
ಬರ್ಮಿಂಗ್‌ಹ್ಯಾಂ (ಅ.09) ಇಂಗ್ಲೆಂಡ್ ಸಂಸದ ರಾಬರ್ಟ್ ಜೆನ್ರಿಕ್ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲ ಜೆನ್ರಿಕ್ ವಿರುದ್ದ ಆಕ್ರೋಶಗಳು ಭುಗಿಲೆದ್ದಿದೆ. ಭಾರತೀಯರು, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಏಷ್ಯಾ ಜನರೇ ಹೆಚ್ಚು ನೆಲೆಸಿರುವ ಬರ್ಮಿಂಗ್‌ಹ್ಯಾಂ ಕುರಿತು, ಜೆನ್ರಿಕ್ ನಿಂದಾನಾತ್ಮಕ ಹೇಳಿಕೆ ನೀಡಿದ್ದಾರೆ. ಈ ಪ್ರದೇಶ ಸ್ಲಂ ರೀತಿ ಇದೆ, ಒಂದೇ ಒಂದು ಬಿಳಿ ಮುಖ ಕಾಣುತ್ತಿಲ್ಲ. ನಾನು ಭೇಟಿ ನೀಡಿದ ಪ್ರದೇಶಗಳಲ್ಲಿ ಇದು ಅತ್ಯಂತ ಕೆಟ್ಟ ಪ್ರದೇಶ ಎಂದು ಜೆನ್ರಿಕ್ ಹೇಳಿದ್ದಾರೆ.
ರಾಬರ್ಡ್ ಜೆನ್ರಿಕ್ ಬರ್ಮಿಂಗ್‌ಹ್ಯಾಂ ಹ್ಯಾಂಡ್ಸ್‌ವರ್ತ್ ಪ್ರದೇಶಕ್ಕೆ ಭೇಟಿ ನೀಡಿ ಮರಳಿದ್ದರು. ಬಳಿಕ ತಮ್ಮ ಭೇಟಿ ಕುರಿತು ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ ವಿವಾದ ಸೃಷ್ಟಿಸಿದ್ದಾರೆ. ನಾನು ಹ್ಯಾಂಡ್ಸ್‌ವರ್ತ್‌ಗೆ ಭೇಟಿ ನೀಡಿದ್ದೆ. ಈ ಪ್ರದೇಶ ನೋಡಿ ನನಗೆ ಅಚ್ಚರಿಯಾಗಿತ್ತು. ಸರಿಸುಮಾರು ಒಂದೂವರೆ ಗಂಟೆಗಳ ಕಾಲು ನಾನು ಆ ಸ್ಥಳದಲ್ಲಿದ್ದೆ. ಅತ್ಯಂತ ಕೆಟ್ಟ ಏರಿಯಾ ಆಗಿ ಮಾರ್ಪಟ್ಟಿದೆ. ಒಂದು ಬಿಳಿ ಮುಖ ಇಲ್ಲ. ನನಗೆ ಸ್ಲಂಗೆ ಭೇಟಿ ನೀಡಿದ ಅನುಭವವಾಗಿತ್ತು. ನಾನು ಉದ್ದೇಶಿಸಿದ ದೇಶ ಇದಲ್ಲ. ಈ ರೀತಿಯ ಸ್ಥಳದಲ್ಲಿ ನಾನು ಇರಲು ಬಯಸುವುದಿಲ್ಲ ಎಂದು ಜೆನ್ರಿಕ್ ಹೇಳಿದ್ದಾರೆ.
ಬರ್ಮಿಂಗ್‌ಹ್ಯಾಂ ಹ್ಯಾಂಡ್ಸ್‌ವರ್ತ್‌ನಲ್ಲಿ ಏಷ್ಯಾದಿಂದ ಹೋಗಿರುವ ವಲಸಿಗರೇ ಹೆಚ್ಚು. ಈ ಪೈಕಿ ಇಲ್ಲಿ ಶೇಕಡಾ 23ರಷ್ಟು ಭಾರತೀಯರು ನೆಲೆಸಿದ್ದಾರೆ. ಇಲ್ಲಿ ಅತೀ ಹೆಚ್ಚು ಪಾಕಿಸ್ತಾನಿಯರು ಇದ್ದಾರೆ. ಪಾಕಿಸ್ತಾನದಿಂದ ವಲಸೆ ಹೋದವರ ಸಂಖ್ಯೆ ಶೇಕಡಾ 25. ಇನ್ನು ಶೇಕಡಾ 10 ರಷ್ಟು ಬಾಂಗ್ಲಾದೇಶಿಯರು, ಶೇಕಡಾ 16ರಷ್ಟು ಬ್ಲಾಕ್ ಆಫ್ರಿಕನ್ ಅಥವಾ ಕೆಬಿರಿಯನ್, ಶೇಕಡಾ 10ರಷ್ಟು ಇತರ ದೇಶಗಳಿಂದ ಬಂದು ನೆಲೆಸಿದವರು ಇದ್ದಾರೆ. ಇಲ್ಲಿನ ಮೂಲ ನಿವಾಸಿಗಳ ಸಂಖ್ಯೆ ಶೇಕಡಾ 9ರಷ್ಟು ಮಾತ್ರ ಎಂದು ಗಣತಿ ವರದಿ ಹೇಳುತ್ತಿದೆ. ಈ ಪ್ರದೇಶ ಅತೀ ಹೆಚ್ಚು ಏಷ್ಯಾ ಜನರಿಂದಲೇ ತುಂಬಿಕೊಂಡಿದ್ದಾರೆ.
ಜೆನ್ರಿಕ್ ಹೇಳಿಕೆ ವಿವಾದವಾಗುತ್ತಿದ್ದಂತೆ ಆಕ್ರೋಶಗಳು ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ರಾಬರ್ಟ್ ಜೆನ್ರಿಕ್ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ಹ್ಯಾಂಡ್ಸ್‌ವರ್ತ್ ಇಂಗ್ಲೆಂಡ್ ಏರಿಯಾ ರೀತಿ ಕಾಣುತ್ತಿಲ್ಲ. ಇದನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಇದರಲ್ಲಿ ನಿಂದನೆ ಇಲ್ಲ ಎಂದಿದ್ದಾರೆ.
ಜೆನ್ರಿಕ್ ಹೇಳಿಕೆಗೆ ಭಾರತೀಯರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ನೀತಿ, ನಿಯಮಗಳನ್ನು ಪಾಲಿಸುತ್ತಾ ಬದುಕು ಕಟ್ಟಿಕೊಂಡಿದ್ದೇವೆ. ಸ್ಲಂ ರೀತಿ, ಬಿಳಿ ಮುಖ ಹೇಳಿಕೆಗಳು ನಿಂದನೆಯಾಗಿದೆ. ಒಂದು ದೇಶ, ಸಮುದಾಯದ ಜನರ ಮೇಲೆ ಮಾಡಿದ ನಿಂದನೆಯಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ