
ಜಾರ್ಜಿಯಾ(ಏ.12) ಅಮೆರಿದ ಜಾರ್ಜಿಯಾ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಮಸೂದೆಯೊಂದು ಮಂಡೆನೆಯಾಗುತ್ತಿದೆ. ಈ ಹಿಂದೂ ಮಸೂದೆಗೆ ಈಗಾಲೇ ಎರಡು ಪಕ್ಷಗಳಿಂದ ಬೆಂಬಲ ಕೂಡ ವ್ಯಕ್ತವಾಗಿದೆ. ಹೌದು, ಜಾರ್ಜಿಯಾದಲ್ಲಿ ಹಿಂದೂಫೋಬಿಯಾ ಮಸೂದ ಮಂಡನೆಯಾಗಲಿದೆ. ಭಾರಿ ಬೆಂಬಲ ವ್ಯಕ್ತವಾಗಿರುವ ಕಾರಣ ಈ ಬಿಲ್ ಜಾರ್ಜಿಯಾ ಸದನದಲ್ಲಿ ಪಾಸ್ ಆಗುವ ಎಲ್ಲಾ ಸಾಧ್ಯತೆ ಇದೆ. ಪ್ರಮುಖವಾಗಿ ಈ ಬಿಲ್ ಹಿಂದೂಗಳ ವಿರುದ್ಧ ದ್ವೇಷ, ಹಿಂದೂಗಳ ವಿರುದ್ದ ದೌರ್ಜನ್ಯ, ಹಿಂದೂಗಳ ವಿರುದ್ಧ ನಡೆಯುತ್ತಿರುವ ಕ್ರೈಂ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನೆರವಾಗಲಿದೆ. ಈ ಮೂಲಕ ಅಮರಿಕದ ರಾಜ್ಯವೊಂದು ಇದೇ ಮೊದಲ ಬಾರಿಗೆ ಹಿಂದೂಗಳಿಗೆ ಪ್ರತ್ಯೇಕವಾಗಿ ಹಾಗೂ ಹಿಂದೂಗಳ ಪರವಾಗಿ ಮಸೂದೆ ಮಂಡನೆಯಾಗಲಿದೆ.
ಹಿಂದೂಗಳ ಪರ ಮಸೂದೆ
ಅಮೆರಿಕದಲ್ಲಿ ‘ಹಿಂದೂಫೋಬಿಯಾ’ ಮಸೂದೆಯನ್ನು ಕಾನೂನಾಗಿ ಜಾರಿಗೊಳಿಸುವ ಪ್ರಯತ್ನಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಅಮೆರಿಕದ ಜಾರ್ಜಿಯಾ ರಾಜ್ಯ ‘ಹಿಂದೂಫೋಬಿಯಾ’ ಮತ್ತು 'ಹಿಂದೂ ವಿರೋಧಿ ದ್ವೇಷ' ಕಾನೂನುಬದ್ಧವಾಗಿ ಗುರುತಿಸಲು ಒಂದು ಐತಿಹಾಸಿಕ ಮಸೂದೆಯನ್ನು ಮಂಡಿಸಲಾಗುತ್ತಿದೆ. ಈ ಸೆನೆಟ್ ಮಸೂದೆ 375 ಕಾನೂನಾದರೆ, ಅಮೆರಿಕದಲ್ಲಿ ಹಿಂದೂಗಳ ವಿರುದ್ಧದ ದ್ವೇಷದ ಅಪರಾಧಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವ ಮೊದಲ ಕಾನೂನು ಇದಾಗಲಿದೆ. ಜಾರ್ಜಿಯಾದ ಈ ಮಸೂದೆ ಇತರ ರಾಜ್ಯಗಳಿಗೆ ಮಾದರಿಯಾಗಲಿದೆ.
ಅಮೆರಿಕ ಸಂಸತ್ತಿನ ಮೇಲ್ಮನೆಯಲ್ಲಿ ಸತತ 25 ತಾಸು ಭಾಷಣ ಮಾಡಿದ ಸಂಸದ ಕೋರಿ ಬೂಕರ್ !
ಹಿಂದೂಫೋಬಿಯಾ ಸ್ಪಷ್ಟ ವ್ಯಾಖ್ಯಾನ
ಮಸೂದೆಯಲ್ಲಿ 'ಹಿಂದೂಫೋಬಿಯಾ'ವನ್ನು ಹಿಂದೂ ಧರ್ಮದ ಬಗ್ಗೆ ವೈರತ್ವ, ವಿನಾಶಕಾರಿ ಮತ್ತು ಅವಮಾನಕರ ಧೋರಣೆ ಎಂದು ವ್ಯಾಖ್ಯಾನಿಸಲಾಗಿದೆ. ಇದರ ಅಡಿಯಲ್ಲಿ, ರಾಜ್ಯ ಮತ್ತು ಸ್ಥಳೀಯ ಏಜೆನ್ಸಿಗಳಿಗೆ ಅಸ್ತಿತ್ವದಲ್ಲಿರುವ ತಾರತಮ್ಯ ವಿರೋಧಿ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗುವುದು.
ಎರಡೂ ಪಕ್ಷಗಳ ಸೆನೆಟರ್‌ಗಳಿಂದ ಬೆಂಬಲ
ಈ ಮಸೂದೆಗೆ ರಿಪಬ್ಲಿಕನ್ ಸೆನೆಟರ್‌ಗಳಾದ ಶಾನ್ ಸ್ಟಿಲ್ ಮತ್ತು ಕ್ಲಿಂಟ್ ಡಿಕ್ಸನ್ ಜೊತೆಗೆ ಡೆಮಾಕ್ರಟಿಕ್ ಸೆನೆಟರ್‌ಗಳಾದ ಜೇಸನ್ ಎಸ್ಟೆವ್ಸ್ ಮತ್ತು ಇಮ್ಯಾನುಯೆಲ್ ಡಿ. ಜೋನ್ಸ್ ಅವರ ಜಂಟಿ ಬೆಂಬಲವಿದೆ. CoHNA (Coalition of Hindus of North America) ಈ ಕ್ರಮವನ್ನು ಸ್ವಾಗತಿಸಿದ್ದು, ಜಾರ್ಜಿಯಾ ಇಂತಹ ಮಸೂದೆಯನ್ನು ಮಂಡಿಸಿದ ಮೊದಲ ರಾಜ್ಯವಾಗಿದೆ ಮತ್ತು ಇದು ಅಂಗೀಕಾರವಾದರೆ ಐತಿಹಾಸಿಕವಾಗಲಿದೆ ಎಂದು ಹೇಳಿದೆ.
2023ರ 'ಹಿಂದೂಫೋಬಿಯಾ ವಿರೋಧಿ ಪ್ರಸ್ತಾಪ'ದ ಮುಂದಿನ ಹೆಜ್ಜೆ
ಈ ಮಸೂದೆಯು ಏಪ್ರಿಲ್ 2023 ರಲ್ಲಿ ಅಂಗೀಕರಿಸಲ್ಪಟ್ಟ ಪ್ರಸ್ತಾಪದ (Resolution) ಮುಂದಿನ ಭಾಗವಾಗಿದೆ. ಇದರಲ್ಲಿ ಜಾರ್ಜಿಯಾ ವಿಧಾನಸಭೆಯು ಹಿಂದೂಫೋಬಿಯಾ ಮತ್ತು ಹಿಂದೂ ವಿರೋಧಿ ದ್ವೇಷವನ್ನು ಖಂಡಿಸಿತ್ತು. ಆ ಪ್ರಸ್ತಾಪವು ಹಿಂದೂ ಧರ್ಮವನ್ನು (Hinduism) ಪ್ರಪಂಚದ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದೆಂದು ಗುರುತಿಸಿತು ಮಾತ್ರವಲ್ಲದೆ ಅಮೆರಿಕದಲ್ಲಿ ಹಿಂದೂಗಳ ಕೊಡುಗೆಯನ್ನು ಶ್ಲಾಘಿಸಿತು.
ಜಾರ್ಜಿಯಾದ ಭಾರತೀಯ-ಅಮೆರಿಕನ್ ಜನಸಂಖ್ಯೆಯ ಪ್ರಾಬಲ್ಯ
2023-2024 ರಲ್ಲಿ ಬಂದ ವರದಿಯ ಪ್ರಕಾರ, ಅಮೆರಿಕದಲ್ಲಿ ಸುಮಾರು 25 ಲಕ್ಷ ಹಿಂದೂಗಳು (2.5 million Hindus) ವಾಸಿಸುತ್ತಿದ್ದಾರೆ. ಇದು ಒಟ್ಟು ಜನಸಂಖ್ಯೆಯ ಸುಮಾರು 0.9% ರಷ್ಟಿದೆ. ಇವರಲ್ಲಿ 40,000 ಕ್ಕೂ ಹೆಚ್ಚು ಹಿಂದೂಗಳು ಜಾರ್ಜಿಯಾದಲ್ಲಿ ವಾಸಿಸುತ್ತಿದ್ದಾರೆ. ಇದು ಮುಖ್ಯವಾಗಿ ಅಟ್ಲಾಂಟಾ ಮೆಟ್ರೋ ಪ್ರದೇಶದಲ್ಲಿದೆ. ಈ ಕ್ರಮವು ಅಮೆರಿಕಾದಲ್ಲಿ ಹಿಂದೂ ವಿರೋಧಿ ದ್ವೇಷ ಮತ್ತು ಅಪರಾಧಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಿಂದೂ ಸಂಘಟನೆಗಳು ಆಶಿಸಿವೆ.
ಅಮೆರಿಕದ ಅಗ್ರ ತನಿಖಾಸಂಸ್ಥೆಗೆ ಈಗ ಭಾರತೀಯನ ನೇತೃತ್ವ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ