39 ವರ್ಷದ ಅಲೀನಾ ಮರಟೋವ್ನಾ ಕಬೇವಾ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಅತ್ಯಾಪ್ತ ಸಂಬಂದ ಹೊಂದಿದ್ದಾರೆ. ಅವರು ರಷ್ಯಾದ ಸಂಸತ್ತು ಡುಮಾದ ಮಾಜಿ ಸದಸ್ಯರಾಗಿದ್ದಾರೆ ಮತ್ತು ಪ್ರಸ್ತುತ ರಾಷ್ಟ್ರೀಯ ಮಾಧ್ಯಮ ಗುಂಪಿನ ಮುಖ್ಯಸ್ಥರೂ ಆಗಿದ್ದಾರೆ. ಹೆಣ್ಣು ಮಗುವಿನ ಜನ್ಮನೀಡುವ ಹಾದಿಯಲ್ಲಿರುವ ಸಮಯದಲ್ಲಿಯೇ ಕಬೇವಾಗೆ ಅಮೆರಿಕ ಈ ಗಿಫ್ಟ್ ನೀಡಿದೆ.
ವಾಷಿಂಗ್ಟನ್ (ಆ.3): ಉಕ್ರೇನ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ರಷ್ಯಾ ವಿರುದ್ಧ ಅಮೆರಿಕ ಮತ್ತಷ್ಟು ಹೊಸ ನಿರ್ಬಂಧಗಳನ್ನು ಘೋಷಿಸಿದೆ. ಪುಟಿನ್ ಅವರ ಗರ್ಲ್‌ಫ್ರೆಂಡ್ ಎಂದು ಹೇಳಲಾಗುವ ಅಲೀನಾ ಮರಾಟೋವ್ನಾ ಕಬೇವಾ ಅವರನ್ನು ಬ್ಯಾಕ್‌ಲಿಸ್ಟ್‌ಗೆ ಸೇರಿಸಿದೆ. ಅಲೀನಾ ಕಬೇವಾ ಅವರ ವೀಸಾವನ್ನು ಅಮೆರಿಕ ಅಧಿಕೃತವಾಗಿ ರದ್ದುಗೊಳಿಸಿದೆ. ವ್ಲಾಡಿಮಿರ್ ಪುಟಿನ್ ಅವರೊಂದಿಗೆ 39 ವರ್ಷದ ಕಬೇವಾ ಅತ್ಯಾಪ್ತ ಸಂಬಂಧ ಹೊಂದಿದ್ದು, ಶೀಘ್ರದಲ್ಲಿಯೇ ಪುಟಿನ್ ಅವರ ಮೂರನೇ ಮಗುವಿಗೆ ಜನ್ಮ ನೀಡುವ ಹಾದಿಯಲ್ಲಿದ್ದಾರೆ. ಅದಲ್ಲದೆ, ಅಲೀನಾ ರಷ್ಯಾದ ಸಂಸತ್ತು ಎನಿಸಿಕೊಂಡಿರುವ ಡುಮಾದ ಮಾಜಿ ಸದಸ್ಯರೂ ಆಗಿದ್ದಾರೆ. ರಷ್ಯಾದ ಪರವಾಗಿ ಮಾತನಾಡುವ ಟಿವಿ, ರೇಡಿಯೋ ಹಾಗೂ ಮುದ್ರಂ ಮಾಧ್ಯಮ ಸಂಸ್ಥೆಗಳ ಗುಂಪು ಎನಿಸಿಕೊಂಡಿರುವ ರಷ್ಯಾದ ರಾಷ್ಟ್ರೀಯ ಮಾಧ್ಯಮ ಗುಂಪಿನ ಮುಖ್ಯಸ್ಥರಾಗಿದ್ದಾರೆ. ಯುರೋಪಿಯನ್ ಯೂನಿಯನ್ ಮತ್ತು ಬ್ರಿಟನ್ ಕೂಡ ಕಬೇವಾ ಮೇಲೆ ನಿರ್ಬಂಧಗಳನ್ನು ವಿಧಿಸಿವೆ ಎಂದು ಯುಎಸ್ ಖಜಾನೆ ಇಲಾಖೆ ಮಂಗಳವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ಹಿರಿಯ ನಾಯಕ, ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ರಷ್ಯಾದ ಒಕ್ಕೂಟದ ನಿರ್ದೇಶಕರ ಮಂಡಳಿಯ ಸದಸ್ಯ ಎಂಬ ಆಧಾರದ ಮೇಲೆ ಕಬೇವಾ ಅವರ ಮೇಲೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಹಲವು ನಾಯಕರ ಮೇಲೆ ನಿರ್ಬಂಧ: ಉಕ್ರೇನ್ ಮೇಲಿನ ದಾಳಿಯ ನಂತರ ರಷ್ಯಾ, ಪುಟಿನ್, ಅವರ ಇಬ್ಬರು ಪುತ್ರಿಯರು ಮತ್ತು ಹಲವಾರು ರಷ್ಯಾದ ನಾಯಕರ ಮೇಲೆ ಯುನೈಟೆಡ್ ಸ್ಟೇಟ್ಸ್ ನಿರ್ಬಂಧಗಳನ್ನು ವಿಧಿಸಿದೆ. ಈ ನಾಯಕರ ಪ್ರಯಾಣದ ನಿರ್ಬಂಧದ ಜೊತೆಗೆ, ಅವರ ಆಸ್ತಿಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕಬೇವಾ ಅವರ ಮೇಲಿನ ನಿಷೇಧದ ಮೊದಲು, ಪುಟಿನ್ ಅವರ ಪುತ್ರಿಯರಾದ ಕಟಾರಿನಾ ವ್ಲಾಡಿಮಿರೊವ್ನಾ ಟಿಖೋನೊವಾ ಮತ್ತು ಮಾರಿಯಾ ವ್ಲಾಡಿಮಿರೊವ್ನಾ ವೊರೊಂಟ್ಸೊವಾ ಅವರ ಮೇಲೆ ಯುಎಸ್ ನಿರ್ಬಂಧಗಳನ್ನು ವಿಧಿಸಿತ್ತು. ಯುಎಸ್ ಖಜಾನೆ ಸಚಿವಾಲಯವು ಇದುವರೆಗೆ 893 ರಷ್ಯಾದ ನಾಯಕರು ಮತ್ತು ಅಧಿಕಾರಿಗಳನ್ನು ನಿಷೇಧಿಸಿದೆ. ಇವರಲ್ಲಿ ರಷ್ಯಾದ ಉನ್ನತ ಮಿಲಿಟರಿ ಅಧಿಕಾರಿಗಳು ಸೇರಿದ್ದಾರೆ. ಅವರ ಎಲ್ಲಾ ವೀಸಾಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಯುಎಸ್ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಅವರು ಉಕ್ರೇನ್ ಮೇಲಿನ ದಾಳಿಯ ನಂತರ ಲಕ್ಷಾಂತರ ಜನರು ಕಷ್ಟದಿಂದ ಹೋರಾಡುತ್ತಿದ್ದಾರೆ, ಆದರೆ ಪುಟಿನ್ ಮತ್ತು ಅವರ ಮಿತ್ರರು ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
Vladimir Putin: ಪುಟಿನ್ ಸೀಕ್ರೆಟ್ ಪ್ರೇಯಸಿ.. 69ರ ಅಧ್ಯಕ್ಷ.. 38ರ ಸುರ ಸುಂದರಿ !
ಮತ್ತೊಮ್ಮೆ ಅಪ್ಪನಾಗುತ್ತಿದ್ದಾರೆ ವ್ಲಾಡಿಮಿರ್ ಪುಟಿನ್: ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಅಲೀನಾ ಮರಾಟೋವ್ನಾ ಕಬೇವಾ ಹೆಣ್ಣು ಮಗುವಿನ ಜನ್ಮ ನೀಡುವ ಹಾದಿಯಲ್ಲಿದ್ದಾರೆ, 69 ವರ್ಷದ ಪುಟಿನ್ ಆ ಮೂಲಕ ಮತ್ತೊಮ್ಮೆ ತಂದೆಯಾಗಲಿದ್ದಾರೆ. ಪುಟಿನ್ ಹಾಗೂ ಅಲೀನಾ ಈಗಾಗಲೇ ನಾಲ್ಕು ಮಕ್ಕಳನ್ನು ಹೊಂದಿದ್ದು, ಶೀಘ್ರದಲ್ಲಿಯೇ ಕಬೇವಾ ಇನ್ನೊಂದು ಹೆಣ್ಣು ಮಗುವಿನ ಜನ್ಮ ನೀಡಲಿದ್ದಾರೆ ಎನ್ನಲಾಗಿದೆ. ಕಬೇವಾ ಮತ್ತೊಮ್ಮೆ ಗರ್ಭಿಣಿಯಾಗಿರುವುದಕ್ಕೆ ಪುಟಿನ್ ಅಸಮಾಧಾನ ಹೊಂದಿದ್ದಾರೆ ಎಂದೂ ವರದಿಯಾಗಿತ್ತು. ಕಬೇವಾ ಅವರೊಂದಿಗೆ ಈಗಾಗಲೇ ಎರಡು ಗಂಡು ಹಾಗೂ ಎರಡು ಹೆಣ್ಣು ಮಗುವನ್ನು ಪುಟಿನ್ ಹೊಂದಿದ್ದಾರೆ. ಅದರ ನಡುವೆ ಮತ್ತೊಂದು ಹೆಣ್ಣು ಮಗುವಿಗೆ ಕಬೇವಾ ಗರ್ಭಿಣಿಯಾಗಿರುವುದಕ್ಕೆ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಲಾಗಿತ್ತು.
ಪುಟಿನ್ ಮಲಮೂರ್ತ ವಿಸರ್ಜಿಸಿದ ಬೆನ್ನಲ್ಲೇ ಸೂಟ್‌ಕೇಸ್‌ನಲ್ಲಿ ಶೇಖರಣೆ, ಜೊತೆಗೆ ಒಯ್ಯುತ್ತಾರೆ 1,2!
ರಷ್ಯಾದ ಸೀಕ್ರೆಟ್ ಫರ್ಸ್ಟ್ ಲೇಡಿ: ಮಾಜಿ ಜಿಮ್ನಾಸ್ಟ್ ಕೂಡ ಆಗಿರುವ ಕಬೇವಾ ಮೊದಲು ನಾಲ್ಕೂ ಮಕ್ಕಳಿಗೆ ಸ್ವಿಜರ್ಲೆಂಡ್‌ನಲ್ಲಿ ಜನ್ಮ ನೀಡಿದ್ದರು. ಆದರೆ, ಐದನೇ ಮಗುವಿಗೆ ರಷ್ಯಾದಲ್ಲಿಯೇ ಜನ್ಮ ನೀಡಲಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಅವರನ್ನು ದೇಶದ ಅಜ್ಞಾತ ಸ್ಥಳದಲ್ಲಿ ಇಡಲಾಗಿದೆ. ಕಬೇವಾ ಮತ್ತೊಮ್ಮೆ ತಾನು ಪ್ರೆಗ್ನೆಂಟ್ ಆದ ಸುದ್ದಿಯನ್ನು ಹೇಳಿದ ಬೆನ್ನಲ್ಲಿಯೇ ಅಸಮಾಧಾನ ಹೊಂದಿದ್ದ ಪುಟಿನ್, ಇದನ್ನು ತಾವು ಯೋಜಿಸಿರಲಿಲ್ಲ ಎಂದಿದ್ದರು ಎನ್ನಲಾಗಿದೆ. 2008ರಿಂದಲೂ ಕಬೇವಾ ರಷ್ಯಾದ ಸೀಕ್ರೆಟ್ ಫರ್ಸ್ಟ್ ಲೇಡಿ ಎನಿಸಿಕೊಂಡಿದ್ದಾರೆ.