ಆಸ್ಟ್ರಾಜೆನೆಕಾದ ಆ್ಯಂಟಿಬಾಡಿ ಕಾಕ್‌ಟೇಲ್‌ ಔಷಧ ವಿಫಲ!

By Suvarna NewsFirst Published Jun 16, 2021, 9:45 AM IST
Highlights

* ಭಾರೀ ನಿರೀಕ್ಷೆ ಹುಟ್ಟಿಸಿದ್ದ ಆಸ್ಟ್ರಾಜೆನೆಕಾ, ಕಂಪನಿಯ ಆ್ಯಂಡಿಬಾಡಿ ಕಾಕ್‌ಟೇಲ್‌ ಔಷಧಿ

* ಆಸ್ಟ್ರಾಜೆನೆಕಾದ ಆ್ಯಂಟಿಬಾಡಿ ಕಾಕ್‌ಟೇಲ್‌ ಔಷಧ ವಿಫಲ

* ಕೋವಿಡ್‌ ಸೋಂಕು ತಡೆಯುವಲ್ಲಿ ಶೇ.33ರಷ್ಟುಮಾತ್ರ ಸಫಲ

ಲಂಡನ್‌(ಜೂ.16): ಭಾರೀ ನಿರೀಕ್ಷೆ ಹುಟ್ಟಿಸಿದ್ದ ಆಸ್ಟ್ರಾಜೆನೆಕಾ (ಆಕ್ಸ್‌ಫರ್ಡ್‌ ವಿವಿ ಜೊತೆಗೂಡಿ ಕೋವಿಶೀಲ್ಡ್‌ ಲಸಿಕೆ ಅಭಿವೃದ್ಧಿಪಡಿಸಿದ ಕಂಪನಿ), ಕಂಪನಿಯ ಆ್ಯಂಡಿಬಾಡಿ ಕಾಕ್‌ಟೇಲ್‌ ಔಷಧಿಯು ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ವಿಫಲವಾಗಿದೆ. ಪರೀಕ್ಷೆಗೆ ಒಳಗಾದವರಲ್ಲಿ ಶೇ.33ರಷ್ಟುಜನರಲ್ಲಿ ಮಾತ್ರವೇ ಔಷಧವು ಕೋವಿಡ್‌ ಲಕ್ಷಣಗಳನ್ನು ತಡೆಯುವಲ್ಲಿ ಸಫಲವಾಗಿದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.

ಆಗಷ್ಟೇ ಸೋಂಕಿಗೆ ತುತ್ತಾಗಿದ್ದವರಲ್ಲಿ, ಸೋಂಕಿನ ಲಕ್ಷಣಗಳನ್ನು ತಡೆಯಲು ಔಷಧವು ಯಶಸ್ವಿಯಾಗುವುದೇ ಎಂಬುದರ ಪತ್ತೆಯಾಗಿ ಅಮೆರಿಕ ಮತ್ತು ಬ್ರಿಟನ್‌ನಲ್ಲಿ 1121 ಜನರನ್ನು ಈ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಔಷಧ ಪಡೆದ 23 ಸ್ವಯಂ ಸೇವಕರಲ್ಲಿ ಸೋಂಕಿನ ಲಕ್ಷಣ ಕಂಡುಬಂದರೆ, ಡಮ್ಮಿ ಡೋಸ್‌ ಪಡೆದ 17 ಜನರಲ್ಲಿ ಸೋಂಕಿನ ಲಕ್ಷಣ ಪತ್ತೆಯಾಗಿತ್ತು.

ಆದರೆ ಲಸಿಕೆ ನೀಡುವ ವೇಳೆ ಸೋಂಕಿಗೆ ತುತ್ತಾದವರ ಮೇಲೆ, ಲಸಿಕೆ ಸ್ವಲ್ಪ ಪ್ರಮಾಣದ ಪರಿಣಾಮಗಳನ್ನು ತೋರಿದೆ. ಇನ್ನು ಲಸಿಕೆ ಪಡೆದ ವಾರದ ಬಳಿಕ ಸೋಂಕಿಗೆ ತುತ್ತಾದವರಲ್ಲಿ ಶೇ.51ರಷ್ಟುಜನರಲ್ಲಿ ಮಾತ್ರವೇ ಸೋಂಕಿನ ಲಕ್ಷಣಗಳು ಕಂಡುಬಂದಿತ್ತು ಎಂದು ಅಧ್ಯಯನ ವರದಿ.

ಈ ಲಸಿಕೆ ಬಗ್ಗೆ ಭಾರೀ ನಿರೀಕ್ಷೆ ಇದ್ದ ಕಾರಣ, ಅಮೆರಿಕ ಸರ್ಕಾರ 7 ಲಕ್ಷ ಡೋಸ್‌ ಮತ್ತು ಬ್ರಿಟನ್‌ ಸರ್ಕಾರ 10 ಲಕ್ಷ ಡೋಸ್‌ಗೆ ಆರ್ಡರ್‌ ನೀಡಿತ್ತು.

click me!