
ಸಿಡ್ನಿ (ಡಿ.14) ಇಬ್ಬರು ಶೂಟರ್ ಗನ್ ಹಿಡಿದು ಯೂಹೂದಿಗಳ ಹಬ್ಬದ ಪ್ರದೇಶಕ್ಕೆ ಎಂಟ್ರಿಕೊಟ್ಟು ಸತತ ಗುಂಡಿನ ಸುರಿಮಳೆಗೈದಿದ್ದಾರೆ. ಆಸ್ಟ್ರೇಲಿಯಾ ಸಿಡ್ನಿ ಬಳಿ ಬೊಂಡಿ ಬೀಚ್‌ನಲ್ಲಿ ಈ ಘಟನೆ ನಡೆದಿದೆ. ಇಬ್ಬರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದರ ಪರಿಮಾಮ 10 ಮಂದಿ ಸ್ಥಳಕ್ಕೆ ಮೃತಪಟ್ಟರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗೆ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡ ವ್ಯಕ್ತಿ, ಶೂಟರ್ ಹಿಂಬದಿಯಿಂದ ತೆರಳಿ ಶೂಟರ್ ಜೊತೆ ಗುದ್ದಾಡಿದ್ದಾನೆ. ಬಳಿಕ ಶೂಟರ್ ಕೈಯಿಂದ ಗನ್ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈತನ ಸಾಹಸ ವಿಡಿಯೋದಲ್ಲಿ ಸೆರೆಯಾಗಿದೆ.
ಯಹೂದಿ ಸಮುದಾಯದ ಹಬ್ಬದ ಆಚರಣೆಗೆ ಸಮುದಾಯ ಬಹುತೇಕರು ಸಿಡ್ನಿ ಬಳಿ ಬೊಂಡಿ ಬೀಚ್‌ನಲ್ಲಿ ಸೇರಿದ್ದರು. ಎಲರಲ್ಲಿ ಸಂಭ್ರಮದ ವಾತಾವರಣವಿತ್ತು. ಮಧ್ಯಾಹ್ನ 2.17ರ ವೇಳೆ ಕಪ್ಪು ಬಟ್ಟೆ ಧರಿಸಿದ್ದ ಇಬ್ಬರು ಶೂಟರ್ ಈ ಹಬ್ಬದ ಸ್ಥಳಕ್ಕೆ ಎಂಟ್ರಿಕೊಟ್ಟಿದ್ದಾರೆ. ಬಳಿಕ ಗುಂಡಿನ ದಾಳಿ ನಡೆಸಿದ್ದಾರೆ. 50ಕ್ಕೂ ಹೆಚ್ಚು ಗುಂಡು ಸಿಡಿಸಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ಹಲವು ಅಮಾಯಕರು ಗಾಯಗೊಂಡಿದ್ದಾರೆ. 10 ಮಂದಿ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಹಬ್ಬಕ್ಕೆ ಆಗಮಿಸಿದ ಹಲವರು ಸಿಕ್ಕ ಸಿಕ್ಕ ವಸ್ತು, ಗೊಡೆ, ಮರ, ಕಾರುಗಳ ಬದಿಯಲ್ಲಿ ಪ್ರಾಣ ಉಳಿಸಿಕೊಳ್ಳಲು ಅಡಗಿ ಕುಳಿತಿದ್ದಾರೆ. ಹೀಗೆ ಕಾರಿನ ಬದಿಯಲ್ಲಿ ಅಡಗಿ ಕುಳಿತ ವ್ಯಕ್ತಿ ಹತ್ತಿರದಿಂದಲೇ ಶೂಟರ್ ದಾಳಿ ನೋಡಿ ಬೆಚ್ಚಿ ಬಿದ್ದಿದ್ದಾರೆ. ಮರ ಬಳಿ ನಂತಿದ್ದ ಶೂಟರ್ ಅಮಾಯಕರ ಮೇಲೆ ಗುಂಡಿನ ದಾಳಿ ಮುಂದುವರಿಸಿದ್ದ. ಧೈರ್ಯ ಮಾಡಿಗ ಯೂಹೂದಿ ಹಿಂಬದಿಯಿಂದ ತೆರಳಿ ಶೂಟರ್ ಗನ್ ಹಾಗೂ ಕೊರಳನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಈ ವೇಳೆ ಜಟಾಪಟಿ ಶುರುವಾಗಿದೆ. ಸಾಹಸ ಮೆರೆದ ಯೂಹೂದಿ ಶೂಟರ್ ಕೈಯಲ್ಲಿದ್ದ ಗನ್ ಕಸಿದುಕೊಂಡಿದ್ದಾನೆ. ಗನ್ ಕಸಿದ ವ್ಯಕ್ತಿ ಬಳಿಕ ಗನ್ ಕೆಳಗಿಟ್ಟಿದ್ದಾನೆ. ಅಷ್ಟೊತ್ತಿಗೆ ಶೂಟರ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಇಬ್ಬರು ಶೂಟರ್‌ಗಳ ಪೈಕಿ ಒಬ್ಬನನ್ನು ಪೊಲೀಸರು ಹತ್ಯೆ ಮಾಡಿದ್ದರೆ. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಮತ್ತೊಬ್ಬ ಶೂಟರ್‌ನ ಅರೆಸ್ಟ್ ಮಾಡಲಾಗಿದೆ. ಭಯೋತ್ಪಾದ ಕೃತ್ಯವಾಗಿರಬಹುದೇ ಅನ್ನೋ ಅನುಮಾನಗಳು ಕಾಡುತ್ತಿದೆ. ಯಹೂದಿಗಳ ಗುರಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಶೂಟರ್ ಹೆಚ್ಚು ಮಕ್ಕಳು ಹಾಗೂ ಹಿರಿಯ ನಾಗರೀಕರನ್ನು ಟಾರ್ಗೆಟ್ ಮಾಡಿದ್ದಾರೆ. 100ಕ್ಕೂ ಹೆಚ್ಚು ಜನ ಸೇರಿದ್ದ ಹಬ್ಬದ ವಾತಾವರಣದಲ್ಲಿ ಈ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಥೋನಿ ಆಲ್ಬನಿಸ್, ಪೊಲೀಸ್ ಸೂಚನೆಗಳನ್ನು ಪಾಲಿಸಲು ಮನವಿ ಮಾಡಿದ್ದಾರೆ. ಈ ಘಟನೆಯಲ್ಲಿ ಮಡಿದವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿರುವ ಪ್ರಧಾನಿ ಆಲ್ಬನಿಸ್, ದಾಳಿ ಮಾಡಿದ ಇಬ್ಬರು, ಇದರ ಹಿಂದಿನ ಶಕ್ತಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ