Bomb Blast ಪೇಶಾವರದಲ್ಲಿ ಬಾಂಬ್ ಸ್ಫೋಟ, 30 ಸಾವು, 56 ಮಂದಿ ಗಂಭೀರ ಗಾಯ!

Published : Mar 04, 2022, 04:49 PM IST
Bomb Blast ಪೇಶಾವರದಲ್ಲಿ ಬಾಂಬ್ ಸ್ಫೋಟ, 30 ಸಾವು, 56 ಮಂದಿ ಗಂಭೀರ ಗಾಯ!

ಸಾರಾಂಶ

ಪೇಶಾವರದ ಮಸೀದಿ ಬಳಿ ಬಾಂಬ್ ಸ್ಫೋಟ ಶುಕ್ರವಾರದ ಪ್ರಾರ್ಥನೆಗಾಗಿ ಮಸೀದಿಗೆ ಆಗಮಿಸಿದ್ದ ಜನ ಮಸೀದಿ ಪ್ರವೇಶಕ್ಕೆ ಉಗ್ರರ ಯತ್ನ, ಗುಂಡಿನ ಚಕಮಕಿ ವೇಳೆ ಸ್ಫೋಟ  

ಪೇಶಾವರ(ಮಾ.04): ಒಂದೆಡೆ ಉಕ್ರೇನ್, ರಷ್ಯಾ ನಡುವೆ ಭೀಕರ  ಬಾಂಬ್ ಸ್ಪೋಟ, ಶೆಲ್ ದಾಳಿ, ಗ್ರೇನೇಡ್ ದಾಳಿಗಳು ನಡೆಯುತ್ತಿದ್ದರೆ, ಇತ್ತ ಪಾಕಿಸ್ತಾನದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಪೇಶಾವರದ ಮಸೀದಿಯಲ್ಲಿ ಬಾಂಬ್ ಸ್ಫೋಟಿಸಿದ್ದು 30 ಮಂದಿ ಸಾವನ್ಪಿದ್ದರೆ, 56 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೇಶಾವರದ ಖಿಸಾ ಕ್ವಾನಿ ಬಜಾರ್ ವಲದ ಜಾಮಿಯಾ ಮಸೀದಿಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಶುಕ್ರವಾರದ ವಿಶೇಷ ಪ್ರಾರ್ಥನೆಗೆ ಮುಸ್ಲಿಂ ಬಾಂಧವರು ಮಸೀದಿಗೆ ಆಗಮಿಸಿದ್ದರು. ಈ ವೇಳೆ ಉಗ್ರರುು ಮಸೀದಿಯೊಳಕ್ಕೆ ಗುಂಡಿನ ದಾಳಿ ಮೂಲಕ ಪ್ರವೇಶಿಸಲು ಯತ್ನಿಸಿದ್ದಾರೆ. ಮಸೀದಿ ಹೊರಭಾಗದಲ್ಲಿದ್ದ ಭದ್ರತಾ ಪಡೆ ಪ್ರತಿ ದಾಳಿ ನಡೆಸಿದೆ.  ಉಗ್ರರು ಗುಂಡಿನ ದಾಳಿ ನಡೆಸುತ್ತಲೇ ಮಸೀದಿಯೊಳಕ್ಕೆ ಪ್ರವೇಶಿಸಿದ್ದಾರೆ. ಪ್ರತಿ ದಾಳಿ ವೇಳೆ ಉಗ್ರರ ಬಳಿ ಇದ್ದ ಬಾಂಬ್ ಸ್ಫೋಟಗೊಂಡಿದೆ.

ಮನೆಯೊಂದರಲ್ಲಿ ಭೀಕರ ಸ್ಫೋಟ: ಎಂಟು ಮಂದಿ ದುರ್ಮರಣ

ಮಸೀದಿಯೊಳಗೆ 200ಕ್ಕೂ ಹೆಚ್ಚು ಜನರಿದ್ದರು. ಇನ್ನು ಮಸೀದಿ ಹೊರಭಾಗದಲ್ಲಿ ಅನೆಕ ಜನರಿದ್ದರು. ಏಕಾಏಕಿ ಗುಂಡಿನ ದಾಳಿ ಹಾಗೂ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ 30 ಮಂದಿ ಮೃತ ದೇದಹಗಳನ್ನು ಮಸೀದಿಯೊಗಿಂದ ಹೊರತೆಗೆಯಲಾಗಿದೆ. ಇನ್ನು ಗಾಯಗೊಂಡ 56 ಮಂದಿಯನ್ನು ಸ್ಥಳೀಯ ಲೇಡಿ ರೀಡಿಂಗ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದರಲ್ಲಿ ಬಹುತೇಕರು ಗಂಭೀರವಾಗಿ ಗಾಯಗೊಂಡದ್ದಾರೆ.

ದಾಳಿಯ ಹೊಣೆಯನ್ನ ಯಾವ ಉಗ್ರ ಸಂಘಟನೆ ಹೊತ್ತು ಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಉಗ್ರರನ್ನೇ ಪೋಶಿಸುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ದುಬಾರಿ ಬೆಲೆ ತೆರಬೇಕಾಗಿ ಬಂದಿದೆ. 

Russia Ukraine War: ಉಕ್ರೇನ್ ಮೇಲೆ ವ್ಯಾಕ್ಯೂಮ್  ಬಾಂಬ್ ದಾಳಿ.. ಟಿವಿ ಟವರ್ ಬ್ಲಾಸ್ಟ್!

ಭಾರತದೊಳಗೆ ಅಶಾಂತಿ ಸೃಷ್ಟಿಸಲು ಪಾಕಿಸ್ತಾನ ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವುದು ಹೊಸದೇನಲ್ಲ. ಭಾರತದ ಮೇಲಿನ ಬಹುತೇಕ ಉಕ್ರ ದಾಳಿ ಹಿಂದೆ ಪಾಕಿಸ್ತಾನ ನೇರವ ಕೈವಾಡವಿರುವುದು ಈಗಾಗಲೇ ಸ್ಪಷ್ಟವಾಗಿದೆ.  ಇತ್ತೀಚೆಗೆ ಪಂಜಾಬ್‌ ಗಡಿ ಪ್ರದೇಶಕ್ಕೆ ಪಾಕಿಸ್ತಾನವು ಡ್ರೋನ್‌ ಮೂಲಕ ಕಳಿಸಿದ 4 ಕೇಜಿ ಆರ್‌ಡಿಎಕ್ಸ್‌ ಸ್ಪೋಟಕ, ಒಂದು ಪಿಸ್ತೂಲು ಹಾಗೂ 2 ಪ್ಯಾಕೆಟ್‌ಗಳಲ್ಲಿ ಸುತ್ತಿ ಇರಿಸಿದ್ದ ಬಾಂಬ್‌ ತಯಾರಕ ಸಾಧನಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಜಪ್ತಿ ಮಾಡಿದೆ.

ಪಾಕಿಸ್ತಾನಕ್ಕೆ ಹೊಂದಿಕೊಂಡ ಪಂಜಾಬ್‌ನ ಗುರುದಾಸಪುರ ಗಡಿಯಲ್ಲಿ ಮಂಗಳವಾರ ತಡರಾತ್ರಿ 1 ಗಂಟೆಗೆ ಈ ಡ್ರೋನ್‌ ಪತ್ತೆ ಆಯಿತು. ಶಬ್ದದ ಆಧಾರದ ಮೇರೆಗೆ ಗಡಿಯಿಂದ 2.7 ಕಿ.ಮೀ. ಒಳಗೆ ಡ್ರೋನ್‌ ಪತ್ತೆ ಮಾಡಲಾಯಿತು. ಕೂಡಲೇ ಅದರ ಮೇಲೆ ಪಡೆಗಳು ಗುಂಡು ಹಾರಿಸಿದವು. ಆದರೆ ಡ್ರೋನ್‌ ಕೆಲ ವಸ್ತು ಎಸೆದು ಪಾಕ್‌ಗೆ ಪರಾರಿ ಆಯಿತು ಎಂದು ಬಿಎಸ್‌ಎಫ್‌ ಹೇಳಿದೆ.

ಆಗ ಬಿಎಸ್‌ಎಫ್‌ ಶೋಧ ಕಾರಾರ‍ಯಚರಣೆ ನಡೆಸಿದಾಗ ಘಗ್ಗರ್‌ ಹಾಗೂ ಸಿಂ್ಖಓಲ್‌ ಗ್ರಾಮದ ನಡುವಿನ ಗೋಧಿ ಹೊಲದಲ್ಲಿ ಡ್ರೋನ್‌ ಎಸೆದ ವಸ್ತುಗಳು ಪತ್ತೆ ಆಗಿವೆ. 2 ಹಳದಿ ಬಣ್ಣದ ಪ್ಯಾಕೆಟ್‌ನಲ್ಲಿ 4.7 ಕೇಜಿ ಆರ್‌ಡಿಎಕ್ಸ್‌, ಒಂದು ಚೀನಾ ನಿರ್ಮಿತ ಪಿಸ್ತೂಲು, 22 ಬುಲೆಟ್‌ ಇದ್ದ 2 ಮ್ಯಾಗಜೀನ್‌ಗಳು, 3 ಎಲೆಕ್ಟ್ರಾನಿಕ್‌ ಡೆಟೋನೇಟರ್‌, 1 ಟೈಮರ್‌, ಸ್ಪೋಟಕ ವೈರ್‌, ಸೆಲ್‌ಗಳು, ಸ್ಕೂ್ರ, ಸ್ಟೀಲ್‌ ಕಂಟೇನರ್‌, ನೈಲಾನ್‌ ದಾರ, ಪ್ಲಾಸ್ಟಿಕ್‌ ಪೈಪ್‌, ಪ್ಯಾಕಿಂಗ್‌ ಸಾಧನ ಹಾಗೂ 1 ಲಕ್ಷ ರು. ನಗದು ಸಿಕ್ಕಿವೆ.

ಇವು ಸುಧಾರಿತ ಸ್ಪೋಟಕ (ಐಇಡಿ) ಅಥವಾ ಬಾಂಬ್‌ ತಯಾರಿಸಲು ಬಳಸುವ ಸಾಧನಗಳು. ಇತ್ತೀಚೆಗೆ ಲೂಧಿಯಾನ ಹಾಗೂ ದಿಲ್ಲಿಯ ಗಾಜಿಪುರದಲ್ಲಿ ಸಿಕ್ಕ ಬಾಂಬ್‌ಗಳಲ್ಲಿ ಇದೇ ಅಂಶಗಳಿದ್ದವು ಎಂದು ಬಿಎಸ್‌ಎಫ್‌ ಅಧಿಕಾರಿಗಳು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ