ರಸ್ತೆಯಲ್ಲಿ ಬಿದ್ದ ಇಟ್ಟಿಗೆ ಬದಿಗಿಟ್ಟ ಫುಡ್ ಡೆಲಿವರಿ ಬಾಯ್, ದುಬೈ ರಾಜನಿಂದ ಭರ್ಜರಿ ಗಿಫ್ಟ್!

By Suvarna NewsFirst Published Aug 3, 2022, 3:50 PM IST
Highlights

ಸದಾ ವಾಹನ ಓಡಾಡುತ್ತಿರುವ ಮುಖ್ಯ ರಸ್ತೆಯಲ್ಲಿ ಎರಡು ಇಟ್ಟಿಗೆ ಬಿದ್ದಿತ್ತು. ಇದರಿಂದ ಅಪಘಾತ, ಸಾವು ನೋವುಗಳಾಗುವ ಸಂಭವ ಹೆಚ್ಚಿತ್ತು. ಇದನ್ನು ಗಮನಿಸಿದ ಫುಡ್ ಡೆಲಿವರಿ ಬಾಯ್ ಇಟ್ಟಿಗೆ ಬದಿಗಿಟ್ಟು ಸುಗಮ ಸಂಚಾರ ಅನುವು ಮಾಡಿಕೊಟ್ಟಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ದುಬೈ ರಾಜಕುಮಾರ ಡೆಲಿವರಿ ಬಾಯ್‌ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ದುಬೈ(ಆ.03): ಸಮಾಜಕ್ಕೆ ಒಳಿತಾಗುವ ಸಣ್ಣ ಕೆಲಸವು ಅತೀ ದೊಡ್ಡ ಪರಿಣಾಮ ಬೀರಲಿದೆ ಅನ್ನೋ ಮಾತಿದೆ. ಇದಕ್ಕೆ ದುಬೈನಲ್ಲಿನ ಫುಡ್ ಡೆಲಿವರಿ ಬಾಯ್ ಉತ್ತಮ ಉದಾಹರಣೆ. ತಾನು ಆಹಾರ ವಿತರಣೆ ಮಾಡುವ ದಾರಿಯಲ್ಲಿ ಎರಡು ಇಟ್ಟಿಗೆ ಬಿದ್ದಿರುವುದನ್ನು ಗಮಮಿಸಿದ ಫುಡ್ ಡೆಲಿವರಿ ಬಾಯ್, ಅದನ್ನು ತೆಗೆದು ರಸ್ತೆ ಬದಿಗೆ ಹಾಕಿದ್ದಾನೆ. ಈ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಗಮನಿಸಿದ ದುಬೈ ರಾಜಕುಮಾರ ಈ ಫುಡ್ ಡೆಲಿವರಿ ಬಾಯ್ ಭೇಟಿಯಾಗುವುದಾಗಿ ಹೇಳಿದ್ದದಾರೆ.  ದುಬೈನ ಅತ್ಯಂತ ಬ್ಯುಸಿ ರಸ್ತೆ ಅದು. ಈ ರಸ್ತೆಯ ಮಧ್ಯ ಭಾಗದಲ್ಲಿ ಎರಡು ಇಟ್ಟಿಗೆಗಳು ಬಿದ್ದಿತ್ತು. ಎಲ್ಲಾ ವಾಹನಗಳು ವೇಗವಾಗಿ ಚಲಿಸುತ್ತಿರುವ ರಸ್ತೆಯಾದ ಕಾರಣ ಇಟ್ಟಿಗೆಯಿಂದ ಅಪಘಾತವಾಗುವ ಸಾಧ್ಯತೆ ಹೆಚ್ಚು. ಸಿಗ್ನಲ್‌ನಲ್ಲಿ ನಿಂತಿದ್ದ ಫುಡ್ ಡೆಲಿವರಿ ಬಾಯ್ ಅಬ್ದುಲ್ ಗಫೂರ್ ತನ್ನ ಬೈಕ್ ನಿಲ್ಲಿಸಿ ಓಡೋಡಿ ತೆರಳಿದ್ದಾನೆ. ಬಳಿಕ ಇಟ್ಟಿಗೆಗಳನ್ನು ತೆಗೆದು ರಸ್ತೆ ಬದಿಗೆ ಹಾಕಿದ್ದಾನೆ. ಈ ಘಟನೆಯನ್ನು ಹಿಂಭಾಗದಲ್ಲಿದ್ದ ಕಾರು ಚಾಲಕ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ.

ಸಾಮಾಜಿಕ ಕಳಕಳಿಯ ಈ ವಿಡಿಯೋ ವೈರಲ್ ಆಗಿತ್ತು. ಇಷ್ಟೇ ಅಲ್ಲ ದುಬೈ ರಾಜಕುಮಾರ ಹಮಾದನ್ ಬಿನ್ ಮೊಹಮ್ಮದ್ ಕಣ್ಣಿಗೂ ಬಿದ್ದಿದೆ. ತಕ್ಷಣವೇ ಈ ವಿಡಿಯೋವನ್ನು ಟ್ವಿಟರ್ ಮೂಲಕ ಹಂಚಿಕೊಂಡ ಹಮಾದ್ ಬಿನ್ ಮೊಹಮ್ಮದ್, ದುಬೈನಲ್ಲಿ ನಡೆದ ಒಂದು ಒಳ್ಳೆ ಕಾರ್ಯವನ್ನು ಪ್ರಶಂಸಿಸಬೇಕಾದಿದೆ. ಯಾರಾದರೂ ಈ ವ್ಯಕ್ತಿಯನ್ನು ಗುರುತಿಸಿ ಹೇಳಬಹುದೇ ಎಂದು ರಾಜಕುಮಾರ ಟ್ವೀಟ್ ಮಾಡಿದ್ದರು. ಖುದ್ದು ರಾಜಕುಮಾರ ಟ್ವೀಟ್ ಮಾಡಿದ ಬೆನ್ನಲ್ಲೇ ಈ ಫುಡ್ ಡೆಲಿವರಿ ಬಾಯ್‌ಗೆ ಹುಡುಕಾಟ ಆರಂಭಗೊಂಡಿತ್ತು. ಅಷ್ಟೇ ವೇಗದಲ್ಲಿ ಈ ಫುಡ್ ಡೆಲಿವರಿ ಬಾಯ್ ಪತ್ತೆ ಹಚ್ಚಿ ದುಬೈ ರಾಜಕುಮಾರನಿಗ ಮಾಹಿತಿ ನೀಡಲಾಯಿತು. ಮರುಕ್ಷಣದಲ್ಲೇ ಫುಡ್ ಡೆಲಿವರಿ ಬಾಯ್ ಅಬ್ದುಲ್ ಗಫೂರ್‌ಗೆ ಕರೆ ಧನ್ಯವಾದ ಹೇಳಿದ ರಾಜಕುಮಾರ್ ಶೀಘ್ರದಲ್ಲೇ ಭೇಟಿಯಾಗುವುದಾಗಿ ಹೇಳಿದ್ದಾರೆ. 

20 ವರ್ಷಗಳ ಹಿಂದೆ ನಾಪತ್ತೆಯಾದ ಮಹಿಳೆ ಪಾಕಿಸ್ತಾನದಲ್ಲಿ ಪತ್ತೆ

ಟ್ವಿಟರ್ ಮೂಲಕ ಈ ಮಾಹಿತಿ ಹಂಚಿಕೊಂಡ ದುಬೈ ರಾಜಕುಮಾರ, ಒಳ್ಳೆಯ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದೆ. ಧನ್ಯವಾದ ಅಬ್ದುಲ್ ಗಫೂರ್. ಶೀಘ್ರದಲ್ಲೇ ಭೇಟಿಯಾಗುತ್ತೇನೆ ಎಂದು ದುಬೈ ರಾಜಕುಮಾರ ಹೇಳಿದ್ದಾರೆ. ದುಬೈ ರಾಜಕುಮಾರ್ ಯಾರನ್ನೇ ಭೇಟಿಯಾದರೂ ಬರಿಗೈಯಲ್ಲಿ ಆಗಿಲ್ಲ. ಅವರಿಗೊಂದು ಸ್ಮರಣೀಯ ಹಾಗೂ ದುಬಾರಿ ಗಿಫ್ಟ್ ನೀಡಿದ್ದಾರೆ. ಹೀಗಾಗಿ ಇದೀಗ ಅಬ್ದುಲ್ ಗಫೂರ್‌ಗೂ ಭರ್ಜರಿ ಗಿಫ್ಟ್ ಸಿಗುವ ಸಾಧ್ಯತೆ ದಟ್ಟವಾಗಿದೆ.

 

An act of goodness in Dubai to be praised. Can someone point me to this man? pic.twitter.com/clEIWQQe3A

— Hamdan bin Mohammed (@HamdanMohammed)

 

ದುಬೈ ರಾಜಕುಮಾರ್ ಹಮಾದನ್ ಬಿನ್ ಮೊಹಮ್ಮದ್ ಕರೆಯಿಂದ ಪುಳಕಿತಗೊಂಡಿರುವ ಫುಡ್ ಡೆಲಿವರಿ ಬಾಯ್ ಅತೀ ಸಂತಸ ವ್ಯಕ್ತಪಡಿಸಿದ್ದಾರೆ. ದುಬೈನ ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅಬ್ಬುಲ್ ಗಫೂರ್, ದುಬೈ ರಾಜಕುಮಾರ ಕರೆ ಮಾಡಿ ನನ್ನ ಸಣ್ಣ ಕೆಲಸವನ್ನು ಗುರುತಿಸುತ್ತಾರೆ ಅಂದುಕೊಂಡಿರಲಿಲ್ಲ. ದಾರಿಯಲ್ಲಿ ಬಿದ್ದಿದ್ದ ಇಟ್ಟಿಗೆ ಸರಿಸಿದ್ದೆ ಅಷ್ಟೇ. ಆದರೆ ಈ ಮಟ್ಟಕ್ಕೆ ಪ್ರಶಂಸೆ, ಅಭಿನಂದನೆಗಳು ಹರಿದುಬರವು ನಿರೀಕ್ಷೆ ಇರಲಿಲ್ಲ. ಭೇಟಿಯಾಗುವುದಾಗಿ ತಿಳಿಸಿದ್ದಾರೆ. ತನ್ನ ಮಾಹಿತಿಯನ್ನು ಪಡೆದಿದ್ದಾರೆ. ಹೀಗಾಗಿ ಹಮಾದ್ ಬಿನ್ ಮೊಹಮ್ಮದ್ ಭೇಟಿಯಾಗಲು ಉತ್ಸುಕನಾಗಿದ್ದೇನೆ. ಸಾಮಾನ್ಯ ಫುಡ್ ಡೆಲಿವರಿ ಬಾಯ್‌ಗೆ ರಾಜಕುಮಾರನ ಭೇಟಿಯಾಗುವ ಅವಕಾಶ ಬಂದಿದ್ದೇ ಸೌಭಾಗ್ಯ ಎಂದು ಅಬ್ದುಲ್ ಗಫೂರ್ ಹೇಳಿದ್ದಾರೆ.
 

click me!