
ರಿಗಾ (ಫೆ.26): ಉಕ್ರೇನಿನ (Ukraine) ಮೇಲೆ ರಷ್ಯಾ (Russia) ಸೇನಾದಾಳಿ ನಡೆಸಿದ್ದು ನೆರೆಯ ಬಾಲ್ಟಿಕ್ ದೇಶಗಳಲ್ಲಿ (Baltic States) ಯುದ್ಧ ಭೀತಿಯನ್ನು ಸೃಷ್ಟಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) 1991ಕ್ಕೂ ಪೂರ್ವದ ಸೋವಿಯತ್ ಒಕ್ಕೂಟವನ್ನು ಮರಳಿ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಊಹಾಪೋಹದ ಹಿನ್ನೆಲೆಯಲ್ಲಿ ಉಕ್ರೇನಿನ ನಂತರ ನೆರೆಯ ಬಾಲ್ಟಿಕ್ ದೇಶಗಳನ್ನು ವಶಪಡಿಸಿಕೊಳ್ಳುವುದೇ ರಷ್ಯಾದ ಗುರಿಯಾಗಬಹುದು ಎಂದು ಬಾಲ್ಟಿಕ್ ದೇಶದ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.
ಬಾಲ್ಟಿಕ್ ದೇಶಗಳಾದ ಎಸ್ಟೋನಿಯಾ, ಲಾತ್ವಿಯಾ ಹಾಗೂ ಲಿಥುವೇನಿಯಾವನ್ನು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷ ಸ್ಟಾಲಿನ್ (Stalin) ವಶಪಡಿಸಿಕೊಂಡಿದ್ದರು. 1991ರಲ್ಲಿ ಸೋವಿಯತ್ ಒಕ್ಕೂಟದ ವಿಘಟನೆಯ ನಂತರ ಇವು ಸ್ವತಂತ್ರ್ಯ ರಾಷ್ಟ್ರಗಳೆಂದು ಘೋಷಿಸಿಕೊಂಡಿದ್ದವು. 2004ರಲ್ಲಿ ಇವು ನ್ಯಾಟೋ ಸೇರಿಕೊಂಡಿದ್ದವು.
ಉಕ್ರೇನಿನಲ್ಲೇ ರಷ್ಯಾದ ದಾಳಿಯನ್ನು ತಡೆಯದಿದ್ದರೆ ಸೇನಾಪಡೆಗಳ ಮುಂದಿನ ಗುರಿ ಬಾಲ್ಟಿಕ್ ದೇಶಗಳಾಗುವ ಸಾಧ್ಯತೆಯಿದೆ ಎಂದು ಎಸ್ಟೋನಿಯಾ, ಲಾತ್ವಿಯಾ ಹಾಗೂ ಲಿಥುವೇನಿಯಾ ಅಧ್ಯಕ್ಷರು ನ್ಯಾಟೋವನ್ನು ಕೋರಿಕೊಂಡಿದ್ದಾರೆ. ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಬಾಲ್ಟಿಕ್ ದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
Russia-Ukraine War: ಉಕ್ರೇನ್‌ನಲ್ಲಿ ಕನ್ನಡಿಗರು ಸಿಲುಕಿದ್ದರೆ ಈ ಸಂಖ್ಯೆಗೆ ಕರೆ ಮಾಡಿ
ನಾವು ಏಕಾಂಗಿ ಎಂದ ಉಕ್ರೇನ್ ಅಧ್ಯಕ್ಷ: ಬಲಿಷ್ಠ ರಷ್ಯಾದ (Russia) ವಿರುದ್ಧ ಹೋರಾಟ ಮಾಡಿ ಎಂದು ನಮ್ಮನ್ನು ಏಕಾಂಗಿಯಾಗಿ ಬಿಡಲಾಗಿದೆ. ಸದ್ಯ ಜಗತ್ತಿನ ಮುಂದೆ ನಾವು ಏಕಾಂಗಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (President Volodymyr Zelensky) ಹೇಳಿದ್ದಾರೆ. ಗುರುವಾರ ತಡರಾತ್ರಿ ದೇಶದ ಜನತೆಯನ್ನು ಉದ್ದೇಶಿಸಿ ನೀಡಿದ ವಿಡಿಯೋ (Video) ಭಾಷಣದಲ್ಲಿ ಝೆಲೆನ್ಸ್ಕಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ರಷ್ಯಾ ತನ್ನ ಆಕ್ರಮಣವನ್ನು ಆರಂಭಿಸಿದ ಈವರೆಗೂ ಉಕ್ರೇನ್ ನಲ್ಲಿ 137 ವ್ಯಕ್ತಿಗಳ ಸಾವಾಗಿದೆ. ಇದರಲ್ಲಿ ಸೈನಿಕರು ಹಾಗೂ ನಾಗರೀಕರೂ ಸೇರಿದ್ದಾರೆ. ರಷ್ಯಾ ನಮ್ಮ ಮೇಲೆ ಯುದ್ಧ ಸಾರಿದ ಬಳಿಕ ಜಗತ್ತು ನಮ್ಮನ್ನು ಏಕಾಂಗಿಯಾಗಿ ಹೋರಾಟಕ್ಕೆ ಬಿಟ್ಟಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ, ಉಕ್ರೇನ್ ದೇಶವನ್ನು ಉಳಿಸಿಕೊಳ್ಳಲು ಯಾವ ಬೆಲೆಯನ್ನಾದರೂ ತೆರಲು ಸಿದ್ಧವಿದ್ದೇವೆ ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (joe biden), ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಉಕ್ರೇನ್ ನೆಲದಲ್ಲಿ ರಷ್ಯಾದ ಸೇನಾಪಡೆಗಳೊಂದಿಗೆ ಯುದ್ಧದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ನ್ಯಾಟೋ ರಾಷ್ಟ್ರಗಳಲ್ಲಿ ತಮ್ಮ ಸೇನಾ ತುಕಡಿ ಇರಲಿದೆ ಎಂದು ತಿಳಿಸಿದ್ದಾರೆ.
"ನಮ್ಮ ರಾಜ್ಯವನ್ನು ರಕ್ಷಿಸಲು ನಾವು ಏಕಾಂಗಿಯಾಗಿದ್ದೇವೆ" ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಧ್ಯರಾತ್ರಿಯ ನಂತರ ರಾಷ್ಟ್ರವನ್ನು ಉದ್ದೇಶಿಸಿ ವೀಡಿಯೊ ಭಾಷಣದಲ್ಲಿ ಹೇಳಿದರು. "ನಮ್ಮೊಂದಿಗೆ ಹೋರಾಡಲು ಯಾರು ಸಿದ್ಧರಾಗಿದ್ದಾರೆ? ಸದ್ಯದ ಮಟ್ಟಿಗೆ ನನಗೆ ಯಾರೂ ಕಾಣುತ್ತಿಲ್ಲ. ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವದ ಗ್ಯಾರಂಟಿ ನೀಡಲು ಯಾರು ಸಿದ್ಧರಾಗಿದ್ದಾರೆ? ಎಲ್ಲರೂ ನಮ್ಮ ಸ್ಥಿತಿ ಕಂಡು ಭಯಪಟ್ಟಿದ್ದಾರೆ" ಎಂದು ಅವರು ಹೇಳಿದರು.
Russia Ukraine Crisis: ಪುಟಿನ್ ಎದುರು ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕ್ ಪ್ರಧಾನಿ!
ಗುರುವಾರ ಮುಂಜಾನೆ ದಾಳಿಯ ಪ್ರಾರಂಭದಿಂದ 137 ಉಕ್ರೇನಿಯನ್ನರು, ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಝೆಲೆನ್ಸ್ಕಿ ಮಾಹಿತಿ ನೀಡಿದರು. ಇನ್ನು 316 ಮಂದಿಗೆ ತೀವ್ರ ರೂಪದ ಗಾಯಗಳಾಗಿವೆ ಎಂದಿದ್ದಾರೆ. ರಷ್ಯಾದ "ವಿಧ್ವಂಸಕ ಗುಂಪುಗಳು" ರಾಜಧಾನಿ ಕೈವ್ ಅನ್ನು ಪ್ರವೇಶಿಸಿವೆ ಎಂದು ಝೆಲೆನ್ಸ್ಕಿ ತಿಳಿಸಿದ್ದಲ್ಲದೆ, ನಗರದ ನಾಗರಿಕರು ಜಾಗರೂಕರಾಗಿರಲು ಮತ್ತು ಕರ್ಫ್ಯೂ ಅನ್ನು ಗಮನಿಸುವಂತೆ ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ