
ಕಾಬೂಲ್(ಸೆ.11): ತಮ್ಮ ಆಡಳಿತದ ವಿರುದ್ಧದ ಪ್ರತಿರೋಧವನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲ್ಲ ಎಂದು ಇತ್ತೀಚೆಗಷ್ಟೇ ಘೋಷಣೆ ಮಾಡಿದ್ದ ತಾಲಿಬಾನ್ ಉಗ್ರರು, ದೇಶದಲ್ಲಿ ನಡೆಸಲು ಉದ್ದೇಶಿಸುವ ಪ್ರತಿಭಟನೆಗಳ ಮೇಲೆ ಹಲವು ನಿರ್ಬಂಧಗಳನ್ನು ಜಾರಿ ಮಾಡಿದ್ದಾರೆ.
ಪ್ರತಿಭಟನೆ ಕೈಗೊಳ್ಳುವ 24 ತಾಸು ಮುನ್ನ ಇದಕ್ಕೆ ನ್ಯಾಯಾಂಗ ಇಲಾಖೆಯಿಂದ ಅನುಮತಿ ಪಡೆಯಲೇಬೇಕು. ಜೊತೆಗೆ ಪ್ರತಿಭಟನೆ ನಡೆಯುವ ಸ್ಥಳ, ಉದ್ದೇಶ, ಸಮಯ, ಘೋಷಣೆಗಳು ಸೇರಿದಂತೆ ಪ್ರತಿಭಟನೆಗೆ ಸಂಬಂಧಿಸಿದ ಇನ್ನಿತರ ಮಾಹಿತಿಗಳನ್ನು ಸರ್ಕಾರದ ಜತೆ ಹಂಚಿಕೊಳ್ಳಬೇಕು ಎಂದು ತಾಲಿಬಾನ್ ಹೇಳಿದೆ.
ಪ್ರತಿಭಟನೆ ಆಯೋಜನೆಯಾಗುವ 24 ಗಂಟೆಗಳ ಮುಂಚಿತವಾಗಿ ಪ್ರತಿಭಟನೆ ಕುರಿತಾದ ವಿವರಣೆಯನ್ನು ಭದ್ರತಾ ಸಂಸ್ಥೆಗಳ ಜತೆಗೂ ಹಂಚಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ತಾಲಿಬಾನ್ ಸರ್ಕಾರ ರಚನೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ತಾಲಿಬಾನಿಗಳ ವಿರುದ್ಧ ದೇಶದ ಹಲವು ಭಾಗಗಳಲ್ಲಿ ಜನ ಸಾಮಾನ್ಯರಿಂದ ಪ್ರತಿಭಟನೆಗಳು ಹೆಚ್ಚುತ್ತಿವೆ. ಈ ಪ್ರತಿಭಟನೆಗಳನ್ನು ಹತ್ತಿಕ್ಕುವ ದುರುದ್ದೇಶದಿಂದ ತಾಲಿಬಾನ್ ಉಗ್ರ ಸಂಘಟನೆ ಈ ನಿರ್ಧಾರ ಕೈಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ