ಉದ್ಘಾಟಕರಾಗಿ ಅಲ್ಲ, ಪೂಜಾರಿಯಾಗಿ ಆಗಮಿಸಿ UAE ಮಂದಿರ ಲೋಕಾರ್ಪಣೆ, ಮೋದಿ ಪೂಜೆಗೆ ಸ್ವಾಮೀಜಿ ಮೆಚ್ಚುಗೆ!

Published : Feb 14, 2024, 08:39 PM ISTUpdated : Feb 14, 2024, 09:18 PM IST
ಉದ್ಘಾಟಕರಾಗಿ ಅಲ್ಲ, ಪೂಜಾರಿಯಾಗಿ ಆಗಮಿಸಿ UAE ಮಂದಿರ ಲೋಕಾರ್ಪಣೆ, ಮೋದಿ ಪೂಜೆಗೆ ಸ್ವಾಮೀಜಿ ಮೆಚ್ಚುಗೆ!

ಸಾರಾಂಶ

ಅಬುಧಾಬಿ ಮಂದಿರದಲ್ಲಿ ಮೋದಿ ನೇರವೆರಿಸಿದ ಧಾರ್ಮಿಕ ವಿಧಿವಿಧಾನ ನೋಡಿದರೆ , ಆ ಭಕ್ತಿ, ಶ್ರದ್ಧೆ, ಪಾವಿತ್ರ್ಯತೆ ನಾನು ಹತ್ತಿರದಿಂದ ಗಮನಿಸಿದೆ. ಮೋದಿ ಉದ್ಘಾಟಕರಾಗಿ ಅಲ್ಲ, ಪೂಜಾರಿಯಾಗಿ ಆಗಮಿಸಿ ಮಂದಿರ ಉದ್ಘಾಟಿಸಿದ್ದಾರೆ ಎಂದು ಬಾಪ್ಸ್ ಮಂದಿರ ಸ್ವಾಮೀಜಿ ಹೇಳಿದ್ದಾರೆ. ಸ್ವಾಮೀಜಿ ಮಾತುಗಳ ವಿವರ ಇಲ್ಲಿದೆ.   

ಅಬುಧಾಬಿ(ಫೆ.14) ಅಬುಧಾಬಿ ಮಂದಿರದಲ್ಲಿ ಮೋದಿ ನೇರವೆರಿಸಿದ ಧಾರ್ಮಿಕ ವಿಧಿವಿಧಾನಗಳನ್ನು ಅತ್ಯಂತ ಶ್ರದ್ಧಾ ಪೂರ್ಕವಾಗಿ, ಭಕ್ತಿ ಪೂರ್ವಕಾಗಿ ಹಾಗೂ ಅತ್ಯಂತ ಪಾವಿತ್ರ್ಯತೆಯಿಂದ ನೇರವೇರಿಸಿದ್ದಾರೆ. ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ಮಂದಿರದಲ್ಲಿ ಮೂರ್ತಿಗಳಿಗೆ ನೆರವೇರಿಸಿದ ಪೂಜೆ, ಧಾರ್ಮಿಕ ವಿಧಿವಿಧಾನಗಳನ್ನು ಹತ್ತಿರದಿಂದ ನಾನು ನೋಡಿದ್ದೇನೆ. ಮೋದಿ ನೋಡಿದರೆ, ಅವರು ಈ ಮಂದಿರ ಉದ್ಘಾಟನೆ ಮಾಡಲು ಬಂದಿಲ್ಲ, ಈ ಮಂದಿರ ಪೂಜಾರಿಯಾಗಿ ಬಂದಿದ್ದಾರೆ ಎಂದು ಬಾಪ್ಸ್ ಮಂದಿರದ ಸ್ವಾಮೀಜಿ ಮಹರಾಜ್ ಹೇಳಿದ್ದಾರೆ. 

ಮೋದಿಯಂತ ನಾಯಕ ವಿಶ್ವಕ್ಕೆ ಅಗತ್ಯವಿದೆ. ನಮ್ಮ ದೇಶದ ಸಂಸ್ಕೃತಿಯ ಪ್ರತೀಕ, ನಮ್ಮ ಪರಂಪರೆ, ಸನಾತನದ ಪ್ರತಿನಿಧಿಯಾಗಲು ಯಾರಾದೊಬ್ಬ ನಾಯಕನಿದ್ದರ ಅದು ಪ್ರಧಾನಿ ನರೇಂದ್ರ ಮೋದಿ ಎಂದು ಸ್ವಾಮೀಜಿ ಹೇಳಿದ್ದಾರೆ. ಅಬುಧಾಬಿ ಮಂದಿರದ ಉದ್ಘಾಟನೆ ಮಾತ್ರವಲ್ಲ, ಈ ಮಂದಿರ ಪ್ರತಿ ಹಂತದಲ್ಲೂ ಮೋದಿ ಭಾಗವಾಗಿದ್ದಾರೆ. ಶಿಲನ್ಯಾಸಕ್ಕೂ ಮೊದಲು ಮೋದಿಯ ನೆರವು, ಸಹಾಯ ಅನನ್ಯ ಎಂದು ಸ್ವಾಮೀಜಿ ಹೇಳಿದ್ದಾರೆ.  

ನಾನು ಭಾರತ ಮಾತೆಯ ಪೂಜಾರಿ, ಅಬುಧಾಬಿ ಹಿಂದೂ ಮಂದಿರ ಉದ್ಘಾಟಿಸಿ ಮೋದಿ ಭಾಷಣ!

ಒಂದು ದೇವಸ್ಥಾನ ನಿರ್ಮಿಸಿದರೆ ಅದು ವಸುಧೈವಕುಟುಂಬಕಂ ರೀತಿ ಇರಬೇಕು ಎಂದು ಮೋದಿ ಸೂಚಿಸಿದ್ದರು. ಈ ಮೂಲಕ ಕೇವಲ ಹಿಂದೂ ಸಮುದಾಯ ಮಾತ್ರವಲ್ಲ, ಜಗತ್ತನ್ನೇ ಒಂದು ಕುಟುಂಬವಾಗಿ ನೋಡುವ ಮೋದಿ ಕಲ್ಪನೆ, ಸನಾತನ ಧರ್ಮದ ಸಂಕೇತ ಸೂಚನೆ ನೀಡಿದ್ದಾರೆ. ರಾತ್ರಿ 12 ಗಂಟೆಗೂ ನನಗೆ ಕರೆ ಮಾಡಿ ಮಂದಿರ ಕೆಲಸ ಹೇಗೆ ನಡೆಯುತ್ತಿದೆ, ಯಾವ ಕಾಮಾಗಾರಿ ಎಲ್ಲೀವರೆಗೆ ಆಗಿದೆ ಎಂದು ವರದಿ ಕೇಳುತ್ತಿದ್ದರು. ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದ ನಾಯಕ ನಮ್ಮ ಸಂಸ್ಕೃತಿ, ದೇವಸ್ಥಾನದ ಕುರಿತು ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಸ್ವಾಮೀಜಿ ಹೇಳಿದರು.

ಯುಎಇನ ಬಿಎಪಿಎಸ್‌ ಸ್ವಾಮಿ ನಾರಾಯಣ ಸಂಸ್ಥೆಯು ಅಬುಧಾಬಿಯಲ್ಲಿ ಬೃಹತ್‌ ಹಿಂದೂ ದೇವಸ್ಥಾನ ನಿರ್ಮಿಸಿದೆ. ದೇಗುಲ 27 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, 108 ಅಡಿ ಎತ್ತರ, 262 ಅಡಿ ಉದ್ದ ಮತ್ತು 180 ಅಡಿ ಅಗಲವಿದೆ.ಸ್ವಾಮಿನಾರಾಯಣ , ಅಕ್ಷರ- ಪುರುಷೋತ್ತಮ, ರಾಧಾ - ಕೃಷ್ಣ, ರಾಮ ಸೀತೆ, ಲಕ್ಷ್ಮಣ, ಹನುಮಂತ, ಶಿವ - ಪಾರ್ವತಿ, ಗಣೇಶ, ಕಾರ್ತಿಕೇಯ, ಪದ್ಮಾವತಿ - ವೆಂಕಟೇಶ್ವರ, ಜಗನ್ನಾಥ ಮತ್ತು ಅಯ್ಯಪ್ಪನ ಮೂರ್ತಿಗಳನ್ನು ಈ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ. 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಮಂದಿರದ ಶಂಕುಸ್ಥಾಪನೆ ನೆರವೇರಿಸಿದ್ದರು.  

ಅರಬ್ ಸಂಸ್ಥಾನ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಸ್ಥಾನ ಉದ್ಘಾಟಿಸಿದ ಮೋದಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ