ಅಫ್ಘಾನ್‌ನ ತಾಲಿಬಾನ್ ಸಂಪುಟದಲ್ಲಿ ಅರ್ಧಕ್ಕಿಂತ ಹೆಚ್ಚು ಮೋಸ್ಟ್ ವಾಂಟೆಡ್ ಭಯೋತ್ಪಾದಕರು!

By Suvarna NewsFirst Published Sep 11, 2021, 8:20 AM IST
Highlights

* ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಸಮಾರಂಭ

* ಆಯ್ದ ದೇಶಗಳಿಗಷ್ಟೇ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಮಂತ್ರಣ

* ಸಮಾರಂಭದಿಂದ ದೂರ ಉಳಿದ ರಷ್ಯಾ

ಕಾಬೂಲ್(ಸೆ.11): ತಾಲಿಬಾನ್ ಸರ್ಕಾರ ರಚನೆ ಸಮಾರಂಭದಿಂದ ರಷ್ಯಾ ದೂರ ಉಳಿದಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಸಮಾರಂಭದಲ್ಲಿ ರಷ್ಯಾ ಭಾಗಿಯಾಗುವುದಿಲ್ಲ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ. ಆದರೆ ಕೆಲ ದಿನಗಳ ಹಿಂದೆ ರಷ್ಯಾದ ಮೇಲ್ಮನೆಯ ವಕ್ತಾರರು ರಷ್ಯಾದ ರಾಯಭಾರಿ ಮಟ್ಟದ ಅಧಿಕಾರಿಗಳು ತಾಲಿಬಾನ್ ಸರ್ಕಾರದ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿದ್ದರೆಂಬುವುದು ಉಲ್ಲೇಖನೀಯ.

ಪ್ರಮಾಣವಚನಕ್ಕೆ ಆಯ್ದ ದೇಶಕ್ಕೆ ತಾಲಿಬಾನ್ ಆಮಂತ್ರಣ

ಸರ್ಕಾರದ ಪ್ರಮಾಣವಚನಕ್ಕೆ ತಾಲಿಬಾನ್ ಕೆಲವೇ ದೇಶಗಳಿಗೆ ಆಹ್ವಾನ ನೀಡಿದೆ. ಇದರಲ್ಲಿ ರಷ್ಯಾ, ಪಾಕಿಸ್ತಾನ, ಚೀನಾ, ಟರ್ಕಿ, ಕತಾರ್, ಇರಾನ್ ಸೇರಿವೆ.

ಸೆಪ್ಟೆಂಬರ್ 6 ರಂದು ಸರ್ಕಾರ  ರಚನೆ ಬಗ್ಗೆ ಘೋಷಣೆ

ಸೆಪ್ಟೆಂಬರ್ 6 ರಂದು, ತಾಲಿಬಾನ್ ಪಂಜಶೀರ್ ಪ್ರಾಂತ್ಯ ಸ್ವಾಧೀನಪಡಿಸಿಕೊಂಡಿತ್ತು. ಇದಾಧ ಬಳಿಕರ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚಿಸುವುದಾಗಿ ಘೋಷಿಸಿತ್ತು.

ಸಂಪುಟದಲ್ಲಿ ಅರ್ಧಕ್ಕಿಂತ ಹೆಚ್ಚು ಮೋಸ್ಟ್ ವಾಂಟೆಡ್ ಭಯೋತ್ಪಾದಕರು

ವಾಸ್ತವವಾಗಿ, ತಾಲಿಬಾನ್ 33 ಸದಸ್ಯರ ಕ್ಯಾಬಿನೆಟ್ ಘೋಷಿಸಿದೆ. ತಜ್ಞರ ಪ್ರಕಾರ, ಈ ಸಂಖ್ಯೆಯ ಅರ್ಧದಷ್ಟು ಜನರು ವಿಶ್ವದ ಅತ್ಯಂತ ಬೇಡಿಕೆಯ ಭಯೋತ್ಪಾದಕರಾಗಿರುವವರೇ ಮಂತ್ರಿಗಳಾಗಿದ್ದಾರೆ. ಇನ್ನು ತಾಲಿಬಾನ್‌ ಸರ್ಕಾರದ ಗೃಹ ಸಚಿವಾಲಯದ ಮಂತ್ರಿಯಾದವರ ತಲೆಗೆ ಅಮೆರಿಕ 5 ಮಿಲಿಯ್ ಡಾಲರ್ ಬಹುಮಾನ ಘೋಷಿಸಿದೆ ಎಂಬುವುದು ಉಲ್ಲೇಖನೀಯ

click me!