ಹಾರಾಟದ ನಡುವೆ ಪ್ರಯಾಣಿಕ ವಿಮಾನದ ಎಂಜಿನ್ ಸ್ಪೋಟಕ್ಕೆ ತುರ್ತು ಭೂಸ್ವರ್ಶ, ದೃಶ್ಯ ಸೆರೆ

Published : Feb 13, 2026, 08:58 PM IST
Arik Air Flight

ಸಾರಾಂಶ

ಹಾರಾಟದ ನಡುವೆ ಪ್ರಯಾಣಿಕ ವಿಮಾನದ ಎಂಜಿನ್ ಸ್ಪೋಟಕ್ಕೆ ತುರ್ತು ಭೂಸ್ವರ್ಶ, ವಿಮಾನದ ಎಂಜಿನ್‌ನಲ್ಲಿ ಸ್ಫೋಟದ ಬೆನ್ನಲ್ಲೇ ವಿಮಾನದಲ್ಲಿ ಪ್ರಯಾಣಿಕರು ಆತಂಗಗೊಂಡಿದ್ದಾರೆ. ಈ ಭೀಕರ ದೃಶ್ಯ ಸೆರೆಯಾಗಿದೆ. 

ನೈಜೀರಿಯಾ (ಫೆ.13)ವಿಮಾನದಲ್ಲಿ ಕಾಣಿಸಿಕೊಳ್ಳುವ ಸಣ್ಣ ತಾಂತ್ರಿಕ ದೋಷ, ಸಣ್ಣ ನಿರ್ಲಕ್ಷ್ಯ ದೊಡ್ಡ ಅಪಾಯಕ್ಕೆ ದಾರಿ ಮಾಡಿಕೊಡಲಿದೆ. ಇತ್ತೀಚೆಗಿನ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿಮಾನ ದುರಂತ ಈ ಸಾಲಿಗೆ ಸೇರಿಕೊಂಡಿದೆ. ಇದೀಗ 80 ಪ್ರಯಾಣಿಕರನ್ನು ಹೊತ್ತ ಪ್ಯಾಸೆಂಜರ್ ಫ್ಲೈಟ್ ಎಂಜಿನ್ ಸ್ಫೋಟಗೊಂಡಿದೆ. ಭೀಕರ ಶಬ್ದ ಕೇಳಿಸಿದ ಬೆನ್ನಲ್ಲೇ ವಿಮಾನದ ನಿಯಂತ್ರಣ ತಪ್ಪಿದೆ. ಪ್ರಯಾಣಿಕರು ಆತಂಕಗೊಂಡಿದ್ದಾರೆ. ಚೀರಾಟಗಳು ಆರಂಭಗೊಂಡಿದೆ. ಬರೋಬ್ಬರಿ 27,000 ಅಡಿ ಎತ್ತರದಲ್ಲಿ ವಿಮಾನ ಪ್ರಯಾಣದ ನಡುವೆ ಈ ಘಟನೆ ದಕ್ಷಿಣ ನೈಜೀರಿಯಾದಲ್ಲಿ ಸಂಭವಿಸಿದೆ. ಆದರೆ ಪೈಲೆಟ್ ಹರಸಹಾಸ ಮಾಡಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಬೋಯಿಂಗ್ 737-700 ವಿಮಾನ 80 ಪ್ರಯಾಣಿಕರನ್ನು ಹೊತ್ತು ಲಾಗೋಸ್‌ನಿಂದ ನೈಜೀರಿಯಾದ ಪೋರ್ಟ್ ಹಾರ್‌ಕೋರ್ಟ್‌ಗೆ ಪ್ರಯಾಣ ಬೆಳೆಸಿತ್ತು. 7.24ರ ಹೊತ್ತಿಗೆ ಮುಹಮ್ಮದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ವಿಮಾನ ಬರೋಬ್ಬರಿ 27,000 ಅಡಿ ಎತ್ತರದಲ್ಲಿ ವಿಮಾನ ಹಾರಾಟ ನಡೆಸುತ್ತಿತ್ತು. ವಿಮಾನ ವೇಗವಾಗಿ ಸಾಗುತ್ತಿದ್ದಂತೆ ವಿಮಾನದ ಎಡಭಾಗದ ಎಂಜಿನ್‌ನಲ್ಲಿ ದೊಡ್ಡ ಶಬ್ದ ಕೇಳಿಸಿದೆ. ಒಂದು ಬಾರಿ ವಿಮಾನ ನಿಯಂತ್ರಣ ತಪ್ಪಿದೆ.

ವಿಮಾನದ ಸಿಬ್ಬಂದಿಗಳು ನೇರವಾಗಿ ಪೈಲೆಟ್‌ಗೆ ಮಾಹಿತಿ ನೀಡಿದ್ದಾರೆ. ಇತ್ತ ಪ್ರಯಾಣಿಕರು ಶಬ್ದ ಕೇಳಿದೊಡನೆ ಆತಂಕಗೊಂಡಿದ್ದಾರೆ. ಹಲವು ಪ್ರಯಾಣಿಕರು ಚೀರಾಡಿದ್ದಾರೆ. ಕೆಲವರು ಎಂಜಿನ್ ಸ್ಫೋಟಗೊಂಡ ಬಳಿಕ ಮೊಬೈಲ್ ಮೂಲಕ ವಿಡಿಯೋ ಸೆರೆ ಹಿಡಿದಿದ್ದಾರೆ. ಇತ್ತ ಪೈಲೆಟ್ ತಾಳ್ಮೆಯಿಂದ ವಿಮಾನ ನಿಯಂತ್ರಿಸಿ ಏರ್ ಕಂಟ್ರೋಲ್‌ಗೆ ಮಾಹಿತಿ ನೀಡಲಾಗಿದೆ. ತಕ್ಷಣವೇ ಏರ್ ಟ್ರಾಪಿಕ್ ಕಂಟ್ರೋಲ್ ಸಿಬ್ಬಂದಿಗಳು ತುರ್ತು ಭೂಸ್ವರ್ಶಕ್ಕೆ ಮಾಹಿತಿ ನೀಡಿದ್ದಾರೆ.

27,000 ಅಡಿ ಎತ್ತರಿಂದ ಹತ್ತಿರದ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡುವುದು ಸವಾಲಾಗಿತ್ತು. ಪ್ರಮುಖವಾಗಿ ಅಲ್ಲೀವರೆಗೆ ಎಂಜಿನ್ ಬಿಡಿ ಭಾಗಗಳು, ಕವರ್ ಪ್ಲೇಟ್ ಗಾಳಿಯ ವೇಗಕ್ಕೆ ತೂರಿ ಹೋಗುವ ಸಾಧ್ಯತೆ ಇತ್ತು. ಇದರಂತೆ ಎಂಜಿನ್ ಹೊರಭಾಗದ ಕವರ್ ಪ್ಲೇಟ್ ಸೇರಿದಂತೆ ಹೊದಿಕೆಗಳು ಗಾಳಿಯಲ್ಲಿ ತೂರಿ ಹೋಗಿದೆ. ಪರಿಸ್ಥಿತಿ ಗಂಭೀರವಾಗತೊಡಗಿದೆ. ಆದರೆ ಪೈಲೆಟ್ ಹತ್ತಿರದ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಎಲ್ಲಾ ಪ್ರಯಾಣಿಕರು ಸುರಕ್ಷಿತ

ವಿಮಾನದಲ್ಲಿ ಸಿಬ್ಬಂದಿಗಳು,ಪೈಲೆಟ್ ಸೇರಿ ಒಟ್ಟು 80 ಮಂದಿ ಇದ್ದರು. ಹಾರಾಟದ ನಡುವೆ ಎಂಜಿನ್ ಸ್ಫೋಟಗೊಂಡರೂ ವಿಮಾನವನ್ನು ಯಶಸ್ವಿಯಾಗಿ ಭೂಸ್ಪರ್ಶ ಮಾಡಲಾಗಿದೆ. ವಿಮಾನದಲ್ಲಿದ್ದ ಎಲ್ಲರು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ. ನೈಜಿರೀಯ ಸುರಕ್ಷತಾ ಮಂಡಳಿ ಈ ಘಟನೆ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಯಾವ ಕಾರಣದಿಂದ ಎಂಜಿನ್ ಸ್ಫೋಟಗೊಂಡಿದೆ ಅನ್ನೋ ಕುರಿತು ತನಿಖೆ ನಡೆಯುತ್ತಿದೆ. ಇತ್ತ ಎರಿಕ್ ಏರ್ ಸಂಸ್ಥೆ ಘಟನೆಗೆ ಪ್ರಯಾಣಿಕರಲ್ಲಿ ಕ್ಷಮೆ ಕೇಳಿದೆ. ಇದೇ ವೇಳೆ ಪ್ರಯಾಣಿಕರಿಗೆ ಬೇರೆ ವಿಮಾನ ವ್ಯವಸ್ಥೆ ಮಾಡಿದೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ವರ್ಷದ ಕಾಯುವಿಕೆಯ ನಂತರ 79ನೇ ವರ್ಷದಲ್ಲಿ 8 ಕೋಟಿಯ ಲಾಟರಿ ಗೆದ್ದ ಬಾಲಿವುಡ್‌ ನಿರ್ಮಾಪಕ!
ಬಾಂಗ್ಲಾದೇಶ ಚುನಾವಣೆಯಲ್ಲಿ ತಾರೀಖ್ ರೆಹಮಾನ್ ಗೆಲುವಿನಿಂದ ಭಾರತಕ್ಕೇನು ಲಾಭ?