50 ದಿನಗಳಿಂದ ಸತತ ಚಿಕಿತ್ಸೆ, ಕೋಮಾದಿಂದ ಹೊರಬಂದ ಕೊರೋನಾ ಸೊಂಕಿತ!

By Suvarna NewsFirst Published May 4, 2020, 3:12 PM IST
Highlights

ಕೊರೋನಾ ಮಹಾಮಾರಿಗೆ ಸಿಲುಕಿ ಅಮಾಯಕ ಜನರು ಜೀವನ್ಮರ ಹೋರಾಡುತ್ತಿದ್ದಾರೆ. ಕೊರೋನಾ ಸೋಂಕಿತ ಬಹುತೇಕರು ನಿಧಾನವಾಗಿ ಗುಣಮುಖರಾಗುತ್ತಿದ್ದಾರೆ. ಆದರೆ ಕೆಲವ ಸ್ಥಿತಿ ಗಂಭೀರವಾಗಿದೆ. ಹೀಗೆ 37 ವರ್ಷ ಕೊರೋನಾ ಸೋಂಕಿತ ಆಸ್ಪತ್ರೆ ದಾಖಲಿಸಿದಾಗ ಕೋಮಾಗೆ ಜಾರಿದ್ದ, ವೈದ್ಯರು, ಕುಟುಂಬಸ್ಥರು ಸೋಂಕಿತ ಬದುಕುಳಿಯುವುದೇ ಕಷ್ಟ ಎಂದಿದ್ದರು. ಆದರೆ 40 ದಿನಗಳ ಬಳಿಕ ಕೋಮಾದಿಂದ ಹೊರಬಂದಿದ್ದಾರೆ.
 

ಹೊನೊಲುಲು(ಮೇ.04): ಹವಾಯಿ ದ್ವೀಪದ ಹೊನೊಲುಲು ನಗರಕ್ಕೂ ಕೊರೋನಾ ವೈರಸ್ ವ್ಯಾಪಿಸಿದೆ. ಶಾಂತವಾಗಿದ್ದ ದ್ವೀಪದಲ್ಲಿ ಇದೀಗ ಅಲೆಗಳ ಶಬ್ದಕ್ಕಿಂತ ಕೊರೋನಾ ವೈರಸ್ ಆರ್ಭಟವೇ ಕೇಳಿಸುತ್ತಿದೆ. 54 ದಿನಗಳ ಹಿಂದೆ 37 ವರ್ಷದ ಕೊಬಿ ತೊರ್ಡ ತೀವ್ರ ಅನಾರೋಗ್ಯದ ಸಮಸ್ಯೆಯಿಂದ ಆಸ್ಪತ್ರೆ ದಾಖಲಿಸಿದ್ದರು. ಈ ವೇಳೆ ಕೊಬಿ ತೋರ್ಡಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಇಷ್ಟೇ ಅಲ್ಲ  ಆಸ್ಪತ್ರೆ ದಾಖಲಿಸಿದ ಬೆನ್ನಲ್ಲೇ ಕೊಬಿ ತೊರ್ಡ ಕೋಮಾಗೆ ಜಾರಿದ್ದರು.

ವುಹಾನ್‌ನಿಂದ ಜನ್ಮ ತಾಳಿದ ಕೊರೋನಾ; ಚೀನಾ ಕುತಂತ್ರಕ್ಕೆ ಸಾಕ್ಷಿ ಇದೆ ಎಂದ ಟ್ರಂಪ್!...

ಮಾರ್ಚ್ 10 ರಂದು ಕಚೇರಿಯಿಂದ ಮನೆಗೆ ಬಂದ ಕೊಬಿ ತೊರ್ಡಾ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣವೇ ಆಸ್ಪತ್ರೆ ದಾಖಲಿಸಿದಾಗ ಕೊರೋನಾ ಸೋಂಕು ತಗಲಿರುವುದನ್ನು ವೈದ್ಯರು ಖಚಿತಪಡಿಸಿದ್ದರು. ಮಾರ್ಚ್ 15ರ ವೇಳೆ ಕೊಬಿ ತೂರ್ಡ ಪರಿಸ್ಥಿತಿ ಗಂಭೀರವಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ನಡುತ್ತಿದ್ದ ವೈದ್ಯರಿಗೂ ಚಿಂತೆ ಹೆಚ್ಚಿಸಿತ್ತು.  10 ದಿನಗಳ ಬಳಿಕ ಕೊಬಿ ತೊರ್ಡಾಗೆ ಉಸಿರಾಟವೇ ಕಷ್ಟವಾಗಿತ್ತು. ಆತನ ತಾಯಿ ಈ ಕುರಿತು ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು. ಮಗ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದ್ದಾನೆ. ಈ ಹೋರಾಟದಲ್ಲಿ ಯಶಸ್ವಿಯಾಗುವ ನಂಬಿಕೆ ಇದೆ ಎಂದು ಕಣ್ಣೀರಿಡುತ್ತಲೇ ಹೇಳಿದ್ದರು.

ಕೊರೋನಾ ತಡೆಯಲು ಫಿನಾಯಿಲ್ ಕುಡಿದ್ರು, ನರಳಾಡ್ತಾ ಪ್ರಾಣ ಬಿಟ್ಟ 700 ಮಂದಿ!.

ಪ್ರತಿ ದಿನ ಜಿಮ್, ಪೌಷ್ಠಿಕ ಆಹಾರ ಸೇವನೆ ಮಾಡುತ್ತಿದ್ದ ಕೂಬಿ ತೊರ್ಡಾ ಚಿಂತಾಜನಕ ಸ್ಥಿತಿಗೆ ತಲುಪುತ್ತಾನೆ ಅನ್ನೋದು ನಾವ್ಯಾರೂ ಊಹಿಸಿರಲಿಲ್ಲ ಎಂದು ಆತನ ತಾಯಿ ಹೇಳಿದ್ದರು. ಸತತ 50 ದಿನದ ಚಿಕಿತ್ಸೆ ಬಳಿಕ ಕೂಬಿ ತೊರ್ಡಾ ಅಚ್ಚರಿ ರೀತಿಯಲ್ಲಿ ಚೇತರಿಸಿಕೊಂಡಿದ್ದಾನೆ. ಕೋಮಾಗೆ ಜಾರಿದ್ದ ಕೂಬಿ ಇದೀಗ ಕೋಮಾದಿಂದ ಹೊರಬಂದಿದ್ದಾನೆ. ಇದು ವೈದ್ಯರಿಗೆ ಅಚ್ಚರಿಯಾಗಿದೆ. 

ವೆಂಟಿಲೇಟರ್ ಇರುವ ಕಾರಣ ಹಾಗೂ ಸತತ 500 ದಿನದಿಂದ ಆಹಾರ ಸೇವನೆ ಇಲ್ಲದ ಕಾರಣ ಕೂಬಿ ಸಂಪೂರ್ಣ ಕುಗ್ಗಿಹೋಗಿದ್ದಾನೆ. ಮಾತನಾಡಲು ಸಾಧ್ಯವಾಗುತ್ತಿಲ್ಲ. ಆದರೆ ಕೋಮಾದಿಂದ ಹೊರಬಂದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ಆತನ ತಾಯಿ ಹೇಳಿದ್ದಾರೆ. ಇಷ್ಟೇ ಅಲ್ಲ ಕೊರೋನಾ ವೈರಸ್ ಯಾರಿಗೂ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರದ ನಿಯಮ ಪಾಲಿಸಿ ಮನೆಯೊಳಗೆ ಇರಿ ಎಂದು ಕೂಬಿ ತಾಯಿ ಸಲಹೆ ನೀಡಿದ್ದಾರೆ. 

click me!