ಸೇಡಿಗೆ ಸೇಡು: ಬಿಬಿಸಿ ವಾಹಿನಿ ನಿಷೇಧಿಸಿದ ಚೀನಾ!

By Suvarna NewsFirst Published Feb 13, 2021, 1:33 PM IST
Highlights

ವರದಿಗಾರಿಕೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪ| ಬಿಬಿಸಿ ವಾಹಿನಿ ನಿಷೇಧಿಸಿದ ಚೀನಾ

ಬೀಜಿಂಗ್‌(ಫೆ.13): ವರದಿಗಾರಿಕೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಚೀನಾ, ಬ್ರಿಟನ್‌ ಮೂಲದ ಪ್ರತಿಷ್ಠಿತ ಬಿಬಿಸಿ ವಲ್ಡ್‌ರ್‍ ಸುದ್ದಿವಾಹಿನಿಯ ಪ್ರಸಾರವನ್ನು ನಿಷೇಧಿಸಿದೆ.

ಚೀನಾ ಮಾಲಿಕತ್ವದ ವಾಹಿನಿ ‘ಚೀನಾ ಗ್ಲೋಬಲ್‌ ಟೆಲಿವಿಷನ್‌ ನೆಟ್‌ವರ್ಕ್’ ಸಂಸ್ಥೆಯು ಬ್ರಿಟನ್‌ನಲ್ಲಿ ಸುದ್ದಿ ಪ್ರಸಾರ ಮಾಡದಂತೆ ಬ್ರಿಟಿಷ್‌ ಮಾಧ್ಯಮ ನಿಯಂತ್ರಕ ಸಂಸ್ಥೆ ‘ಆಫ್‌ಕಾಮ್‌’, ಇತ್ತೀಚೆಗೆ ಪರವಾನಗಿ ರದ್ದು ಮಾಡಿತ್ತು. ಇದರ ಬೆನ್ನಲ್ಲೇ, ಚೀನಾ ಟೆಲಿವಿಷನ್‌ ಮತ್ತು ರೆಡಿಯೋ ನಿಯಂತ್ರಕ ಸಂಸ್ಥೆ ಗುರುವಾರ ರಾತ್ರಿ ಈ ಆದೇಶ ಹೊರಡಿಸಿದೆ.

ಕೊರೋನಾ ವೈರಸ್‌ ಬಗ್ಗೆ ಮತ್ತು ಅಲ್ಲಿನ ಅಲ್ಪಸಂಖ್ಯಾತ ಸಮುದಾಯ ಉಯಿಗುರ್‌ಗಳ ಕುರಿತಾಗಿ ಬಿಬಿಸಿ ವರದಿಯನ್ನು ಚೀನಾ ಟೀಕಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಸಿ ಸಂಸ್ಥೆ, ಚೀನಾದ ನಿಷೇಧದ ನಿರ್ಧಾರ ತೀವ್ರ ನಿರಾಸೆಯನ್ನು ಉಂಟುಮಾಡಿದೆ ಎಂದು ಹೇಳಿದೆ.

click me!