* ಮದ್ಯ ಸೇವಿಸಿದವರ ಪತ್ತೆಗೆ ಬರಲಿದೆ ಹೊಸ ವ್ಯವಸ್ಥೆ
* ಚಾಲಕ ಮದ್ಯಪಾನ ಮಾಡಿದ್ರೆ ಅಮೆರಿಕ ಕಾರು ಚಲಿಸೋಲ್ಲ
* 2026ರಿಂದ ಜಾರಿಗೆ ತರಲು ಅಮೆರಿಕದಿಂದ ಸಿದ್ಧತೆ
ವಾಷಿಂಗ್ಟನ್(ನ.10): ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಂದ ಪ್ರತಿ ವರ್ಷ 10 ಸಾವಿರ ಮಂದಿ ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರ ಹುಡುಕಲು ಅಮೆರಿಕ ಮುಂದಾಗಿದೆ. ಮದ್ಯ ಸೇವಿಸಿದವರು ಕಾರು ಚಾಲನೆಯನ್ನೇ ಮಾಡದಂತೆ ತಡೆಯುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹುಡುಕುವಂತೆ ಆಟೋಮೊಬೈಲ್ ಕಂಪನಿಗಳಿಗೆ ತಾಕೀತು ಮಾಡಿದೆ.
ಅಮೆರಿಕದ ಸಾರಿಗೆ ಇಲಾಖೆ ಅತ್ಯುತ್ತಮ ತಂತ್ರಜ್ಞಾನಗಳನ್ನು ಅವಲೋಕಿಸಿದ ಬಳಿಕ 2026ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದರ ಫಲವಾಗಿ ಲಕ್ಷಾಂತರ ವಾಹನಗಳಲ್ಲಿ ಹೊಸದಾಗಿ ಉಪಕರಣ ಅಳವಡಿಸಬೇಕಾಗುತ್ತದೆ. ಭವಿಷ್ಯದಲ್ಲಿ ಉತ್ಪಾದನೆಯಾಗಬೇಕಾದ ವಾಹನಗಳಲ್ಲಿ ಈ ಉಪಕರಣ ಇರಬೇಕಾಗುತ್ತದೆ.
ಸಂಚಾರ ಸುರಕ್ಷತೆ ಹಾಗೂ ರಸ್ತೆ ಅಪಘಾತ ತಡೆಯುವ ಉದ್ದೇಶದಿಂದ 74 ಲಕ್ಷ ಕೋಟಿ ರು. ಮೊತ್ತದ ಮೂಲಸೌಕರ್ಯ ಪ್ಯಾಕೇಜ್ ಅನ್ನು ಅಮೆರಿಕ ಅಂತಿಮಗೊಳಿಸುತ್ತಿದೆ. ಅಧ್ಯಕ್ಷ ಜೋ ಬೈಡೆನ್ ಅವರು ಶೀಘ್ರದಲ್ಲೇ ಇದಕ್ಕೆ ಅಂಕಿತ ಹಾಕುವ ನಿರೀಕ್ಷೆ ಇದೆ.
ಈಗಾಗಲೇ ಅಮೆರಿಕದಲ್ಲಿ ಮದ್ಯ ಪ್ರಿಯರು ಕಾರು ಚಾಲನೆ ಮಾಡದಂತೆ ತಡೆಯಲು ವ್ಯವಸ್ಥೆಯೊಂದನ್ನು ಬಳಸಲಾಗುತ್ತಿದೆ. ವಾಹನ ಚಾಲೂ ಮಾಡುವ ಲಾಕ್‌ಗೆ ‘ಬ್ರೀತ್ ಅನಲೈಸರ್’ ಉಪಕರಣವನ್ನು ಅಳವಡಿಸಲಾಗಿರುತ್ತದೆ. ಕರ್ನಾಟಕದ ಪೊಲೀಸರು ಮದ್ಯ ಸೇವಿಸಿದವರನ್ನು ಪತ್ತೆ ಹಚ್ಚಲು ಬಳಸುತ್ತಿರುವಂತಹದ್ದೇ ಉಪಕರಣ ಇದು. ಯಾವುದೇ ಚಾಲಕ ವಾಹನ ಏರಿದ ಕೂಡಲೇ ಕೊಳಾಯಿಯನ್ನು ಊದಬೇಕು. ಆತನ ರಕ್ತದಲ್ಲಿ ಹೆಚ್ಚಿನ ಅಂಶದ ಮದ್ಯ ಪತ್ತೆಯಾದರೆ ವಾಹನ ಚಾಲೂ ಆಗುವುದೇ ಇಲ್ಲ. ಆದರೆ ಇದನ್ನೇ ಅಂತಿಮಗೊಳಿಸುವ ಸಾಧ್ಯತೆ ಕ್ಷೀಣವಾಗಿದೆ. ಪ್ರತಿ ಬಾರಿ ವಾಹನ ಏರಿದಾಗಲೂ ಪೈಪ್ ಊದಬೇಕು ಎಂಬುದು ಇದರ ವಿರುದ್ಧ ಇರುವ ಪ್ರಮುಖ ದೂರು.
ಈ ನಡುವೆ ಜನರಲ್ ಮೋಟರ್ಸ್, ಬಿಎಂಡಬ್ಲ್ಯು ಹಾಗೂ ನಿಸಾನ್ ಕಂಪನಿಗಳು ಚಾಲಕರ ಮೇಲೆ ಕಣ್ಣಿಡುವ ವ್ಯವಸ್ಥೆಯನ್ನು ರೂಪಿಸುವೆ. ಕೆಮೆರಾ ಸಹಾಯದಿಂದ ಚಾಲಕನನ್ನು ವೀಕ್ಷಿಸಿ ಎಚ್ಚರಿಕೆ ನೀಡುವ ವ್ಯವಸ್ಥೆ ಇದಾಗಿದೆ. ಆದರೆ ಅಮೆರಿಕ ಸರ್ಕಾರ ಅಂತಿಮಗೊಳಿಸುವ ವ್ಯವಸ್ಥೆ ಯಾವುದು ಎಂಬುದು ತಿಳಿದುಬಂದಿಲ್ಲ.
ಡ್ರಿಂಕ್ & ಡ್ರೈವ್‌ಗಿಂತ ಟಚ್ ಸ್ಕ್ರೀನ್ ಬಳಸುವುದು ಅತ್ಯಂತ ಅಪಾಯಕಾರಿ!
ಆಧುನಿಕ ಯುಗದಲ್ಲಿ ಕಾರಿನ ಫೀಚರ್ಸ್, ತಂತ್ರಜ್ಞಾನ ಊಹಿಸಲು ಅಸಾಧ್ಯವಾದ ಮಟ್ಟಕ್ಕೆ ಬೆಳೆದಿದೆ. ಈಗ ಬಹುತೇಕ ಎಲ್ಲಾ ಕಾರುಗಳಲ್ಲಿ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇದ್ದೆ ಇರುತ್ತದೆ. ಇದು ಬೇಸಿಕ್ ಫೀಚರ್ಸ್ ರೀತಿಯೇ ಆಗಿದೆ. ಸಣ್ಣ ಕಾರೇ ಆಗಿರಲಿ ಅಥವಾ ದೊಡ್ಡ ಐಷಾರಾಮಿ ಕಾರೇ ಆಗಿರಲಿ ಟಚ್ ಸ್ಕ್ರೀನ್ ಫೀಚರ್ಸ್ ನೀಡಲಾಗಿರುತ್ತದೆ. ಇದೀಗ ಅಧ್ಯಯನದ ಪ್ರಕಾರ ಕುಡಿದ ವಾಹನ ಚಲಾಯಿಸುವುದಕ್ಕಿಂತ, ಚಾಲನೆ ವೇಳೆ ಕಾರಿನ ಟಚ್ ಸ್ಕ್ರೀನ್ ಬಳಕೆ ಮಾಡುವುದು ಹೆಚ್ಚು ಅಪಾಯಕಾರಿ ಅನ್ನೋ ಮಾಹಿತಿ ಬಹಿರಂಗವಾಗಿದೆ.
ಲಂಡನ್ ಮೂಲದ ಚಾರಿಟಿ ಬೇಸ್ IAM ರೋಡ್ ಸ್ಮಾರ್ಟ್ ಹಾಗೂ ಟ್ರಾನ್ಸ್‌ಪೋರ್ಟ್ ಹಾಗೂ ಮೊಬಿಲಿಟಿ ಗ್ಲೋಬಲ್ ಸೆಂಟರ್ ಜಂಟಿಯಾಗಿ ವಿಶೇಷ ಕಾಳಜಿ ವಹಿಸಿ ಅಧ್ಯಯನ ಮಾಡಿದೆ. ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕುಡಿದು ವಾಹನ ಚಾಲನೆ ಮಾಡುವುದಕ್ಕಿಂತ, ಚಾಲನೆಯಲ್ಲಿ ಕಾರಿನ ಟಚ್ ಸ್ಕ್ರೀನ್ ಸಿಸ್ಟಮ್ ಬಳಕೆ ಮಾಡಿದಾಗ ಚಾಲಕ ತುರ್ತು ಸಂದರ್ಭಕ್ಕೆ ಪ್ರತಿಕ್ರಿಯಿಸುವ ಸಮಯ ಮತ್ತಷ್ಚ ಕಡಿಮೆಯಾಗಿದೆ.
ಡ್ರೈವಿಂಗ್ ವೇಳೆ ಗಮನೆ ಬೆರೆಡೆ ಸೆಳೆಯುವ ವಸ್ತುಗಳ ಬಳಕೆ ವೇಲೆ ಚಾಲಕನ ಪ್ರತಿಕ್ರಿಯೆ ಸಮಯ
* ಡ್ರಿಂಕ್ ಅಂಡ್ ಡ್ರೈವ್ ವೇಳೆ ಚಾಲಕ ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸುವ ಸರಾಸರಿ ಸಮಯ 12 ಸೆಕೆಂಡ್ ಬಳಿಕ
* ಕಾರಿನ ಆಡಿಯೋ ಮೂಲಕ ಅಥವಾ ಹೆಡ್ ಫೋನ್ ಮೂಲಕ ಮೊಬೈಲ್ ಬಳಕೆ ವೇಳೆ 27 ಸೆಕೆಂಡ್ ಬಳಿಕ
* ವಾಯ್ಸ್ ರೆಕಗ್ನಿಶನ್ ಮೂಲಕ ಸಂಜ್ಞೆಗಳನ್ನು ಆಜ್ಞೆಗಳನ್ನು ನೀಡುವಾಗ 30 ಸೆಕೆಂಡ್ ಬಳಿಕ
* ಚಾಲನೆ ವೇಳೆ ಫೋನ್ ಮೂಲಕ ಮೆಸೇಜ್ ಅಥವಾ ಇತರ ಸಂದೇಶ ಕಳುಹಿಸುವಾಗ 35 ಸೆಕೆಂಡ್ ಬಳಿಕ
* ಒಂದು ಕೈಯಲ್ಲಿ ಫೋನ್ ಹಿಡಿದು ಚಾಲನೆ ವೇಳೆ 46 ಸೆಕೆಂಡ್ ಬಳಿಕ
* ಆ್ಯಂಡ್ರಾಯ್ಡ್ ಆಟೋ ಟಚ್ ಸ್ಕ್ರೀನ್ ಬಳಕೆ ವೇಳೆ 53 ಸೆಕೆಂಡ್ ಬಳಿಕ
* ಆ್ಯಪಲ್ ಕಾರ್ ಪ್ಲೇ ಟಚ್ ಸ್ಕ್ರೀನ್ ಬಳಕೆ ವೇಳೆ 57 ಸೆಕೆಂಡ್ ಬಳಿಕ