
ಲಂಡನ್( ಅ. 08) ಇಂಗ್ಲೆಂಡಿನಲ್ಲೂ ಕೊರೋನಾ ಕಾಟ ನಿಂತಿಲ್ಲ. ಉತ್ರ ಇಂಗ್ಲೆಂಡಿನ ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ಕ್ಲೋಸ್ ಮಾಡಲು ಪ್ರಧಾನಿ ಬೋರಿಸ್ ನಾನ್ಸನ್ ಮುಂದಾಗಿದ್ದಾರೆ.
ಮ್ಯಾಂಚೆಸ್ಟರ್, ಲಿವರ್‌ಪೂಲ್, ನ್ಯೂಕ್ಯಾಸಲ್ ಮತ್ತು ನಾಟಿಂಗ್ಹ್ಯಾಮ್ ನಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಸಾಧ್ಯತೆ ಇದೆ ಎಂದು ಇಂಗ್ಲೆಂಡ್ ಮಾಧ್ಯಮಗಳು ವರದಿ ಮಾಡಿವೆ. ಹಿರಿ ಸಚಿವರೊಂದಿಗೆ ಸಭೆ ನಡೆಸಿದ ನಂತರ ಅಧಿಕೃತ ಆದೇಶ ಹೊರಗೆ ಬರಲಿದೆ.
ಸಾಯುತ್ತೇನೆ ಎನ್ನುತ್ತಾ ಕೊನೆಗೂ ಎಣ್ಣೆ ಏಟಲ್ಲಿ ನೇಣು ಹಾಕಿಕೊಂಡ
ರಾತ್ರಿ ಹತ್ತು ಗಂಟೆ ನಂತರ ನಿಷೇಧಾಜ್ಞೆ ಜಾರಿ ಮಾಡಿದ್ದಕ್ಕೆ ಇಂಗ್ಲೆಂಡಿನಲ್ಲಿ ವ್ಯಾಪಕ ವಿರೋಧ ಕೇಳಿ ನಂದಿತ್ತು. ಹಾಗಾಗಿ ಸುಲಭಕ್ಕೆ ಲಾಕ್ ಡೌನ್ ಜಾರಿ ಸಾಧ್ಯವಿಲ್ಲ. ಹಲವು ಸವಾಲುಗಳು ಎದುರಾಗಬಹುದು. ಉತ್ತರ ಭಾಗದ ಅನೇಕ ಪ್ರದೇಶಗಳಲ್ಲಿ ಈಗಾಗಲೇ ಲಾಕ್ ಡೌನ್ ಜಾರಿಯಲ್ಲಿದೆ. ಆದರೂ ಕೊರೋನಾ ಸೋಂಕು ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ.
ಲಾಕ್ ಡೌನ್ ವಿಚಾರಕ್ಕೆ ಸಂಬಂಧಿಸಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದಲ್ಲಿಯೇ ಅಸಮಾಧಾನವಿದೆ. ಆದರೆ ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಅನಿವಾರ್ಯ ಎಂಬ ಸ್ಥಿತಿಗೆ ಇಂಗ್ಲೆಂಡ್ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ