
ಢಾಕಾ(ಮಾ.26): ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿದ್ದಾರೆ. ಎರಡನೇ ದಿನ ನರೇಂದ್ರ ಮೋದಿ ಬಾಂಗ್ಲಾದ ಖುಲ್‌ನಾ ಜಿಲ್ಲೆಯ ಈಶ್ವರಪುರ ಹಳ್ಳಿಯ ಜಶೋರೇಶ್ವರೀ ಕಾಳೀ ಮಂದಿರಕ್ಕೆ ತೆರಳಲಿದ್ದಾರೆ. ಪಿಎಂ ಮೋದಿ ಈ ಪ್ರವಾಸ ಆರಂಭಕ್ಕೂ ಮುನ್ನ ನಾನು ಪೌರಾಣಿಕ ಪರಂಪರೆಯುಳ್ಳ 51 ಶಕ್ತಿಪೀಠಗಳಲ್ಲೊಂದಾದ ಶೋರೇಶ್ವರೀ ಕಾಳೀ ಮಂದಿರದಲ್ಲಿ ದೇವಿ ಕಾಳಿಯ ಪೂಜೆ ನೆರವೇರಿಸಲು ಕಾತುರನಾಗಿದ್ದೇನೆ ಎಂದಿದ್ದರು.
ಪ್ರಧಾನಿ ಮೋದಿ ಗುಣಗಾನ ಮಾಡಿದ ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್
ಈ ಮಂದಿರಕ್ಕಿತ್ತು 100 ದ್ವಾರಗಳು
ಇದು ಬಾಂಗ್ಲಾದೇಶದ ಮೂರನೇ ಅತಿ ಪ್ರಮುಖ ಶಕ್ತಿಪೀಠವಾಗಿದೆ. ಕಾಳೀ ಪೂಜೆ ದಿನ ಇಲ್ಲಿ ಬಹುದೊಡ್ಡ ಉತ್ಸವ ಆಯೋಜಿಸಲಾಗುತ್ತದೆ. ಹಿಂದೆ ಈ ದೇಗುಲಕ್ಕೆ ನೂರು ಸ್ವಾರಗಳಿದ್ದವೆನ್ನಲಾಗಿದೆ. ಜಶೋರೇಶ್ವರೀ ಅಂದರೆ ಜಶೋರದ ದೇವಿ ಎಂದರ್ಥ. ಈ ದೇಗುಲ ಭಾರತದ ಉಪಖಂಡಗಳಲ್ಲಿರುವ ಶಕ್ತಿಪೀಠಗಳಲ್ಲೊಂದು ಎನಮ್ನಲಾಗುತ್ತದೆ. ಹಿಂದೂ ಪರಂಪರೆಯನ್ವಯ ಈ ದೇಗುಲ 51 ಶಕ್ತಿಪೀಠಗಳಲ್ಲೊಂದು. ಹೀಗಾಗೇ ಹಿಂದೂ ಸಮುದಾಯದಲ್ಲಿ ಇದೊಂದು ಪವಿತ್ರ ಸ್ಥಳ ಎನ್ನಲಾಗಿದೆ.
ಮೋದಿ ಬಾಂಗ್ಲಾ ಭೇಟಿ ಹಿಂದೆ ಪಶ್ಚಿಮ ಬಂಗಾಳ ಚುನಾವಣಾ ತಂತ್ರ!
ಪಿಎಂ ಭೇಟಿ ಹಿನ್ನೆಲೆ ದೇಗುಲ ರೆಡಿ
ಮಂದಿರದ ಕಾರ್ಯವಾಹಕ ಜ್ಯೋತಿ ಚಟೋಪಾಧ್ಯಾಯ ಈ ಕುರಿತು ಮಾತನಾಡುತ್ತಾ 'ನಾನು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲು ತಯಾರಾಗಿದ್ದೇನೆ. ಭಾರತದ ಪ್ರಧಾನಿ ಈ ದೇಗುಲಕ್ಕೆ ಭೇಟಿ ನೀಡುತ್ತಾರೆಂದು ಬಹಳ ಖುಷಿಯಾಗಿದೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ