* ರಷ್ಯಾ ಉಕ್ರೇನ್ ಯುದ್ಧಕ್ಕೆ ನಲುಗಿದ ಜನಸಾಮಾನ್ಯರು
* ತನ್ನ ಪ್ರಜೆಗಳ ರಕ್ಷಣೆಗೆ ಮುಂದಾದ ಭಾರತ
* ಖಾರ್ಕೀವ್‌ನಿಂದ ಭಾರತೀಯರ ಸ್ಥಳಾಂತರಕ್ಕೆ 6 ತಾಸು ಯುದ್ಧ ನಿಲ್ಲಿಸಲು ಮುಂದಾದ ರಷ್ಯಾ
ಕೀವ್(ಮಾ.03): ರಷ್ಯಾ ನಡುವಿನ ರಷ್ಯಾ-ಉಕ್ರೇನ್ ಯುದ್ಧ (Russia Ukraine War) ಆರಂಭವಾಗಿ ಎಂಟನೇ ದಿನ. ಏತನ್ಮಧ್ಯೆ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿ ವಾಯುಪಡೆಯ (Indian Air Force) ಸಹಾಯವನ್ನೂ ಪಡೆಯಲಾಗುತ್ತಿದೆ. ಏತನ್ಮಧ್ಯೆ, ಭಾರತ ಸರ್ಕಾರ. ರಷ್ಯಾದೊಂದಿಗೆ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದೆ ಎಂಬೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಖಾರ್ಕಿವ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ರಷ್ಯಾ 6 ಗಂಟೆಗಳ ಕಾಲ ಯುದ್ಧ ನಿಲ್ಲಿಸಲು ಒಪ್ಪಿಕೊಂಡಿದೆ. ಅಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ಜನರನ್ನು ಸುರಕ್ಷಿತವಾಗಿ ಖಾರ್ಕಿವ್‌ನಿಂದ (Kharkiv) ಉಕ್ರೇನ್ ಸುತ್ತಲಿನ ದೇಶಗಳ ಗಡಿಗಳಿಗೆ ಕೊಂಡೊಯ್ಯಲು ಈ ಸಮಯ ನೀಡಿದೆ, ಎಂದು National Security Analyst ನಿತಿನ್ ಎ ಗೋಖಲೆ ಸೇರಿ ಹಲವರು ಟ್ವೀಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಸಾವಿರಾರು ವಿದ್ಯಾರ್ಥಿಗಳು ಇನ್ನೂ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಭಾರತೀಯರನ್ನು ಹೊರಹೋಗಲು ಬಿಡುತ್ತಿಲ್ಲ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾತ್ರಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿದ್ದು, ಈ ಸಂದರ್ಭದಲ್ಲಿ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ವಿಷಯವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಸಾಧ್ಯವಿರುವ ಎಲ್ಲ ನೆರವು ನೀಡಲು ರಷ್ಯಾ ಸಿದ್ಧವಿದೆ ಎಂದು ರಷ್ಯಾ ಅಧ್ಯಕ್ಷರು ಪ್ರಧಾನಿಗೆ ತಿಳಿಸಿದ್ದಾರೆ. ಈ ನಡುವೆ ಉಕ್ರೇನ್ ಸೇನೆಯು ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಮಾನವ ಗುರಾಣಿಯಾಗಿ ಬಳಸುತ್ತಿದೆ ಎಂದೂ ದೂರಿತ್ತು ಎಂಬುವುದು ಉಲ್ಲೇಖನೀಯ.
ಭಾರತದ ಧ್ವಜಕ್ಕೆ ಸಮ್ಮಾನ, ಅಮೆರಿಕಾ ಬ್ರಿಟನ್ ಜಪಾನ್‌ಗೆ ಅವಮಾನ: ರಷ್ಯಾ ಮಾಡಿದ್ದೇನು ನೋಡಿ
ಖಾರ್ಕಿವ್‌ನಲ್ಲಿ ದಾಳಿ ನಡೆಸುವ ಮೊದಲು, ರಷ್ಯಾ ಕಳೆದ ರಾತ್ರಿ ಆರು ಗಂಟೆಗಳ ಕಾಲ ಯುದ್ಧವನ್ನು ನಿಲ್ಲಿಸಿ ಎಲ್ಲ ಭಾರತೀಯರನ್ನು ಅಲ್ಲಿಂದ ಹೊರತರಲು ಅವಕಾಶ ನೀಡಿದೆ ಎಂದು ನಿತಿನ್ ಗೋಖಲೆ ಟ್ವೀಟ್ ಮಾಡಿದ್ದಾರೆ.
The Russians apparently agreed to a six hour window for allowing safe passage to all Indians in Kharkiv before an all-out assault begins tonight . The deadline is 2130 IST, about 3 hours from now.
— Nitin A. Gokhale (@nitingokhale)ಯುದ್ಧ ಪ್ರಾರಂಭವಾದಾಗಿನಿಂದ, ಯುಎಸ್ ಅಥವಾ ಚೀನಾ ತಮ್ಮ ನಾಗರಿಕರನ್ನು ಸ್ಥಳಾಂತರಿಸುವಲ್ಲಿ ಅಸಹಾಯಕವಾಗಿವೆ. ಖಾರ್ಕಿಯಾದಲ್ಲಿ ಯುದ್ಧವನ್ನು ಆರು ಗಂಟೆಗಳ ಕಾಲ ನಿಲ್ಲಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಉಳಿದ ವಿದ್ಯಾರ್ಥಿಗಳನ್ನು ಸಹ ಹೊರತೆಗೆಯಲಾಗುವುದು ಎಂದು ಭಾವಿಸುತ್ತೇವೆ ಎಂದಿದ್ದಾರೆ.
ಸಹಾಯ ಮಾಡುವ ಭರವಸೆ ನೀಡಿದ್ದ ಪುಟಿನ್
ಪ್ರಧಾನಿ ಮೋದಿಯವರೊಂದಿಗಿನ ಮಾತುಕತೆಯ ಸಂದರ್ಭದಲ್ಲಿ, ವ್ಲಾಡಿಮಿರ್ ಪುಟಿನ್ ಭಾರತೀಯ ವಿದ್ಯಾರ್ಥಿಗಳನ್ನು ಯುದ್ಧ ವಲಯದಿಂದ ಸುರಕ್ಷಿತವಾಗಿ ಕಳುಹಿಸಲು ಮತ್ತು ಅವರನ್ನು ಭಾರತಕ್ಕೆ ಕಳುಹಿಸಲು ಅಗತ್ಯವಿರುವ ಎಲ್ಲಾ ಸೂಚನೆಗಳನ್ನು ನೀಡಲಾಗಿದೆ ಎಂದು ಭರವಸೆ ನೀಡಿದ್ದರು. ರಷ್ಯಾದ ಸೈನ್ಯವು ಈ ದಿಕ್ಕಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ. ಭಾರತೀಯ ವಿದ್ಯಾರ್ಥಿಗಳ ತಕ್ಷಣದ ರಕ್ಷಣೆಗಾಗಿ ರಷ್ಯಾದ ಸೇನೆಯು ಖಾರ್ಕಿವ್‌ನಿಂದ ರಷ್ಯಾಕ್ಕೆ ಸುರಕ್ಷಿತ ಕಾರಿಡಾರ್ ನಿರ್ಮಿಸುವ ಕುರಿತು ಅವರು ಮಾತನಾಡಿದರು. ಮರುದಿನವೇ, ರಷ್ಯಾ ಯುದ್ಧವನ್ನು 6 ಗಂಟೆಗಳ ಕಾಲ ನಿಲ್ಲಿಸಲು ಒಪ್ಪಿಕೊಂಡಿತು.
Russia Ukraine Crisis:ಭಾರತಕ್ಕೆ S-400 ಕ್ಷಿಪಣಿ ಪೂರೈಕೆ ಮೇಲೆ ನಿರ್ಬಂಧ ಪರಿಣಾಮ ಬೀರದು: ರಷ್ಯಾ ರಾಯಭಾರಿ
ನಮ್ಮ ನಾಗರಿಕರನ್ನೂ ಕರೆತನ್ನಿ, ಭಾರತಕ್ಕೆ ನೇಪಾಳ ಮನವಿ!
ಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದು, ಅಲ್ಲಿರುವ ಜನರು ಕಂಗಾಲಾಗಿದ್ದಾರೆ. ವಿದೇಶೀ ಪ್ರಜೆಗಳು ಹೇಗಾದರೂ ತಮ್ಮ ತಾಯ್ನಾಡಿಗೆ ಸೇರಲು ಯತ್ನಿಸುತ್ತಿದ್ದಾರೆ. ಹೀಗಿರುವಾಗ ಭಾರತ ಸರ್ಕಾರ ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳನ್ನು ತವರು ನಾಡಿಗೆ ಕರೆತರುವ ಸಲುವಾಗಿ 'ಆಪರೇಷನ್ ಗಂಗಾ' ಆರಂಭಿಸಿದೆ. ಈ ಮಿಷನ್‌ನಡಿ ಅನೇಕ ವಿದ್ಯಾರ್ಥಿ ಹಾಗೂ ಪ್ರಜೆಗಳನ್ನು ಭಾರತಕ್ಕೆ ಮರಳಿ ಕರೆತಂದಿದೆ. ಏರ್ ಇಂಡಿಯಾ ನಡೆಸುತ್ತಿದ್ದ ಈ ಆಪರೇಷನ್‌ಗೆ ಈಗ ಭಾರತೀಯ ವಾಯುಸೇನೆಯ ಬಲವೂ ಸಿಕ್ಕಿದೆ. ಸದ್ಯ ಭಾರತದ ಈ ಕಾರ್ಯಾಚರಣೆ ಬೆನ್ನಲ್ಲೇ ಸಿಕ್ಕಿಬಿದ್ದಿರುವ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು ನೇಪಾಳಿ ಸರ್ಕಾರವು ಭಾರತ ಸರ್ಕಾರದ ಬಳಿ ಮನವಿ ಮಾಡಿದೆ. ನೇಪಾಳದ ಮನವಿಗೆ ನವದೆಹಲಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ.