ಐಸ್‌ಕ್ರೀಂ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರು ಕೂಡ ಐಸ್‌ಕ್ರೀಂ ಎಂದರೆ ಆಸೆಯಿಂದ ಬಾಯ್ಬಿಡುತ್ತಾರೆ. ಹಾಗೆಯೇ ಇಲ್ಲೊಂದು ಐಸ್‌ಕ್ರೀಂ ಪ್ರಿಯ ಶ್ವಾನ ಐಸ್‌ಕ್ರೀಂ ಫೋಟೋಗಳ ಪೋಸ್ಟರ್ ಅನ್ನು ನೆಕ್ಕುತ್ತಿದ್ದು, ಅದನ್ನು ತಿನ್ನಲು ಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಐಸ್‌ಕ್ರೀಂ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರು ಕೂಡ ಐಸ್‌ಕ್ರೀಂ ಎಂದರೆ ಆಸೆಯಿಂದ ಬಾಯ್ಬಿಡುತ್ತಾರೆ. ಹಾಗೆಯೇ ಇಲ್ಲೊಂದು ಐಸ್‌ಕ್ರೀಂ ಪ್ರಿಯ ಶ್ವಾನ ಐಸ್‌ಕ್ರೀಂ ಫೋಟೋಗಳ ಪೋಸ್ಟರ್ ಅನ್ನು ನೆಕ್ಕುತ್ತಿದ್ದು, ಅದನ್ನು ತಿನ್ನಲು ಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಬಹುಶಃ ಈ ಶ್ವಾನಕ್ಕೆ ಇದರ ಮಾಲೀಕರು ಐಸ್‌ಕ್ರೀಂ ತಿನ್ನಿಸಿ ಅಭ್ಯಾಸ ಮಾಡಿಸಿದಂತಿದೆ. ಇದೇ ಕಾರಣಕ್ಕೆ ಶ್ವಾನ ಐಸ್‌ಕ್ರೀಂ ಚಿತ್ರ ನೋಡಿದ ಕೂಡಲೇ ಅದನ್ನು ನೆಕ್ಕುವುದಲ್ಲದೇ ತನ್ನ ಮುಂಗಾಲುಗಳಿಂದ ಕೆರೆದು ಹೊರಗೆ ತೆಗೆಯಲು ಯತ್ನಿಸುತ್ತಿದೆ.
ಸಾಮಾನ್ಯವಾಗಿ ಪುಟ್ಟ ಮಕ್ಕಳು ಐಸ್‌ಕ್ರೀ ಚಿತ್ರಗಳನ್ನು ನೋಡಿ ಅಥವಾ ಟಿವಿಗಳಲ್ಲಿ ಕಾಣಿಸುವ ಐಸ್‌ಕ್ರೀಂ ಜಾಹೀರಾತುಗಳನ್ನು ನೋಡಿ ನನಗೆ ಐಸ್‌ಕ್ರೀಂ ಬೇಕು ಎಂದು ಜಗಳವಾಡುವುದು, ಕೂಗಿ ಅತ್ತು ಪೋಷಕರ ಬಳಿ ರಚ್ಚೆ ಹಿಡಿಯವುದು ಸಾಮಾನ್ಯ. ಆದರೆ ಈ ಶ್ವಾನದ ನಡವಳಿಕೆ ನೋಡುಗರಿಗೆ ವಿಚಿತ್ರ ಎನಿಸುತ್ತಿದೆ. ಐಸ್‌ಕ್ರೀಂ ಪೋಸ್ಟರ್ ಇರುವ ಜಾಹೀರಾತು ನೋಡಿ ಶ್ವಾನ ತಿನ್ನಲು ಯತ್ನಿಸಿದೆ. ಇದನ್ನು ಟ್ವಿಟ್ಟರ್‌ನಲ್ಲಿ ಬಿಟ್ಟಿಂಗ್ ಬಿಡನ್ ಎಂಬ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದ್ದು, 5.2 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
Poor dog.. pic.twitter.com/F5Ly2zoNtK
— Buitengebieden (@buitengebieden)ಈ ಪೋಸ್ಟರ್ 3 ವಿಭಿನ್ನ ರೀತಿಯ ಐಸ್ ಕ್ರೀಮ್‌ಗಳ ಚಿತ್ರಗಳನ್ನು ತೋರಿಸುತ್ತಿದೆ. ಹಸಿದ ನಾಯಿ ಹತಾಶವಾಗಿ ಈ ಚಿತ್ರಗಳನ್ನು ಐಸ್‌ಕ್ರೀಂ ಎಂಬಂತೆ ನೆಕ್ಕಿ ಪ್ರಯತ್ನಿಸುತ್ತದೆ. ಸಾಧ್ಯವಾಗದಿದ್ದಾಗ ಹತಾಶೆಯಿಂದ ಹಲವು ಬಾರಿ ಜಾಹೀರಾತು ಫಲಕವನ್ನು ಕಾಲುಗಳಲ್ಲಿ ಕೆರೆದು ತೆಗೆಯಲು ಯತ್ನಿಸುತ್ತದೆ. ಈ ವಿಡಿಯೋ ನೋಡಿದ ಅನೇಕರು ನಾಯಿಯ ಬಗ್ಗೆ ಕರುಣೆ ವ್ಯಕ್ತಪಡಿಸಿದ್ದಾರೆ. ಇದು ಐಸ್‌ಕ್ರೀಂ ಎಂದು ಗುರುತಿಸುವಷ್ಟು ಶ್ವಾನ ಸ್ಮಾರ್ಟ್ ಆಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಶ್ವಾನ ಪ್ರೀತಿಯಿಂದ ಗಳಿಸಿದ ಹಣವನ್ನು ಶ್ವಾನಕ್ಕೇ ಅರ್ಪಿಸಲು ಮುಂದಾದ ಸಿಂಪಲ್ ಸ್ಟಾರ್
ಒಟ್ಟಿನಲ್ಲಿ ಶ್ವಾನಗಳ ವಿಡಿಯೋಗಳು ಮನಸ್ಸಿಗೆ ಸಾಕಷ್ಟು ಮುದ ನೀಡುತ್ತವೆ. ಅದರಲ್ಲೂ ಮನುಷ್ಯ ಸ್ನೇಹಿ ಶ್ವಾನಗಳು ಸದಾಕಾಲ ಮನುಷ್ಯರ ಸಾಂಗತ್ಯವನ್ನು ಬಯಸುತ್ತವೆ. ಮನುಷ್ಯರು ಇತ್ತೀಚೆಗೆ ಶ್ವಾನಗಳನ್ನು ಅತಿಯಾಗಿ ಮುದ್ದು ಮಾಡುವುದರ ಜೊತೆಗೆ ತಾವು ಹೋದಲೆಲ್ಲಾ ಅವುಗಳನ್ನು ಜೊತೆಯಲ್ಲಿ ಕರೆದೊಯ್ಯುತ್ತಾರೆ.
ಶ್ವಾನಪ್ರಿಯರಿಗೆ ತಮ್ಮ ಮುದ್ದಿನ ಶ್ವಾನಗಳ ಮೇಲಿರುವ ಪ್ರೀತಿ ಒಂದು ಪಟು ಹೆಚ್ಚೆ ಇರುತ್ತದೆ. ಶ್ವಾನಗಳನ್ನು ಎಲ್ಲಿಗೆಲ್ಲಾ ಕರೆದೊಯ್ಯಲು ಸಾಧ್ಯವೋ ಅಲ್ಲಿಗೆಲ್ಲಾ ಅದರ ಕೆಲ ಮಾಲೀಕರು ಕರೆದೊಯ್ಯಲು ನೋಡುತ್ತಾರೆ. ಕೆಲ ದಿನಗಳ ಹಿಂದೆ ಕರ್ನಾಟಕದ ಬೆಳಗಾವಿಯಲ್ಲಿ ವ್ಯಕ್ತಿಯೊಬ್ಬರು 100 ಕೆಜಿಯ ಕೇಕ್ ಕತ್ತರಿಸಿ ಊರಿಗೆಲ್ಲಾ ಊಟ ಹಾಕಿ ಶ್ವಾನದ ಹುಟ್ಟುಹಬ್ಬ ಆಚರಿಸಿದ್ದರು. ಅಲ್ಲದೇ ಜೋಡಿಯೊಂದು ಶ್ವಾನಗಳ ಸಾಗಣೆಗಾಗಿ ರಿಕ್ಷಾವೊಂದನ್ನು ಖರೀದಿಸುವ ಮೂಲಕ ಸುದ್ದಿ ಆಗಿದ್ದರು.
Dharwad: ನಾಯಿಯನ್ನು ಕೊಲ್ಲಲು ಮುಂದಾದ ದುರುಳರು: ರಕ್ಷಣೆ ಮಾಡಿದ ಶ್ವಾನ ಪ್ರಿಯ
ಇತ್ತೀಚೆಗೆ ಪಾವ್ಸ್ ಆಫ್ ಫ್ಯೂರಿ: ದಿ ಲೆಜೆಂಡ್ ಆಫ್ ಹ್ಯಾಂಕ್ ಸಿನಿಮಾದವರು ತಮ್ಮ ಚಿತ್ರದ ಪ್ರಿಮೀಯರ್ ಪ್ರದರ್ಶನಕ್ಕೆ ಶ್ವಾನವೊಂದನ್ನು ಅತಿಥಿಯಾಗಿ ಕರೆಸಿದ್ದರು. ಶ್ವಾನವೂ ಯಾವುದೇ ಸೆಲೆಬ್ರಿಟಿಗೆ ಕಡಿಮೆ ಇಲ್ಲದಂತೆ ರೆಡ್‌ಕಾರ್ಪೆಟ್ ಮೇಲೆ ಬಂದಿದ್ದು, ಈ ವೇಳೆ ಪಪ್ಪಾರಾಜಿಗಳ (ಹವ್ಯಾಸಿ ಛಾಯಾಗ್ರಾಹಕರು) ಕ್ಯಾಮರಾಗಳು ಶ್ವಾನವನ್ನೇ ಹಿಂಬಾಲಿಸಿದವು. ಶ್ವಾನ ತನ್ನ ಮಾಲೀಕರೊಂದಿಗೆ ಹಾಜರಾಗಿ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದೆ. ಈ ಅದ್ಭುತ ದೃಶ್ಯವನ್ನು 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿತ್ತು. ನಾಯಿ ಕಾರಿನಿಂದ ಜಿಗಿದು ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ರೆಡ್ ಕಾರ್ಪೆಟ್ ಮೇಲೆ ಶ್ವಾನ ಪೋಸ್ ನೀಡುತ್ತಿದ್ದಂತೆ ಪಾಪರಾಜಿಗಳು ಆಕೆಯ ಚಿತ್ರಗಳನ್ನು ಕ್ಲಿಕ್ಕಿಸಿದ್ದರು.
ಇನ್ನು ನಮ್ಮ ಕನ್ನಡದಲ್ಲಿ ನಾಯಿಯೇ ಪ್ರಮುಖ ಪಾತ್ರದಲ್ಲಿರುವ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಸಿನಿಮಾವೂ ದೇಶಾದ್ಯಂತ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಬಳಿಕ ನಾಯಿಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ಈ ಸಿನಿಮಾದ ಪ್ರೀಮಿಯರ್ ಹಾಗೂ ಪ್ರಚಾರದಲ್ಲಿ ಶ್ವಾನ ಚಾರ್ಲಿ ಭಾಗವಹಿಸಿತ್ತು.