ಅಂದು ‘ಸತ್ತ ಆರ್ಥಿಕತೆ’, ಈಗ ‘ಭಾರತ ನೋಡಿ ಕಲಿಯಿರಿ’ ಅಂತ ಟ್ರಂಪ್‌ ಶಹಬ್ಭಾಸ್‌ಗಿರಿ

Published : Nov 22, 2026, 09:29 AM IST
america president donald trump india pm modi

ಸಾರಾಂಶ

ಅಮೆರಿಕದ ಫೆಡರಲ್ ರಿಸರ್ವ್‌ನ ಹೆಚ್ಚಿನ ಬಡ್ಡಿದರ ನೀತಿಯನ್ನು ಟೀಕಿಸಿದ ಡೊನಾಲ್ಡ್ ಟ್ರಂಪ್, ಭಾರತದ ಕಡಿಮೆ ಬಡ್ಡಿದರ ಮತ್ತು ಶೇ.7ರ ಜಿಡಿಪಿ ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ. ಜಗತ್ತೇ ಭಾರತದ ಆರ್ಥಿಕತೆಯನ್ನು ಹೊಗಳುತ್ತಿದ್ದರೂ ರಾಹುಲ್ ಗಾಂಧಿ ಜಾಣಕುರುಡು ತೋರುತ್ತಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಭಾರತದ ಆರ್‌ಬಿಐ ರೀತಿಯ ಅಮೆರಿಕದ ಸರ್ವೋಚ್ಚ ಬ್ಯಾಂಕ್‌ ಆದ ಫೆಡರಲ್ ರಿಸರ್ವ್‌ನ ಹೆಚ್ಚಿನ ಬಡ್ಡಿದರ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಇದಕ್ಕೆ ಅವರು ಭಾರತದ ಆರ್ಥಿಕ ಬೆಳವಣಿಗೆ ಮತ್ತು ಬಡ್ಡಿದರಗಳ ಉದಾಹರಣೆ ನೀಡಿದ್ದು, ‘ಭಾರತವನ್ನು ನೋಡಿ ಕಲಿಯಿರಿ’ ಎಂದಿದ್ದಾರೆ.

ಭಾರತದ ಕಡಿಮೆ ಬಡ್ಡಿದರ ನೀತಿಗೆ ಟ್ರಂಪ್‌ ಶ್ಲಾಘನೆ

ಶ್ವೇತಭವನದಲ್ಲಿ ಶುಕ್ರವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು,‘ಅಮೆರಿಕದ ಫೆಡರಲ್ ರಿಸರ್ವ್ ರಾಜಕೀಯ ಪ್ರೇರಿತವಾಗಿ ಕಾರ್ಯನಿರ್ವಹಿಸುತ್ತಿದೆ. ಹಣದುಬ್ಬರ ನಿಯಂತ್ರಣಕ್ಕಾಗಿ ಅದು ಬಡ್ಡಿದರಗಳನ್ನು ಹೆಚ್ಚಿಸುತ್ತಿದೆ. ಈ ಮೂಲಕ ದೇಶವನ್ನು ನಾಶಮಾಡುತ್ತಿದೆ. ಹೀಗಾಗಬಾರದು. ಅಮೆರಿಕ ವಿಶ್ವದಲ್ಲೇ ಅತ್ಯಂತ ಕಡಿಮೆ ಬಡ್ಡಿದರಗಳನ್ನು ಹೊಂದಿರಬೇಕು’ ಎಂದು ಕರೆ ನೀಡಿದರು.

ಭಾರತದ ಜಿಡಿಪಿ ಶೇ.7 ಇದೆ ಎಂದೂ ಪ್ರಶಂಸೆ

ತಮ್ಮ ಮಾತಿನ ಸಮರ್ಥನೆಯಾಗಿ ಭಾರತದ ಉದಾಹರಣೆ ನೀಡಿದ ಅವರು, ‘ಭಾರತದಲ್ಲಿ ಕಡಿಮೆ ಬಡ್ಡಿದರಗಳಿದ್ದು, ಸುಮಾರು ಶೇ.7ರಷ್ಟು ಜಿಡಿಪಿ (ಜಿಡಿಪಿ) ಬೆಳವಣಿಗೆ ಇದೆ. ಅಮೆರಿಕವೂ ಇದೇ ರೀತಿ ಬಡ್ಡಿದರಗಳನ್ನು ಕಡಿಮೆ ಮಾಡಿದರೆ ಶೇ. 15–20ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಬಹುದು ಮತ್ತು ಸಾಲವನ್ನು ವೇಗವಾಗಿ ತೀರಿಸಬಹುದು. ಆದರೆ ಫೆಡರಲ್ ರಿಸರ್ವ್‌ ಇದಕ್ಕೆ ಅವಕಾಶ ನೀಡುತ್ತಿಲ್ಲ’ ಎಂದರು.

ಬಡ್ಡಿ ಹೆಚ್ಚಿಸಿದ ಅಮೆರಿಕ ಫೆಡರಲ್‌ ರಿಸರ್ವ್‌ಗೆ ಕ್ಲಾಸ್‌

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2026ರಲ್ಲಿ ಭಾರತದ ಬೆಳವಣಿಗೆಯನ್ನು ಶೇ. 7ರಷ್ಟು ಅಂದಾಜಿಸಿದೆ, ಆದರೆ ಹಣದುಬ್ಬರ ಮತ್ತು ಜಾಗತಿಕ ಒತ್ತಡಗಳ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಅಮೆರಿಕದ ಫೆಡರಲ್ ರಿಸರ್ವ್ ತಮ್ಮದೇ ಆದ ನೀತಿಗಳನ್ನು ಅನುಸರಿಸುತ್ತಿವೆ.

ಸ್ವತಃ ಟ್ರಂಪ್‌ ಹೊಗಳಿದ್ರೂ ಭಾರತದ ಜಿಡಿಪಿ ಬಗ್ಗೆ ರಾಹುಲ್‌ ಕುರುಡು: ಬಿಜೆಪಿ

ಒಂದೊಮ್ಮೆ ಭಾರತದವನ್ನು ‘ಸತ್ತ ಆರ್ಥಿಕತೆ’ ಎಂದಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಈಗ ಭಾರತದ ಶೇಕಡಾ 7ರಷ್ಟು ಜಿಡಿಪಿ ಬೆಳವಣಿಗೆಯನ್ನು ಶ್ಲಾಘಿಸಿರುವಾಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾತ್ರ ಆ ವಿಷಯದಲ್ಲಿ ಜಾಣಕುರುಡು ತೋರುತ್ತಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಇತ್ತೀಚೆಗೆ ಕೊಲಂಬಿಯಾ ವಿವಿಯಲ್ಲಿ, ‘ಭಾರತದ ಆರ್ಥಿಕತೆ ಹದಗೆಟ್ಟಿದೆ’ ಎಂದು ರಾಹುಲ್‌ ಹೇಳಿಕೆ ನೀಡಿದ್ದರು. ಈ ಬಗ್ಗೆ ಟ್ವೀಟಿಸಿರುವ ಬಿಜೆಪಿ ನಾಯಕ ಆಶಿಶ್‌ ಸೂದ್‌, ‘ಭಾರತದ ಜಿಡಿಪಿ ಬೆಳವಣಿಗೆಯನ್ನು ಟ್ರಂಪ್ ಗುರುತಿಸಿರುವುದು, ದೇಶದ ಬೆಳೆಯುತ್ತಿರುವ ಜಾಗತಿಕ ಸ್ಥಾನಮಾನ ಮತ್ತು ಆರ್ಥಿಕ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಭಾರತದ ಈ ಗಮನಾರ್ಹ ಪ್ರಗತಿಯನ್ನು ಜಗತ್ತೇ ಒಪ್ಪಿಕೊಳ್ಳುತ್ತಿರುವಾಗ, ರಾಹುಲ್ ಮತ್ತು ಕಾಂಗ್ರೆಸ್ ದೇಶದ ಸಾಧನೆಗಳನ್ನು ಕಂಡೂ ಕಾಣದಂತೆ ನಿರ್ಲಕ್ಷಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತ vs ಚೀನಾ ರೈಲ್ವೆ: ಎರಡೂ ದೇಶಗಳಲ್ಲಿ ರೈಲು ಪ್ರಯಾಣ ಮಾಡಿದ ವ್ಯಕ್ತಿಗೆ ಅಚ್ಚರಿ ಮೂಡಿಸಿದ ಆ ಸಂಗತಿ ಏನು ಗೊತ್ತಾ?
ಜಗತ್ತಿನ 'ಚಿನ್ನದ ರಾಜಧಾನಿ' ಎನಿಸಿಕೊಂಡಿರುವ ನಗರವಿದು..! ಇಲ್ಲಿ ಒಂದೇ ವರ್ಷದಲ್ಲಿ 1,000 ಟನ್‌ಗಿಂತ ಹೆಚ್ಚು ಗೋಲ್ಡ್ ಉತ್ಪಾದನೆ..!