ಎಲಾನ್ ಮಸ್ಕ್ ಹಣ ಉಳಿತಾಯ ಮಾಡಲು ಭರ್ಜರಿ ಪ್ಲಾನ್ ಮಾಡಿದ್ದಾರೆ. ತನ್ನ 11 ಮಕ್ಕಳು ಹಾಗೂ ಅವರ ತಾಯಂದಿರನ್ನು ಒಂದೇ ಸೂರಿನಲ್ಲಿ ನಲೆಸುವಂತೆ ಮಾಡಲು ಇದೀಗ 294 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ. ಮಸ್ಕ್ ನಡೆ ಭಾರತದಲ್ಲಿ ಬಿಲ್‌ಕುಲ್ ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಜನ.
ನ್ಯೂಯಾರ್ಕ್(ಅ.30) ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಹೊಸ ಆವಿಷ್ಕಾರ, ಸ್ಪೇಸ್ ಎಕ್ಸ್ ಮೂಲಕ ನಡೆಸುತ್ತಿರುವ ಪ್ರಯೋಗವನ್ನು ವಿಶ್ವವೇ ಕುತೂಹಲದ ಕಣ್ಣಿನಿಂದ ನೋಡುತ್ತಿದೆ. ಇದರ ಜೊತೆಗೆ ಎಲಾನ್ ಮಸ್ಕ್ ವೈಯುಕ್ತಿಕ ವಿಚಾರಗಳು ಹಲವು ಬಾರಿ ಚರ್ಚೆಗೆ ಒಳಗಾಗುತ್ತಿದೆ. ಎಲಾನ್ ಮಸ್ಕ್ ಇಬ್ಬರನ್ನು ಮದುವೆಯಾಗಿದ್ದಾರೆ. ಮತ್ತಿಬ್ಬರ ಜೊತೆ ಸಂಬಂಧ ಇಟ್ಟುಕೊಂಡು ಮಕ್ಕಳನ್ನೂ ಪಡೆದಿದ್ದಾರೆ. ಇವರೆಗೆಲ್ಲಾ ನಿರ್ವಹಣೆ ವೆಚ್ಚ, ಮಕ್ಕಳ ನಿರ್ವಹಣೆಗೆ ವಿಪರೀತ ಖರ್ಚಾಗುತ್ತಿದೆ. ಹೀಗಾಗಿ ಎಲಾನ್ ಮಸ್ಕ್ ಭರ್ಜರಿ ಪ್ಲಾನ್ ಮಾಡಿದ್ದಾರೆ. ಪತ್ನಿ, ಸಂಬಂಧ ಇಟ್ಟುಕೊಂಡ ಎಲ್ಲರೂ ಬೇರೆ ಬೇರೆ ಕಡೆ ನೆಲೆಸಿದ್ದಾರೆ. ಇದೀಗ ತನ್ನ 11 ಮಕ್ಕಳು ಹಾಗೂ ಅವರ ತಾಯಂದಿರನ್ನು ಒಂದೇ ಮನೆಯಲ್ಲಿ ನೆಲೆಸುವಂತೆ ಮಾಡಲು ಬರೋಬ್ಬರಿ 294 ಕೋಟಿ ರೂಪೂಯಿ ಮನೆ ಖರೀದಿಸಿದ್ದಾರೆ.
ಎಲಾನ್ ಮಸ್ಕ್ ಮೊದಲ ಪತ್ನಿ ಜಸ್ಟಿನ್ ಮಸ್ಕ್, ಎರಡನೇ ಪತ್ನಿ ಬ್ರಿಟಿಷ್ ನಟಿ ತಲುಲಾ ರಿಲೆ. ವಿಶೇಷ ಅಂದರೆ ತಲುಲಾ ಜೊತೆ ಎರಡೆರಡು ಬಾರಿ ಮದುವೆ ಹಾಗೂ ಡಿವೋರ್ಸ್ ಪಡೆದಿದ್ದಾರೆ. ಇದಾದ ಬಳಿಕ ಎಲಾನ್ ಮಸ್ಕ್ ಅಧಿಕೃತವಾಗಿ ಮದುವೆಯಾಗದಿದ್ದರೂ ಸಂಬಂದ ಇಟ್ಟುಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ. ಮ್ಯೂಸಿಶಿಯನ್ ಗ್ರಿಮ್ಸ್ ಹಾಗೂ ತನ್ನ ಕಂಪನಿಯ ಉದ್ಯೋಗಿ ಶಿವೋನ್ ಝಿಲ್ಲಿಸ್ ಜೊತೆಗೂ ಸಂಬಂಧ ಇಟ್ಟುಕೊಂಡಿದ್ದಾರೆ. ಕೇವಲ ಸಂಬಂಧ ಮಾತ್ರವಲ್ಲ ಮಕ್ಕಳನ್ನೂ ಪಡೆದಿದ್ದಾರೆ. ಹೀಗಾಗಿ ಎಲಾನ್ ಮಸ್ಕ್ ಒಟ್ಟು 11 ಮಕ್ಕಳ ತಂದೆ.
ಕೆಲ ವರ್ಷದಲ್ಲಿ ಮಸ್ಕ್ ವಿಶ್ವದ ಮೊದಲ ಟ್ರಿಲೇನಿಯರ್, ಗೌತಮ್ ಅದಾನಿಗೆ 2ನೇ ಸ್ಥಾನ: ಅಧ್ಯಯನ ವರದಿ!
11 ಮಕ್ಕಳು ಹಾಗೂ ಅವರ ತಾಯಂದರು ಬೇರೆ ಬೇರೆ ಕಡೆ ವಾಸವಿದ್ದಾರೆ. ಮಕ್ಕಳ ನೋಡಲು, ಭೇಟಿಯಾಗಲೂ ಎಲಾನ್ ಮಸ್ಕ್ ಒಂದೊಂದು ದೇಶಕ್ಕೆ ತೆರಳಬೇಕಾದ ಪರಿಸ್ಥಿತಿ. ಇದಕ್ಕೆ ಭರ್ಜರಿ ಪ್ಲಾನ್ ಮಾಡಿರವ ಎಲಾನ್ ಮಸ್ಕ್ ಅಮೆರಿಕದ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಬರೋಬ್ಬರಿ 294 ಕೋಟಿ ರೂಪಾಯಿ ಮೌಲ್ಯದ ಮಾನ್ಶನ್ ಹೌಸ್ ಖರೀದಿಸಿದ್ದಾರೆ. 14,400 ಚದರ ಅಡಿ ವಿಸ್ತೀರ್ಣದ ಈ ಮನೆಯಲ್ಲಿ 6 ಬೆಡ್ ರೂಂಗಳಿವೆ. ಇನ್ನು ವಿಶಾಲವಾದ ಪ್ರಾಂಗಣ, ಸ್ವಿಮ್ಮಿಂಗ್ ಪೂಲ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಈ ಮನೆಯಲ್ಲಿದೆ.
ವಿಶೇಷ ಅಂದರೆ ಈ ಮನೆ ಟೆಕ್ಸಾಸ್‌ನಲ್ಲಿರುವ ಎಲಾನ್ ಮಸ್ಕ್ ಮನೆಯಿಂದ ಕೇವಲ 10 ನಿಮಿಷದ ದೂರದಲ್ಲಿದೆ. ಈ ಮನೆ ತನ್ನ 12 ಮಕ್ಕಳು ಹಾಗೂ ಅವರ ತಾಯಂದಿರಿಗಾಗಿ ಎಲಾನ್ ಮಸ್ಕ್ ಖರೀದಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ಕುರಿತು ವರದಿ ಹೊರಬೀಳುತ್ತಿದ್ದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಇದು ಭಾರತದಲ್ಲಿ ಸಾಧ್ಯವಿಲ್ಲ ಎಂದಿದ್ದಾರೆ. ಮಾಜಿ ಪತ್ನಿಯರು, ಸಂಬಂಧ ಇಟ್ಟುಕೊಂಡವರು ಹಾಗೂ ಮಕ್ಕಳು ಒಂದೇ ಮನೆಯಲ್ಲಿ ವಾಸಿಸುವುದು ಭಾರತದಲ್ಲಿ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಕಾರಣ ಭಾರತದಲ್ಲಿ ಪತಿ ಪತ್ನಿ ಹಾಗೂ ಮಕ್ಕಳು. ಇವರ ನಡುವೆ ಮತ್ತೊಬ್ಬರು ಎಂಟ್ರಿಯಾದರೆ ಅದು ಪೋಷಕರೇ ಆಗಿರಬಹುದು, ಕೋಲಾಹಲ ಸೃಷ್ಟಿಯಾಗುತ್ತೆ. ಹೀಗಾಗಿ ಪತ್ನಿಯರನ್ನು, ಸಂಬಂಧ ಇಟ್ಟುಕೊಂಡವರನ್ನು ಒಂದೆಡೆ ಸೇರಿಸುವುದು ಅಸಾಧ್ಯದ ಮಾತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಮನೆಯಲ್ಲಿ 7 ಗಂಟೆ ನಡೆದಾಡಿ ದಿನಕ್ಕೆ 28,000 ರೂ ಸಂಪಾದಿಸಿ, ಟೆಸ್ಲಾ ಉದ್ಯೋಗ ಆಫರ್!
ಎಲಾನ್ ಮಸ್ಕ್ ಹಾಗೂ ಜಸ್ಟಿನ್ ಮಸ್ಕ್ ದಂಪತಿಗೆ ಐವರು ಮಕ್ಕಳಿದ್ದಾರೆ. ಅವಳಿ ಜವಳಿ ಮಕ್ಕಳಾದ ಗ್ರಿಫ್ಪಿನ್ಸ್ ಹಾಗೂ ವಿವಿಯನ್ . ಬಳಿಕ ಮೂವರು ಮಕ್ಕಳನ್ನು ಪಡೆದಿದ್ದಾರೆ. ಮೊದಲ ಪತ್ನಿಯಿಂದ ಐವರು ಮಕ್ಕಳು ಪಡೆದ ಮಸ್ಕ್, ಎರಡನೇ ಪತ್ನಿ ತಲುಲಾ ರಿಲೇಯಿಂದ ಮಕ್ಕಳು ಪಡೆದಿಲ್ಲ. ಸುದೀರ್ಘ ದಿನಗಳ ಕಾಲ ಜೊತೆಯಾಗಿದ್ದರು. ಇದರ ನಡುವೆ ಎರಡು ಬಾರಿ ಡಿವೋರ್ಸ್ ಪಡೆದ್ದಾರೆ.
2020-22ರ ಅವಧಿಯಲ್ಲಿ ಮ್ಯೂಸಿಶಿಯನ್ ಕ್ಲಾರಿ ಬೌಚರ್(ಗ್ರಿಮ್ಸ್) ಜೊತೆ ಸಂಬಂಧದಲ್ಲಿದ್ದ ಮಸ್ಕ್ ಮೂವರು ಮಕ್ಕಳ ಪಡೆದಿದ್ದಾರೆ. ಇನ್ನು 2022ರ ಬಳಿಕ ಮಸ್ಕ್ ಒಡೆತೆನದ ನ್ಯೂರಾಲಿಂಕ್ ಕಂಪನಿಯ ಮ್ಯಾನೇಜರ್ ಶಿವೋನ್ ಜಿಲ್ಲಿಸ್ ರಹಸ್ಯ ಸಂಬಂಧ ಬಯಲಾಗಿತ್ತು. ಆದರೆ ಈ ಜೋಡಿ 2021ರಲ್ಲಿ ಪೋಷಕರಾಗಿದ್ದರು. ಒಟ್ಟು 11 ಮಕ್ಕಳ ತಂದೆಯಾಗಿದ್ದಾರೆ ಮಸ್ಕ್.