ಮದ್ವೆಯಾಗದೇ ಬಾಕಿ ಉಳಿದ 3.5 ಕೋಟಿ ಪುರುಷರು: ವಿದೇಶದಿಂದ ವಧು ತರುವ ಸಲಹೆ ವೈರಲ್

By Anusha Kb  |  First Published Oct 30, 2024, 1:18 PM IST

ಹೆಣ್ಮಕ್ಕಳ ಕೊರತೆಯಿಂದಾಗಿ ಮದುವೆಯಾಗದೇ ಬಾಕಿ ಉಳಿದ ಪುರುಷರು ಭಾರತದಲ್ಲೂ ಸಾಕಷ್ಟಿದ್ದಾರೆ.  ಆದರೆ ಇದು ಕೇವಲ ಭಾರತದ ಸಮಸ್ಯೆ ಅಲ್ಲ ಎಂಬುದು ಈಗ ಸಾಬೀತಾಗಿದೆ.


ಹೆಣ್ಮಕ್ಕಳ ಕೊರತೆಯಿಂದಾಗಿ ಮದುವೆಯಾಗದೇ ಬಾಕಿ ಉಳಿದ ಪುರುಷರು ಭಾರತದಲ್ಲೂ ಸಾಕಷ್ಟಿದ್ದಾರೆ.  ಆದರೆ ಇದು ಕೇವಲ ಭಾರತದ ಸಮಸ್ಯೆ ಅಲ್ಲ ಎಂಬುದು ಈಗ ಸಾಬೀತಾಗಿದೆ. ಚೀನಾದಲ್ಲೂ ಕೂಡ 35 ಮಿಲಿಯನ್ ಅಂದರೆ ಸುಮಾರು 3.5 ಕೋಟಿಯಷ್ಟು ಪುರುಷರು ವಧು ಸಿಗದ ಕಾರಣಕ್ಕೆ ಮದುವೆಯಾಗದೇ ಬಾಕಿ ಉಳಿದಿದ್ದಾರಂತೆ. ಲಿಂಗನುಪಾತದಲ್ಲಿನ ಭಾರಿ ವ್ಯತ್ಯಾಸ ಈಗ ಚೀನಾಗೆ  ಹೊಸ ತಲೆನೋವಾಗಿ ಕಾಡುತ್ತಿದೆ. ಈ ಸಮಸ್ಯೆಯನ್ನು ನೀಗಿಸುವುದಕ್ಕಾಗಿ ಚೀನಾದ ಸರ್ಕಾರಕ್ಕೆ ಪ್ರೋಫೆಸರ್ ಒಬ್ಬರು ವಿದೇಶಿ ವಧುಗಳನ್ನು ತಂದು  ಮದುವೆ ಮಾಡಿಸುವ ಸಲಹೆ ನೀಡಿದ್ದರು. ಪ್ರೊಫೆಸರ್ ಸಲಹೆ ಅಲ್ಲಿನ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಚೀನಾದಲ್ಲಿ ಉಳಿದಿರುವ ಪುರುಷರು ಎಂದು ಕರೆಯಲ್ಪಡುವ ಮದುವೆಯಾಗದೇ ಬಾಕಿ ಉಳಿದಿರುವ ಪುರುಷರ ವಿಚಾರವೂ ಚೀನಾಗೆ ದೊಡ್ಡ ಸವಾಲಾಗಿದೆ. ಈ ಸಮಸ್ಯೆಯ ಪರಿಹಾರದ ಬಗ್ಗೆ ಇತ್ತಿಚೆಗೆ ಕ್ಸಿಯಾಮೆನ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರೊಬ್ಬರು ನೀಡಿದ ಸಲಹೆಯಿಂದಾಗಿ ಚೀನಾದ ಈ ಸಮಸ್ಯೆಗೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅಂದಹಾಗೆ ಆ ಪ್ರಾಧ್ಯಾಪಕರು ವಧುಗಳ ಸಮಸ್ಯೆ ನೀಗಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮದುವೆ ಸಂಬಂಧ ಹುಡುಕುವಂತೆ ಸಲಹೆ ನೀಡಿದ್ದರು. ಇವರ ಈ ಸಲಹೆಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ. 

Tap to resize

Latest Videos

undefined

ಈ ಜನಸಂಖ್ಯೆಯ ಲಿಂಗಾನುಪಾತದ ಏರುಪೇರಿನ ಬಗ್ಗೆ ಕೆದಕುತ್ತಾ ಹೋದರೆ ಕೆಲ ದಶಕಗಳಿಗೂ ಹಿಂದೆ ಚೀನಾ ಜಾರಿಗೆ ತಂದ ಮನೆಗೊಂದೇ ಮಗು ನಿಯಮದ ಪರಿಣಾಮ ಇದು ಎಂದು ಹೇಳುತ್ತಿವೆ ಅಲ್ಲಿನ ಸಮೀಕ್ಷೆಗಳು, ಇದರ ಪರಿಣಾಮವೇ 34.9 ಮಿಲಿಯನ್ ಯುವಕರಿಗೆ ಯುವತಿಯರು ಸಿಗದಂತೆ ಮಾಡಿದೆ ಎಂದು 2020 ರಲ್ಲಿ ನಡೆಸಿದ ಏಳನೇ ರಾಷ್ಟ್ರೀಯ ಜನಸಂಖ್ಯಾ ಗಣತಿ ಬೊಟ್ಟು ಮಾಡಿದೆ. 

ಹಾಗೆಯೇ  ಸೆಂಟ್ರಲ್ ಚೈನಾ ನಾರ್ಮಲ್ ಯೂನಿವರ್ಸಿಟಿಯ ಇನ್‌ಸ್ಟಿಟ್ಯೂಟ್ ಫಾರ್ ಚೀನಾ ರೂರಲ್ ಸ್ಟಡೀಸ್‌ನ ಇತ್ತೀಚಿನ ವರದಿಯೂ ಗ್ರಾಮೀಣ ಯುವಕರು ಸಂಗಾತಿ ಪಡೆಯಲು ಎದುರಿಸುತ್ತಿರುವ ತೊಂದರೆಗಳ ಮೇಲೆ ಬೆಳಕು ಚೆಲ್ಲಿದೆ. ವಧುಗಳ ಬೇಡಿಕೆ ಹಾಗೂ ಬೆಲೆಯೂ ಅಲ್ಲಿ ತೀವ್ರವಾಗಿದ್ದು, ಇದು ಸಾಂಪ್ರದಾಯಿಕ ಮದುವೆಗಳು ಕಡಿಮೆಯಾಗುತ್ತಿರುವುದಕ್ಕೆ ಹಾಗೂ ಅದಕ್ಕೆ ಗಮನಾರ್ಹ ಅಡೆತಡೆಗಳು ಆಗುತ್ತಿರುವುದರ ಬಗ್ಗೆ ಈ ವರದಿ ಗಮನ ಹರಿಸಿದೆ. 

ಈ ಹಿನ್ನೆಲೆಯಲ್ಲಿ  ಪ್ರಧ್ಯಾಪಕರಾದ ಡಿಂಗ್‌ ಚಂಗ್ಫಾ, ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಧು ಹುಡುಕಬೇಕು ಎಂದು ಸಲಹೆ ನೀಡಿದ್ದು, ರಷ್ಯಾ, ಕಾಂಬೋಡಿಯಾ, ವಿಯೆಟ್ನಾಂ ಮತ್ತು ಪಾಕಿಸ್ತಾನದಂತಹ ದೇಶಗಳ ಯುವತಿಯರನ್ನು ಚೀನಾದ ಪುರುಷರು ಮದುವೆಯಾಗಲು ಪ್ರೋತ್ಸಾಹಿಸಬೇಕು ಎಂಬ ಸಲಹೆ ನೀಡಿದ್ದಾರೆ. ಗ್ರಾಮೀಣ ಚೀನಾದಲ್ಲಿ ಅಂದಾಜು 34.9 ಮಿಲಿಯನ್ ಬಾಕಿ ಉಳಿದ ಪುರುಷರು ಇದ್ದಾರೆ. ವಧುಗಳ ಡಿಮಾಂಡ್ ಕೂಡ ಗಗನಕ್ಕೇರಿದ್ದು, ಅವರು ಸ್ವಂತ ಮನೆ ಕಾರು ಹೊಂದಿರಬೇಕು ಎಂಬ ಬೇಡಿಕೆ ಇಡುತ್ತಿದ್ದಾರೆ. ಅಲ್ಲದೇ ಅವರ ಬೆಲೆ 5 ಲಕ್ಷದಿಂದ 6 ಲಕ್ಷ ಯಾನ್‌ವರೆಗೆ (70,000 ದಿಂದ 85,000 ಯು ಎಸ್ ಡಾಲರ್ ಇದೆ (ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ 58 ಲಕ್ಷದಿಂದ 71 ಲಕ್ಷದವರೆಗೆ) ದುಬಾರಿ ಬೆಲೆ ಇದೆ.

ಹೀಗಾಗಿ ಈ ಸಮಸ್ಯೆಯಿಂದ ಪಾರಾಗಲು ಡಿಂಗ್ ಚಂಗ್ಪಾ ಅವರು ಈ ಅಂತಾರಾಷ್ಟ್ರೀಯ ಮದುವೆ ಪ್ರಸ್ತಾಪವನ್ನು ಮಾಡಿದ್ದರು. ಅಲ್ಲದೇ ಚೀನಾದ ಪುರುಷರು ವಿದೇಶಿ ಬೆಡಗಿಯರತ್ತ ಇತ್ತೀಚೆಗೆ ಹೆಚ್ಚೆಚ್ಚು ಒಲವು ತೋರುತ್ತಿರುವ ಬಗ್ಗೆಯೂ ಗಮನ ಸೆಳೆದಿದ್ದಾರೆ. ಪ್ರೊಫೆಸರ್ ಡಿಂಗ್ ಅವರ ಈ ಸಲಹೆಯ ನಡುವೆಯೇ ಕೆಲ ಚೀನಾದ ಮ್ಯಾಟ್ರಿಮೋನಿಯಲ್ ಸೈಟ್‌ಗಳು ಚೀನಾದ ಯುವಕರಿಗೆ ರಷ್ಯಾದ ಯುವತಿಯರನ್ನು ತಂದು ಮದುವೆ ಮಾಡಿಸುವ ಆಮಿಷ ಒಡ್ಡುತ್ತಿವೆ. ಈ ಹೊಸತಂತ್ರಗಳು ಎರಡು ದೇಶಗಳ ನಡುವಿನ ಜನಸಂಖ್ಯಾ ಅಸಮತೋಲನವನ್ನು  ಬಳಸಿಕೊಳ್ಳುವ ಗುರಿ ಹೊಂದಿವೆ. ಗಮನಾರ್ಹವಾಗಿ ರಷ್ಯಾದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿದ್ದಾರೆ. 

 

click me!