ವಿಶ್ವದ ಶ್ಲಾಘನೀಯರಲ್ಲಿ ಮೋದಿ, ಬಿಗ್‌ಬಿ, ಸುಧಾ ಮೂರ್ತಿ, ಕೊಹ್ಲಿ!

By Kannadaprabha News  |  First Published Sep 28, 2020, 8:19 AM IST

ವಿಶ್ವದ ಶ್ಲಾಘನೀಯರಲ್ಲಿ ಮೋದಿ, ಬಿಗ್‌ಬಿ, ಸುಧಾ ಮೂರ್ತಿ, ಕೊಹ್ಲಿ|  ವಿಶ್ವದಲ್ಲಿ ಒಬಾಮಾ ನಂ.1, ಮೋದಿ ನಂ.4


ನವದೆಹಲಿ(ಸೆ.28): ವಿಶ್ವದ ಶ್ಲಾಘನೀಯ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ನಟರಾದ ಅಮಿತಾಭ್‌ ಬಚ್ಚನ್‌, ಶಾರುಖ್‌ ಖಾನ್‌, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹಾಗೂ ಬೆಂಗಳೂರಿನ ಇನ್ಪೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಸ್ಥಾನ ಪಡೆದಿದ್ದಾರೆ.

ಬ್ರಿಟನ್‌ ಮೂಲದ ‘ಯು ಗವ್‌’ ಎಂಬ ಅಂತರ್ಜಾಲ ಆಧರಿತ ಮಾರುಕಟ್ಟೆಸಂಶೋಧನಾ ಕಂಪನಿ, ಜನವರಿಯಿಂದ ಮಾಚ್‌ರ್‍ ಮಧ್ಯೆ ಸಮೀಕ್ಷೆ ಮಾಡಿ ಭಾನುವಾರ ಶ್ರೇಯಾಂಕ ಪ್ರಕಟಿಸಿದೆ. ‘42 ದೇಶಗಳ 45 ಸಾವಿರ ಜನರನ್ನು ಸಂದರ್ಶಿಸಿ ಸಿದ್ಧಪಡಿಸಿದ ಈವರೆಗಿನ ಅತಿದೊಡ್ಡ ಸರ್ವೇ ಇದು’ ಎಂದು ಕಂಪನಿ ಹೇಳಿಕೊಂಡಿದೆ. 2014ರಿಂದಲೇ ಈ ಕಂಪನಿ ಸಮೀಕ್ಷೆ ನಡೆಸುತ್ತಿದೆ.

Tap to resize

Latest Videos

undefined

ಮೋದಿ ವಿಶ್ವ ನಂ.4:

ಜನಮೆಚ್ಚುಗೆಗೆ ಪಾತ್ರರಾದ ಶ್ಲಾಘನೀಯರ ಪಟ್ಟಿಯಲ್ಲಿ ವಿಶ್ವದ ಮೊದಲ 3 ಸ್ಥಾನಗಳು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ, ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಪಾಲಾಗಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 4ನೇ ಸ್ಥಾನದಲ್ಲಿ ಇರುವುದು ವಿಶೇಷ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 15ನೇ ಸ್ಥಾನದಲ್ಲಿದ್ದಾರೆ.

ಇನ್ನುಳಿದಂತೆ ನಟ ಅಮಿತಾಭ್‌ ಬಚ್ಚನ್‌ ನಂ.14, ವಿರಾಟ್‌ ಕೊಹ್ಲಿ ನಂ.16 ಹಾಗೂ ಶಾರುಖ್‌ ಖಾನ್‌ ನಂ.17ನೇ ಸ್ಥಾನದಲ್ಲಿದ್ದಾರೆ. ಅಂದರೆ ಟಾಪ್‌ 20ಯಲ್ಲಿ ನಾಲ್ವರು ಭಾರತೀಯರು ಸ್ಥಾನ ಪಡೆದಂತಾಗಿದೆ.

ಭಾರತೀಯರ ಪಟ್ಟಿ, ಮೋದಿ ನಂ.1:

ಭಾರತದ ಅತ್ಯಂತ ಶ್ಲಾಘನೀಯ ಪುರುಷರು ಎಂಬ ಪ್ರತ್ಯೇಕ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನರೇಂದ್ರ ಮೋದಿ ನಂ.1. ಇನ್ನುಳಿದಂತೆ ರತನ್‌ ಟಾಟಾ ನಂ.2, ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ನಂ.3ನೇ ಸ್ಥಾನ ಅಲಂಕರಿಸಿದ್ದಾರೆ. ವಿಶ್ವದ ಶ್ಲಾಘನೀಯ ಕ್ರೀಡಾಪಟುಗಳ ಪಟ್ಟಿಯಲ್ಲಿ ಸಚಿನ್‌ ತೆಂಡೂಲ್ಕರ್‌ ನಂ.7, ವಿರಾಟ್‌ ಕೊಹ್ಲಿ ನಂ.9 ಸ್ಥಾನ ಪಡೆದಿದ್ದಾರೆ.

ಸುಧಾ ಮೂರ್ತಿ ನ.17 ಮಹಿಳೆ

ಶ್ಲಾಘನೀಯ ಮಹಿಳೆಯರ ಪಟ್ಟಿಯಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಪತ್ನಿ ಮಿಶೆಲ್‌ ಒಬಾಮಾ 1ನೇ ಸ್ಥಾನ ಗಳಿಸಿದ್ದಾರೆ. ನಟಿ ಏಂಜೆಲಿನಾ ಜೋಲಿ ನಂ.2, ಬ್ರಿಟನ್‌ ರಾಣಿ ಎಲಿಜಬೆತ್‌ ನಂ.3, ನಟಿ ಪ್ರಿಯಾಂಕಾ ಚೋಪ್ರಾ ನಂ.15, ನಟಿ ದೀಪಿಕಾ ಪಡುಕೋಣೆ ನಂ.16 ಹಾಗೂ ಇನ್ಪೋಸಿಸ್‌ನ ಸುಧಾ ಮೂರ್ತಿ ವಿಶ್ವದ 17ನೇ ಶ್ಲಾಘನೀಯ ಮಹಿಳೆ ಎನ್ನಿಸಿಕೊಂಡಿದ್ದಾರೆ.Close

click me!