Ukraine Crisis: ನಮ್ಮ ನಾಗರಿಕರನ್ನೂ ಕರೆತನ್ನಿ, ಭಾರತಕ್ಕೆ ನೇಪಾಳ ಮನವಿ!

Published : Mar 03, 2022, 01:47 PM ISTUpdated : Mar 03, 2022, 02:40 PM IST
Ukraine Crisis: ನಮ್ಮ ನಾಗರಿಕರನ್ನೂ ಕರೆತನ್ನಿ, ಭಾರತಕ್ಕೆ ನೇಪಾಳ ಮನವಿ!

ಸಾರಾಂಶ

* ಉಕ್ರೇನ್‌ನಲ್ಲಿ ರಷ್ಯಾ ದಾಳಿಗೆ ಜನರು ಕಂಗಾಲು * ದೇಶ ಬಿಟ್ಟು ಹೊರಡುತ್ತಿದ್ದಾರೆ ವಿದೆಶೀ ನಾಗರಿಕರು * ಭಾರತದಿಂದ ಆಪರೇಷನ್ ಗಂಗಾ ಆರಂಭ * ನಮ್ಮ ನಾಗರಿಕರನ್ನೂ ಸ್ಥಳಾಂತರಿಸಿ ಎಂದು ನೇಪಾಳ ಮನವಿ

ನವದೆಹಲಿ(ಮಾ.03): ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದು, ಅಲ್ಲಿರುವ ಜನರು ಕಂಗಾಲಾಗಿದ್ದಾರೆ. ವಿದೇಶೀ ಪ್ರಜೆಗಳು ಹೇಗಾದರೂ ತಮ್ಮ ತಾಯ್ನಾಡಿಗೆ ಸೇರಲು ಯತ್ನಿಸುತ್ತಿದ್ದಾರೆ. ಹೀಗಿರುವಾಗ ಭಾರತ ಸರ್ಕಾರ ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳನ್ನು ತವರು ನಾಡಿಗೆ ಕರೆತರುವ ಸಲುವಾಗಿ 'ಆಪರೇಷನ್ ಗಂಗಾ' ಆರಂಭಿಸಿದೆ. ಈ ಮಿಷನ್‌ನಡಿ ಅನೇಕ ವಿದ್ಯಾರ್ಥಿ ಹಾಗೂ ಪ್ರಜೆಗಳನ್ನು ಭಾರತಕ್ಕೆ ಮರಳಿ ಕರೆತಂದಿದೆ. ಏರ್‌ ಇಂಡಿಯಾ ನಡೆಸುತ್ತಿದ್ದ ಈ ಆಪರೇಷನ್‌ಗೆ ಈಗ ಭಾರತೀಯ ವಾಯುಸೇನೆಯ ಬಲವೂ ಸಿಕ್ಕಿದೆ. ಸದ್ಯ ಭಾರತದ ಈ ಕಾರ್ಯಾಚರಣೆ ಬೆನ್ನಲ್ಲೇ ಸಿಕ್ಕಿಬಿದ್ದಿರುವ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು ನೇಪಾಳಿ ಸರ್ಕಾರವು ಭಾರತ ಸರ್ಕಾರದ ಬಳಿ ಮನವಿ ಮಾಡಿದೆ. ನೇಪಾಳದ ಮನವಿಗೆ ನವದೆಹಲಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ.

ಆಪರೇಷನ್ ಗಂಗಾ: ಭಾರತವು, ಉಕ್ರೇನ್‌ನ ತನ್ನ ನೆರೆಯ ದೇಶಗಳಾದ ಪೋಲೆಂಡ್, ಸ್ಲೋವಾಕಿಯಾ, ಹಂಗೇರಿ ಮತ್ತು ರೊಮೇನಿಯಾ ಮೂಲಕ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು ಮೆಗಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಮಿಷನ್‌ನಡಿ ಈಗಾಗಲೇ ಸಾವಿರಾರು ಭಾರತೀಯರು ಮರಳಿ ತಾಯ್ನಾಡು ಸೇರಿದ್ದಾರೆ. 

ಫೆಬ್ರವರಿ 28 ರಂದು, ಉಕ್ರೇನ್ ಬಿಕ್ಕಟ್ಟಿನ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ, ಯುಎನ್‌ಗೆ ಭಾರತೀಯ ರಾಯಭಾರಿ ಟಿಎಸ್ ತಿರುಮೂರ್ತಿ, "ನಮ್ಮ ನೆರೆಹೊರೆಯವರು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿರುವವರಿಗೆ ಸಹಾಯ ಮಾಡಲು ನಾವು ಸಿದ್ಧರಾಗಿದ್ದೇವೆ . ನಮ್ಮ ಸಹಾಯವನ್ನು ಪಡೆಯಬಹುದು. ಎಲ್ಲಾ ಯುಎನ್ ಮಾನವೀಯ ಪ್ರಯತ್ನಗಳನ್ನು ಬೆಂಬಲಿಸುತ್ತೇವೆ ಎಂದಿದ್ದಾರೆ.

ಹಿಂದೆ, ಭಾರತವು ಬಿಕ್ಕಟ್ಟಿನ ಸಮಯದಲ್ಲಿ ನೆರೆಯ ದೇಶಗಳಿಂದ ಪ್ರಜೆಗಳನ್ನು ಸ್ಥಳಾಂತರಿಸಿದೆ. COVID ಬಿಕ್ಕಟ್ಟಿನ ಮಧ್ಯೆ, ಭಾರತವು ಮಾಲ್ಡೀವ್ಸ್, ನೇಪಾಳ ಮತ್ತು ಬಾಂಗ್ಲಾದೇಶದ ಪ್ರಜೆಗಳನ್ನು ಚೀನಾದಿಂದ ಸ್ಥಳಾಂತರಿಸಲು ಸಹಾಯ ಮಾಡಿತ್ತು. ಕಳೆದ ವರ್ಷ, ಅಫ್ಘಾನಿಸ್ತಾನ ತಾಲಿಬಾನ್ ವಶಪಡಿಸಿಕೊಂಡಾಗ, ಭಾರತವು ನೇಪಾಳಿ ಪ್ರಜೆಗಳನ್ನು ಅಲ್ಲಿಂದ ಸ್ಥಳಾಂತರಿಸಲು ಸಹಾಯಹಸ್ತ ಚಾಚಿತ್ತು ಎಂಬುವುದು ಉಲ್ಲೇಖನೀಯ. ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಸಹಾಯ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ತಾತ್ವಿಕವಾಗಿ, ಇತರ ದೇಶಗಳಿಗೆ ಸಹಾಯ ಮಾಡಲು ನಾವು ಯಾವಾಗಲೂ ಸಿದ್ಧರಿದ್ದೇವೆ. ನಾವು ಯಾವುದೇ ನಿರ್ದಿಷ್ಟ ವಿನಂತಿಗಳನ್ನು ಪಡೆದರೆ, ನಾವು ಸಹಾಯ ಮಾಡುತ್ತೇವೆ ಎಂದಿದ್ದಾರೆ.

ಭಾರತದ ವಿದೇಶಾಂಗ ಸಚಿವಾಲಯ ಉಕ್ರೇನ್‌ ಬಿಡುವಂತೆ ಪ್ರಕಟಣೆ ಹೊರಡಿಸಿದ ಬಳಿಕ, ಸುಮಾರು 17,000 ಭಾರತೀಯ ಪ್ರಜೆಗಳು ಉಕ್ರೇನ್ ತೊರೆದಿದ್ದಾರೆ. ಕಳೆದ 24 ಗಂಟೆಗಳಲ್ಲಿ, ಆಪರೇಷನ್ ಗಂಗಾ ಅಡಿಯಲ್ಲಿ, ಆರು ವಿಮಾನಗಳು ಭಾರತಕ್ಕೆ ಬಂದಿಳಿದಿವೆ. ಈವರೆಗೆ ಒಟ್ಟು ಭಾರತಕ್ಕೆ ಬಂದಿಳಿದ ವಿಮಾನಗಳ ಸಂಖ್ಯೆ 15 . ಈ ಮೂಲಕ ಒಟ್ಟಾರೆಯಾಗಿ ಉಕ್ರೇನ್‌ನಿಂದ 3,352  ಮಂದಿ ಭಾರತೀಯರನ್ನು ಕರೆತರಲಾಗಿದೆ. '

MEA ಕಂಟ್ರೋಲ್‌ ರೂಂಗೆ 9,874 ಕರೆಗಳಿಗೆ ಸ್ಪಂದಿಸಿದೆ ಮತ್ತು 7,657 ಇಮೇಲ್‌ಗಳಿಗೆ ಪ್ರತಿಕ್ರಿಯಿಸಿದೆ.

ಭಾರತೀಯ ವಾಯುಪಡೆ ಕೂಡ ಆಪರೇಷನ್ ಗಂಗಾಗೆ ಸಾತ್ ಕೊಟ್ಟಿದೆ. ಬುಕಾರೆಸ್ಟ್‌ನಿಂದ ಭಾರತೀಯ ವಾಯುಪಡೆಯ C-17 ನ ನಾಲ್ಕನೇ ವಿಮಾನವು ಉಕ್ರೇನ್‌ನಿಂದ 180 ಭಾರತೀಯ ಪ್ರಜೆಗಳೊಂದಿಗೆ ಹೊರಟು ಇಂದು ಮುಂಜಾನೆ ಘಾಜಿಯಾಬಾದ್‌ನಲ್ಲಿರುವ ಹಿಂದಾನ್ ಏರ್ ಬೇಸ್‌ಗೆ ಬಂದಿಳಿಯಿತು. ಇಂದು, IAF ಯುದ್ಧ ಪೀಡಿತ ದೇಶದ ನೆರೆಹೊರೆಯ ವಿವಿಧ ಸ್ಥಳಗಳಿಗೆ ಇನ್ನೂ ಮೂರು ವಿಮಾನಗಳನ್ನು ಕಳುಹಿಸಿದೆ. 

ಖಾರ್ಕೀವ್‌ನಿಂದ ಭಾರತೀಯರ ಸ್ಥಳಾಂತರಕ್ಕೆ 6 ತಾಸು ಯುದ್ಧ ನಿಲ್ಲಿಸಲು ಮುಂದಾದ ರಷ್ಯಾ

ರಷ್ಯಾ ನಡುವಿನ ರಷ್ಯಾ-ಉಕ್ರೇನ್ ಯುದ್ಧ ಆರಂಭವಾಗಿ ಎಂಟನೇ ದಿನ. ಏತನ್ಮಧ್ಯೆ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿ ವಾಯುಪಡೆಯ ಸಹಾಯವನ್ನೂ ಪಡೆಯಲಾಗುತ್ತಿದೆ. ಏತನ್ಮಧ್ಯೆ, ಭಾರತ ಸರ್ಕಾರ. ರಷ್ಯಾದೊಂದಿಗೆ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದೆ. ಖಾರ್ಕಿವ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ರಷ್ಯಾ 6 ಗಂಟೆಗಳ ಕಾಲ ಯುದ್ಧ ನಿಲ್ಲಿಸಲು ಒಪ್ಪಿಕೊಂಡಿದೆ. ಅಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ಜನರನ್ನು ಸುರಕ್ಷಿತವಾಗಿ ಖಾರ್ಕಿವ್‌ನಿಂದ ಉಕ್ರೇನ್ ಸುತ್ತಲಿನ ದೇಶಗಳ ಗಡಿಗಳಿಗೆ ಕೊಂಡೊಯ್ಯಲು ಈ ಸಮಯ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ
ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ