ಬಾವಲಿಯಿಂದ ಮನುಷ್ಯನಿಗೆ ಹರಡಬಲ್ಲ ಹೊಸ HKU5-CoV-2 ಕೊರೋನಾ ವೈರಸ್ ಪತ್ತೆ

Published : Feb 21, 2025, 08:30 PM ISTUpdated : Feb 21, 2025, 08:43 PM IST
ಬಾವಲಿಯಿಂದ ಮನುಷ್ಯನಿಗೆ ಹರಡಬಲ್ಲ ಹೊಸ HKU5-CoV-2 ಕೊರೋನಾ ವೈರಸ್ ಪತ್ತೆ

ಸಾರಾಂಶ

ಕೋವಿಡ್ ವೈರಸ್ ಹಂದಿಯಿಂದ ಮನುಷ್ಯನಿಗೆ ಹರಡಿದರೆ ಇದೀಗ ಬಾವಲಿಯಿಂದ ಮನುಷ್ಯನಿಗೆ ಹರಡಬಲ್ಲ ಹೊಸ ಕೊರೋನಾ ವೈರಸ್ ಪತ್ತೆಯಾಗಿದೆ. ಚೀನಾ ವಿಜ್ಞಾನಿಗಳು ಈ ವೈರಸ್ ಪತ್ತೆ ಹಚ್ಚಿದ್ದು, ಮತ್ತೊಂದು ಸಾಂಕ್ರಾಮಿಕ ರೋಗದ ಸೂಚನೆ ನೀಡಿದ್ರಾ?  

ಬೀಜಿಂಗ್(ಫೆ.21) ಕೋವಿಡ್ ವೈರಸ್ ಮಾಡಿದ ಅವಾಂತರಗಳ ಕುರಿತು ಎಲ್ಲರಿಗೂ ಗೊತ್ತೆ ಇದೆ. ಚೀನಾದಿಂದ ಹರಡಿದ ಈ ವೈರಸ್ ವಿಶ್ವವನ್ನೇ ಲಾಕ್ ಮಾಡಿತ್ತು. ಚೀನಾದ ಲ್ಯಾಬ್‌ನಲ್ಲಿದ್ದ ಪರೀಕ್ಷಾ ಹಂದಿಯಿಂದ ಈ ವೈರಸ್ ಹರಡಿದೆ ಅನ್ನೋದನ್ನು ಚೀನಾ ದೃಢಪಡಿಸದಿದ್ದರೂ ಹಲವು ದಾಖಲೆಗಳು ಹರಿದಾಡಿದೆ. ಆದರೆ ಇದೀಗ ಬಾವಲಿಯಿಂದ ಮನುಷ್ಯನಿಗೆ ಹರಡಬಲ್ಲ ಹೊಸ ಕೊರೋನಾ ವೈರಸ್ ಪತ್ತೆಯಾಗಿದೆ. ಚೀನಾ ವಿಜ್ಞಾನಿಗಳು ಈ ವೈರಸ್ ಪತ್ತೆ ಹಚ್ಚಿದ್ದಾರೆ. ಇದಕ್ಕೆ ಚೀನಾ ವಿಜ್ಞಾನಿಗಳು HKU5-CoV-2 ಎಂದು ಹೆಸರಿಟ್ಟಿದ್ದಾರೆ. ಆತಂಕ ಎಂದರೆ ಈ ವೈರಸ್ ಕೂಡ ಕೋಲಾಹಲ ಸೃಷ್ಟಿಸಿದ ಕೋವಿಡ್ ವೈರಸ್ SARS-CoV-2 ಜಾತಿಗೆ ಸೇರಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಚೀನಾದ ಬ್ಯಾಟ್ ವುಮನ್ ಎಂದೆ ಜನಪ್ರಿಯವಾಗಿರುವ ವಿರೋಲಜಿಸ್ಟ್ ಶಿ ಝೆಂಗ್ಲಿ ತಮ್ಮ ಸಂಶೋಧನೆಯಲ್ಲಿ ಈ ವೈರಸ್ ಪತ್ತೆ ಹಚ್ಚಿದ್ದಾರೆ. ಗೌಂಗ್ಝು ಲ್ಯಾಬೋರಟರಿಯಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಈ ಸಂಶೋಧನಾ ಅಧ್ಯಯನವ್ನು ವುಹಾನ್‌ನ ವಿರೋಲಜಿ ಸಂಸ್ಥೆ ಪ್ರಕಟಿಸಿದೆ. ಇದೇ ವಿರೋಲಜಿ ಸಂಸ್ಥೆಯಿಂದ ಕೋವಿಡ್ ಹರಡಿತ್ತು. 

ಎಬೋಲಾ ವರ್ಗದ ಮಾರ್‌ಬರ್ಗ್ ವೈರಸ್ ಸ್ಫೋಟ, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಹೊಸದಾಗಿ ಪತ್ತೆಯಾಗಿರುವ HKU5-CoV-2 ಕೊರೋನಾ ವೈರಸ್ ಬಾವಲಿಯಿಂದ ಮನುಷ್ಯನ ದೇಹಕ್ಕೆ ಹರಡುತ್ತದೆ. ಇದು ಕೊರೋನಾ ರೀತಿಯಲ್ಲಿ ಮನುಷ್ಯ ದೇಹದಲ್ಲಿ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ ಎಂದಿದೆ. SARS-CoV-2 ವೈರಸ್ ಸೃಷ್ಟಿಸಿದ ಅವಾಂತರ ಈ HKU5-CoV-2 ವೈರಸ್ ಕೂಡ ಸೃಷ್ಟಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬಾವಲಿಯಿಂದ ಮನುಷ್ಯನಿಗೆ ಹರಡುವ ಕಾರಣ ಈ ವೈರಸ್ ಕೂಡ ಕೋವಿಡ್ ರೀತಿಯಲ್ಲಿ ವೇಗವಾಗಿ ಹರಡುವ ಸಾಧ್ಯತ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಚೀನಾ ಹೊಸ ವೈರಸ್ HKU5-CoV-2 ಸಂಶೋಧನೆ ಸದ್ಯಕ್ಕೆ ಆತಂಕ ಸೃಷ್ಟಿಸಿಲ್ಲ. ಆದರೆ ಬಾವಲಿಯಿಂದ ಯಾವುದೇ ಕ್ಷಣದಲ್ಲೂ ಕೊರೋನಾ ವೈರಸ್ ಹರಡುವ ಸಾಧ್ಯತೆ ಇದೆ. ಚೀನಾದಿಂದಲೇ ಮತ್ತೊಂದು ವೈರಸ್ ಸ್ಫೋಟಗೊಳ್ಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ತೀವ್ರ ಎಚ್ಚರಿಕೆ ವಹಿಸಿರುವ ಚೀನಾ, ಮತ್ತೊಂದು ವೈರಸ್ ಸ್ಫೋಟಕ್ಕೆ ಆಸ್ಪದ ನೀಡದಿರಲು ಮುಂದಾಗಿದೆ. 

2019-20ರಲ್ಲಿ ಚೀನಾದ ವುಹಾನ್ ಲ್ಯಾಬ್‌ನಿಂದ ಕೋವಿಡ್ ವೈರಸ್ ಸ್ಫೋಟಗೊಂಡಿತ್ತು. ಆರಂಭದಲ್ಲಿ ವುಹಾನ್ ನಗರ ತುಂಬ ಕಾಣಿಸಿಕೊಂಡ ಕೋವಿಡ್ ವೈರಸ್ ಬಳಿಕ ಶಾಂಘೈ, ಬೀಜಿಂಗ್ ಹರಡಿತ್ತು. ಚೀನಾ ಸಂಪೂರ್ಣ ಹರಡುವ ಜೊತೆಗೆ ಭಾರತಕ್ಕೂ ಕಾಲಿಟ್ಟಿತ್ತು. ಬಳಿಕ ವಿಶ್ವವೇ ಕೋವಿಡ್‌ನಿಂದ ಸಂಕಷ್ಟ ಎದುರಿಸಿತ್ತು.
ಕರಾಚಿ: ಹೆಚ್ಚಿದ ಉಸಿರಾಟದ ಕಾಯಿಲೆ, ಶೋಚನೀಯ ಸ್ಥಿತಿ ತಲುಪಿದ ಪಾಕಿಸ್ತಾನ ಆರೋಗ್ಯ ಇಲಾಖೆ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!