ಹೊಸ ಮಸೂದೆ ಶಾಕ್‌: 8 ಲಕ್ಷ ಭಾರತೀಯರು ಕುವೈತ್‌ನಿಂದ ಹೊರಕ್ಕೆ?

Published : Jul 07, 2020, 07:18 AM ISTUpdated : Jul 07, 2020, 08:29 AM IST
ಹೊಸ ಮಸೂದೆ ಶಾಕ್‌: 8 ಲಕ್ಷ ಭಾರತೀಯರು ಕುವೈತ್‌ನಿಂದ ಹೊರಕ್ಕೆ?

ಸಾರಾಂಶ

8 ಲಕ್ಷ ಭಾರತೀಯರು ಕುವೈತ್‌ನಿಂದ ಹೊರಕ್ಕೆ?| ಭಾರತೀಯರ ಸಂಖ್ಯೆ ಶೇ.15ಕ್ಕಿಳಿಸಲು ಮಸೂದೆ|  ಕೊಲ್ಲಿ ರಾಷ್ಟ್ರದಿಂದ ಭಾರತೀಯ ನೌಕರರಿಗೆ ಶಾಕ್‌

ದುಬೈ(ಜು.07): ಅಮೆರಿಕ ಸರ್ಕಾರ ಭಾರತೀಯ ನೌಕರರ ಸಂಖ್ಯೆಗೆ ಕಡಿವಾಣ ಹಾಕುವ ಎಚ್‌1ಬಿ ವೀಸಾ ಇಳಿಕೆ ನಿರ್ಧಾರ ಕೈಗೊಂಡ ಬೆನ್ನಲ್ಲೇ ಇದೀಗ ಕೊಲ್ಲಿ ರಾಷ್ಟ್ರ ಕುವೈತ್‌ ಕೂಡ ಅಂತಹುದೇ ಕ್ರಮಕ್ಕೆ ಮುಂದಾಗಿದೆ. ಕುವೈತ್‌ನಲ್ಲಿರುವ ಭಾರತೀಯ ವಲಸಿಗರ ಸಂಖ್ಯೆಯನ್ನು ಒಟ್ಟು ಜನಸಂಖ್ಯೆಯ ಶೇ.15ಕ್ಕೆ ಇಳಿಸುವ ಕರಡು ಮಸೂದೆಗೆ ಕುವೈತ್‌ನ ರಾಷ್ಟ್ರೀಯ ಅಸೆಂಬ್ಲಿ ಸಮಿತಿ ಒಪ್ಪಿಗೆ ನೀಡಿದ್ದು, ಇದು ಸಂಸತ್ತಿನಲ್ಲಿ ಅಂಗೀಕಾರವಾದರೆ 8 ಲಕ್ಷ ಭಾರತೀಯರು ಕುವೈತ್‌ನಿಂದ ಸ್ವದೇಶಕ್ಕೆ ಮರಳಬೇಕಾಗುತ್ತದೆ.

ತೈಲ ಬೆಲೆ ಕುಸಿತದಿಂದ ಉಂಟಾಗುತ್ತಿರುವ ಉದ್ಯೋಗ ನಷ್ಟಮತ್ತು ಕೊರೋನಾ ವೈರಸ್‌ ಸೋಂಕು ವಲಸಿಗರಲ್ಲೇ ಹೆಚ್ಚಾಗಿ ಹರಡುತ್ತಿರುವುದರಿಂದ ಕಂಗೆಟ್ಟಿರುವ ಕುವೈತ್‌ನ ಮೂಲ ನಿವಾಸಿಗಳು ವಿದೇಶಿ ವಲಸಿಗರ ಸಂಖ್ಯೆಗೆ ಕಡಿವಾಣ ಹಾಕಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಅದರಂತೆ ಕುವೈತ್‌ ಸರ್ಕಾರ ಕಾಯ್ದೆಯೊಂದನ್ನು ಜಾರಿಗೆ ತರಲು ಮುಂದಾಗಿದ್ದು, ದೇಶದಲ್ಲಿ ಸದ್ಯ ಇರುವ ಶೇ.70ರಷ್ಟುವಿದೇಶೀಯರ ಸಂಖ್ಯೆಯನ್ನು ಶೇ.30ಕ್ಕೆ ಇಳಿಸಲು ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದ ಮಸೂದೆಯಲ್ಲಿ ಕುವೈತ್‌ನ ಒಟ್ಟು ಜನಸಂಖ್ಯೆಯ ಶೇ.15ರಷ್ಟುಮಾತ್ರ ಭಾರತೀಯರು ಇರಬಹುದು ಎಂಬ ನಿಯಮ ಅಳವಡಿಸಲಾಗಿದೆ. ಕುವೈತ್‌ನಲ್ಲಿರುವ ವಿದೇಶಿ ಜನಸಂಖ್ಯೆಯಲ್ಲಿ ಭಾರತೀಯರೇ ಬಹುಸಂಖ್ಯಾತರಾಗಿದ್ದು, ಒಟ್ಟು 15 ಲಕ್ಷ ಭಾರತೀಯರಿದ್ದಾರೆ. ಶೇ.15ರ ನಿಯಮ ಜಾರಿಗೆ ಬಂದರೆ 8 ಲಕ್ಷ ಭಾರತೀಯರು ಕುವೈತ್‌ನಲ್ಲಿ ನೆಲೆಸುವ ಪರ್ಮಿಟ್‌ ಕಳೆದುಕೊಳ್ಳಬೇಕಾಗುತ್ತದೆ.

ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಶಾಕ್: ಕಲ್ಯಾಣ ಕರ್ನಾಟಕದ ಎಲ್ಲಾ ನೇಮಕಾತಿ ಭರ್ತಿಗೆ ತಡೆ

ಕುವೈತ್‌ನ ಹಾಲಿ ಜನಸಂಖ್ಯೆ 43 ಲಕ್ಷ. ಅದರಲ್ಲಿ 30 ಲಕ್ಷದಷ್ಟುವಿದೇಶೀಯರೇ ಇದ್ದು, ಕುವೈತ್‌ನ ಮೂಲನಿವಾಸಿಗಳು 13 ಲಕ್ಷ ಮಾತ್ರ ಇದ್ದಾರೆ. 30 ಲಕ್ಷ ವಿದೇಶೀಯರ ಪೈಕಿ 13 ಲಕ್ಷ ಮಂದಿ ಅನಕ್ಷರಸ್ಥ ವಲಸಿಗರು ಅಥವಾ ಕೇವಲು ಓದಲು ಮತ್ತು ಬರೆಯಲು ಮಾತ್ರ ಬರುವಂಥವರು. ಕುವೈತ್‌ಗೆ ವೈದ್ಯರು, ನರ್ಸ್‌ಗಳು, ಎಂಜಿನಿಯರ್‌ಗಳು ಹಾಗೂ ಶಿಕ್ಷಕರಂತಹ ಕುಶಲ ವಲಸಿಗರ ಅಗತ್ಯ ಹೆಚ್ಚಿದ್ದು, ಶೇ.15ರ ನಿಯಮ ಜಾರಿಗೆ ಬಂದರೆ ಕಟ್ಟಡ ಕಾರ್ಮಿಕರು ಮುಂತಾದ ಅನಕ್ಷರಸ್ಥ ವಲಸಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಭಾರತಕ್ಕೆ ಮರಳಬೇಕಾಗುತ್ತದೆ ಎಂದು ಗಲ್‌್ಫ ನ್ಯೂಸ್‌, ಅರಬ್‌ ನ್ಯೂಸ್‌ನಂತಹ ದಿನಪತ್ರಿಕೆಗಳು ವರದಿ ಮಾಡಿವೆ.

ಕುವೈತ್‌ನಲ್ಲಿರುವ ಭಾರತೀಯ ದೂತಾವಾಸದ ಪ್ರಕಾರ ಕುವೈತ್‌ನಲ್ಲಿ 28 ಸಾವಿರ ಭಾರತೀಯರು ಸರ್ಕಾರಿ ನೌಕರಿಯಲ್ಲಿದ್ದಾರೆ. ವೈದ್ಯರು, ನರ್ಸ್‌ಗಳು, ಎಂಜಿನಿಯರ್‌ಗಳು ಹಾಗೂ ವಿಜ್ಞಾನಿಗಳು ಇವರಲ್ಲಿ ಹೆಚ್ಚಿದ್ದಾರೆ. ಬಹುಸಂಖ್ಯಾತ ಭಾರತೀಯರು (5.23 ಲಕ್ಷ) ಖಾಸಗಿ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಜೊತೆಗೆ 1.16 ಲಕ್ಷ ಅವಲಂಬಿತ ಭಾರತೀಯರಿದ್ದಾರೆ. ಇವರಲ್ಲಿ 60,000 ಭಾರತೀಯ ವಿದ್ಯಾರ್ಥಿಗಳು ಕುವೈತ್‌ನಲ್ಲಿರುವ 23 ಭಾರತೀಯ ಶಾಲೆಗಳಲ್ಲಿ ಓದುತ್ತಿದ್ದಾರೆ. ಜಾರಿಗೆ ತರಲುದ್ದೇಶಿಸಿರುವ ಮಸೂದೆಯ ಕರಡು ಈಗ ಸಂಬಂಧಪಟ್ಟಸಮಿತಿಗಳಿಗೆ ರವಾನೆಯಾಗಲಿದ್ದು, ನಂತರ ಸಂಸತ್ತಿಗೆ ಬರಲಿದೆ.

ಕುವೈತ್ ಮಸೂದೆ‌: 50 ಸಾವಿರ ಕನ್ನಡಿಗರ ಉದ್ಯೋಗಕ್ಕೆ ಕುತ್ತು!

ಏಕೆ ಈ ನಿರ್ಧಾರ?

ತೈಲ ಬೆಲೆ ಕುಸಿತದಿಂದ ಉಂಟಾಗುತ್ತಿರುವ ಉದ್ಯೋಗ ನಷ್ಟಮತ್ತು ಕೊರೋನಾ ವೈರಸ್‌ ಸೋಂಕು ವಲಸಿಗರಲ್ಲೇ ಹೆಚ್ಚಾಗಿ ಹರಡುತ್ತಿರುವುದರಿಂದ ಕಂಗೆಟ್ಟಿರುವ ಕುವೈತ್‌ನ ಮೂಲ ನಿವಾಸಿಗಳು ವಿದೇಶಿ ವಲಸಿಗರ ಸಂಖ್ಯೆಗೆ ಕಡಿವಾಣ ಹಾಕಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.

ಪ್ರತಿ ವರ್ಷ ಭಾರತಕ್ಕೆ ಬರುತ್ತೆ 36000 ಕೋಟಿ!

ಭಾರತಕ್ಕೆ ಪ್ರತಿವರ್ಷ ವಿದೇಶದಿಂದ ರವಾನೆಯಾಗುವ ಹಣದಲ್ಲಿ ಕುವೈತ್‌ನ ಪಾಲು ದೊಡ್ಡದಿದೆ. 2018ರಲ್ಲಿ ಕುವೈತ್‌ನಲ್ಲಿರುವ ಭಾರತೀಯರು ಸ್ವದೇಶಕ್ಕೆ 36,000 ಕೋಟಿ ರು. ಹಣ ಕಳುಹಿಸಿದ್ದರು. ಈಗ ಕುವೈತ್‌ನಲ್ಲಿ ಪತ್ತೆಯಾಗಿರುವ ಕೊರೋನಾ ಸೋಂಕಿನಲ್ಲಿ ವಿದೇಶೀಯರೇ ಹೆಚ್ಚಾಗಿದ್ದು, ಅದರ ಬಗ್ಗೆ ಸ್ಥಳೀಯರು ಆತಂಕಗೊಂಡಿದ್ದಾರೆ.

43 ಲಕ್ಷ: ಕುವೈತ್‌ನ ಒಟ್ಟು ಜನಸಂಖ್ಯೆ

13 ಲಕ್ಷ: ಮೂಲ ನಿವಾಸಿಗಳು

30 ಲಕ್ಷ: ವಿದೇಶಿ ವಲಸಿಗರು

15 ಲಕ್ಷ: ಕುವೈತ್‌ನಲ್ಲಿರುವ ಭಾರತೀಯರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!