣ್ಣಲ್ಲಿ ಇರುತ್ತದೆ ಎನ್ನುವ ಮಾತಿದೆ. ಒಬ್ಬರಿಗೆ ಇಷ್ಟವಾದವರು, ಮತ್ತೊಬ್ಬರಿಗೆ ಇಷ್ಟವಾಗಲಿಕ್ಕಿಲ್ಲ. ಉದಾಹರಣೆಗೆ, ಮಿಸ್ ಯೂನಿವರ್ಸ್, ಮಿಸ್ ವರ್ಲ್ಡ್ ಸ್ಪರ್ಧೆಯನ್ನೇ ತೆಗೆದುಕೊಳ್ಳುವುದಾದರೆ, ಒಬ್ಬರಿಗಿಂತ ಇನ್ನೊಬ್ಬರು ಸುಂದರಿಯರಿದ್ದರೂ ಕೊನೆಗೆ ಒಬ್ಬರಿಗೆ ಈ ಪಟ್ಟ ಸಿಗುತ್ತದೆ. ಸುಂದರಿಯ ಕಿರೀಟವನ್ನು ಅಂತಿಮವಾಗಿ ಧರಿಸಿರುವವರನ್ನು ನೋಡಿ ಛೇ ಇವರಿಗೆ ಹೇಗೆ ಸಿಕ್ಕಿತು ಎಂದು ಅಂದುಕೊಳ್ಳುವ ಘಟನೆಗಳೂ ಅದೆಷ್ಟೋ ಸಲ ಆಗುವುದು ಉಂಟು. ಸೌಂದರ್ಯ ಸ್ಪರ್ಧೆಗಳಲ್ಲಿ ಕೇವಲ ಸೌಂದರ್ಯವನ್ನಷ್ಟೇ ಅಲ್ಲದೇ, ಹಲವಾರು ರೀತಿಯಲ್ಲಿ ಅಳೆದು ತೂಗಿ ಲೆಕ್ಕಾಚಾರ ಹಾಕಲಾಗುತ್ತದೆ. ವ್ಯಕ್ತಿಯ ಚರ್ಮದ ಬಣ್ಣ, ಎತ್ತರ, ತೂಕ, ಬಟ್ಟೆಗಳು ವ್ಯಕ್ತಿಯನ್ನು ತುಂಬಾ ಸುಂದರವಾಗಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದರೂ ಸ್ಪರ್ಧೆಯ ವಿಷಯಕ್ಕೆ ಬಂದಾಗ ಅವರ ಜಾಣ್ಮೆ, ಬುದ್ಧಿವಂತಿಕೆಯನ್ನೂ ನೋಡಲಾಗುತ್ತದೆ.
ಅದೇ ರೀತಿ ಇದೀಗ ವಿಶ್ವದ ಸುರಸುಂದರ ನಟ ಹೇಗಿರಬಹುದು ಎನ್ನುವ ಕುತೂಹಲ ನಿಮಗಿದ್ಯಾ? ಇಲ್ಲೇ ಕೆಳಗೆ ಅವರ ಫೋಟೋ ಇದೆ ನೋಡಿ. ಇವರನ್ನು ಈಗ ವಿಶ್ವದ ಸುರಸುಂದರ ನಟ ಎಂದು ಗುರುತಿಸಲಾಗಿದೆ. ಅವರ ಹೆಸರು ರೆಗೆ- ಜೀನ್ ಪೇಜ್ (Rege-Jene Page). ಈ ಸುಂದರ ನಟ ಬ್ರಿಟಿಷ್ ಮೂಲದವರು. ವಿಶ್ವದ ಅತ್ಯಂತ ಸುಂದರ (handsome) ವ್ಯಕ್ತಿ ಎಂಬ ಮನ್ನಣೆ ಈ ಬ್ರಿಟಿಷ್ ನಟನಿಗೆ ಸಿಕ್ಕಿದೆ. ಇವರನ್ನು ಅತಿ ಸುಂದರ ವ್ಯಕ್ತಿ ಎಂದು ಘೋಷಿಸಿದ್ದು ಬೇರೆ ಯಾರೋ ಅಲ್ಲ, ಖುದ್ದು ವಿಜ್ಞಾನಿಗಳು (scientists). ಸೌಂದರ್ಯ ಸ್ಪರ್ಧೆಗಳಂತೆ ಇವರ ಜಾಣ್ಮೆ, ಬುದ್ಧಿವಂತಿಕೆಯನ್ನೆಲ್ಲಾ ಇಲ್ಲಿ ಗುರುತಿಸಿಲ್ಲ. ಬದಲಿಗೆ ವಿಜ್ಞಾನಿಗಳು ನಂಬುವ ಚರ್ಮದ ಬಣ್ಣ, ಎತ್ತರ, ತೂಕ, ಬಟ್ಟೆ ಸೇರಿದಂತೆ ಇನ್ನಿತರ ವಿಷಯಗಳನ್ನು ಇಲ್ಲಿ ಪರಿಗಣೆಗೆ ತೆಗೆದುಕೊಳ್ಳಲಾಗಿದೆ.
ಇವರನ್ನು ಅತಿ ಸುಂದರ ಎಂಬ ಹೇಳಲು ಫೇಸ್ ಮ್ಯಾಪಿಂಗ್ ಬಳಕೆ ಮಾಡಲಾಗಿದೆ. ಬ್ರಿಟಿಷ್ ಸೌಂದರ್ಯವರ್ಧಕ ಹಾಗೂ ಶಸ್ತ್ರಚಿಕಿತ್ಸಕರಾಗಿರುವ ಡಾ. ಜೂಲಿಯನ್ ಡಿ ಸಿಲ್ವಾ ಅವರು ಗಣಕೀಕೃತ ಸೌಂದರ್ಯ ಮ್ಯಾಪಿಂಗ್ (beaty mapping) ಪ್ರಕ್ರಿಯೆ ನಡೆಸಿದ್ದಾರೆ. ಅದರಲ್ಲಿ ರೆಗೆ- ಜೀನ್ ಪೇಜ್ ಜಗತ್ತಿನ ಅತ್ಯಂತ ಸುಂದರ ನಟ ಎಂದು ಗುರುತಿಸಲಾಗಿದೆ.
ಈ ಮ್ಯಾಪಿಂಗ್ ಕುರಿತು ಒಂದಿಷ್ಟು ಹೇಳುವುದಾದರೆ, ಈ ಬ್ಯೂಟಿ ಮ್ಯಾಪಿಂಗ್ ಪ್ರಕ್ರಿಯೆಯ ಮೂಲಕ, ವ್ಯಕ್ತಿಯ ಕಣ್ಣುಗಳು, ಮೂಗು, ಹುಬ್ಬುಗಳು, ತುಟಿಗಳು, ದವಡೆ ಮತ್ತು ಮುಖದ ಆಕಾರವನ್ನು ಪರಗಣನೆಗೆ ತೆಗೆದುಕೊಳ್ಳಲಾಗುವುದು. ಇದನ್ನು ಸಾಂಪ್ರದಾಯಿಕ ಫೇಸ್ ಮ್ಯಾಪಿಂಗ್ ವಿಧಾನದ ಗ್ರೀನ್ ಗೋಲ್ಡನ್ ರೇಶಿಯೋ ಆಫ್ ಬ್ಯೂಟಿ (Green golden ratio of beauty) ಬಳಸಿ ನಿರ್ಧರಿಸಲಾಗಿದೆ. ಈ ವಿಧಾನದಿಂದ ವ್ಯಕ್ತಿಯ ಮುಖ ಎಷ್ಟು ಪರಿಪೂರ್ಣವಾಗಿದೆ ಎಂಬುದನ್ನು ಲೆಕ್ಕ ಹಾಕಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ