ಫೇಸ್‌ಬುಕ್ ಫ್ರೆಂಡ್‌ ಭೇಟಿಯಾಗಲು ಬಂದ ಅಮೆರಿಕದ ಟಿಕ್‌ಟಾಕರ್‌, ಪಾಕಿಸ್ತಾನಿ ಸ್ನೇಹಿತರಿಂದ ಗ್ಯಾಂಗ್‌ರೇಪ್‌!

By Suvarna News  |  First Published Jul 20, 2022, 3:48 PM IST

ಟೂರಿಸ್ಟ್‌ ವೀಸಾದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲು ಬಂದಿದ್ದ ಅಮೆರಿಕದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಪಾಕಿಸ್ತಾನದಲ್ಲಿ ನಡೆದ ಈ ಘಟನೆಯ ನಂತರ ಎಫ್‌ಐಆರ್ ದಾಖಲಾಗಿದೆ. ಮಹಿಳೆ ಕಳೆದ 7 ತಿಂಗಳಿನಿಂದ ಪಾಕಿಸ್ತಾನದಲ್ಲಿ ನೆಲೆಸಿದ್ದರು ಎಂಬುವುದು ಉಲ್ಲೇಖನೀಯ.
 


ಇಸ್ಲಮಾಬಾದ್(ಜು.20): ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 21 ವರ್ಷದ ಅಮೆರಿಕದ ಯುವತಿಯೊಬ್ಬಳ ಮೇಲೆ ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಗಿರಿಧಾಮದಲ್ಲಿರುವ ಫೋರ್ಟ್ ಮನ್ರೋನಲ್ಲಿರುವ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.  ಅಮೆರಿಕದ ಟಿಕ್‌ಟಾಕರ್‌ ಸೋಶಿಯಲ್‌ ಮೀಡಿಯಾ ಫ್ರೆಂಡ್‌ ಭೇಟಿಯಾಗಲು ಬಂದಿದ್ದರು, ಆದರೆ ಅದೇ ಸ್ನೇಹಿತರೆಲ್ಲಾ ಸೇರಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಲಾಹೋರ್‌ನಿಂದ ಸುಮಾರು 500 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ. ಪ್ರಕರಣವು ಜುಲೈ 17 ರಂದು ನಡೆದಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ಹೇಳೋದೇನು?

Tap to resize

Latest Videos

ಮಾಹಿತಿಯ ಪ್ರಕಾರ, ಸಂತ್ರಸ್ತೆ ಅಮೇರಿಕನ್ ಮಹಿಳೆ ಬ್ಲಾಗರ್ ಮತ್ತು ಟಿಕ್ಟೋಕರ್. ಅವರು ಫೇಸ್‌ಬುಕ್‌ನಲ್ಲಿ ಪೇಜ್‌ ಒಂದನ್ನೂ ನೋಡಿಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾದ ಮೂಲಕ ಆಕೆ ಮುಜ್ಮಿಲ್ ಮತ್ತು ಅಜಾನ್ ಗೆ ಸ್ನೇಹಿತೆಯಾಗಿದ್ದಾರೆ. ಎಲ್ಲರೂ ಒಟ್ಟಿಗೆ ಬ್ಲಾಗ್ ಮಾಡಲು ಒಂದು ಸ್ಥಳದಲ್ಲಿ ಭೇಟಿಯಾಗಲು ಯೋಜಿಸಿದರು. ಇದಾದ ನಂತರ, ಫೋರ್ಟ್ ಮುನ್ರೋದಲ್ಲಿ ಚಿತ್ರೀಕರಣದ ಯೋಜನೆಯನ್ನು ಪಾಕಿಸ್ತಾನಿ ಸ್ನೇಹಿತರಿಬ್ಬರ ಕರೆಯ ಮೇರೆಗೆ ಸಿದ್ಧಪಡಿಸಲಾಯಿತು. ಪೊಲೀಸ್ ಅಧಿಕಾರಿಗಳ ಪ್ರಕಾರ, ಅಮೇರಿಕನ್ ಹುಡುಗಿ ತನ್ನ ಸೋಶಿಯಲ್ ಮೀಡಿಯಾ ಫ್ರೆಂಡ್‌ ಮುಜ್ಮಿಲ್ ಸಿಪ್ರಾ ಅವರ ಆಹ್ವಾನದ ಮೇರೆಗೆ ಕರಾಚಿಯಿಂದ ಫೋರ್ಟ್ ಮುನ್ರೊವನ್ನು ತಲುಪಿದ್ದಳು. ನಂತರ ಲಾಹೋರ್‌ನಿಂದ 550 ಕಿಮೀ ದೂರದಲ್ಲಿರುವ ರಾಜನ್‌ಪುರದ ಅವನ ಮನೆಗೆ ಹೋದಳು. ಅಮೆರಿಕದ ಈ ಮಹಿಳೆ ಕಳೆದ 7 ತಿಂಗಳಿಂದ ಪ್ರವಾಸಿ ವೀಸಾದಲ್ಲಿ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ.

ಪೊಲೀಸ್ ವರದಿ ಏನು ಹೇಳುತ್ತದೆ?

ಅಮೆರಿಕದ ಮಹಿಳೆ ಮತ್ತು ಆಕೆಯ ಇಬ್ಬರು ಸ್ನೇಹಿತರು ಭಾನುವಾರ ಭೇಟಿಯಾಗಿ ಫೋರ್ಟ್ ಮನ್ರೋಗೆ ತೆರಳಿದ್ದರು ಎಂದು ಪೊಲೀಸ್ ವರದಿ ಹೇಳುತ್ತದೆ. ಅಲ್ಲಿ ಮೂವರೂ ಸೇರಿ ಬ್ಲಾಗ್ ಮಾಡಿ, ವಿಡಿಯೋ ಶೂಟ್ ಮಾಡಿದ್ದಾರೆ. ನಂತರ ಎಲ್ಲರೂ ಫೋರ್ಟ್ ಮನ್ರೋದಲ್ಲಿನ ಹೋಟೆಲ್‌ನಲ್ಲಿ ತಂಗಿದ್ದರು. ಮಹಿಳೆಯ ಪ್ರಕಾರ, ಇಬ್ಬರೂ ಅಲ್ಲಿ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬ್ಲ್ಯಾಕ್ ಮೇಲ್ ಮಾಡಲು ಘಟನೆಯ ಸಂಪೂರ್ಣ ವಿಡಿಯೋ ಕೂಡ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದಾರೆ. ಮತ್ತೊಬ್ಬರನ್ನು ಬಂಧಿಸಲು ತನಿಖೆ ನಡೆಸಲಾಗುತ್ತಿದೆ. 

ಪೊಲೀಸರು ಅಮೆರಿಕದ ಮಹಿಳೆಯ ವೈದ್ಯಕೀಯ ತಪಾಸಣೆಯನ್ನೂ ಮಾಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಹಮ್ಜಾ ಶಹಬಾಜ್ ಅವರು ಘಟನೆಯ ಬಗ್ಗೆ ಗಮನ ಹರಿಸಿದ್ದಾರೆ ಮತ್ತು ಈ ವಿಷಯವನ್ನು ಮೇಲ್ವಿಚಾರಣೆ ಮಾಡಲು ಪಂಜಾಬ್ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಆರೋಪಿಗಳಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಹಾಗೂ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

click me!