NRI's In White House: ಜೋ ಬೈಡನ್ ತಂಡಕ್ಕೆ ಇನ್ನೊಬ್ಬ ಭಾರತೀಯ ಸೇರ್ಪಡೆ

Suvarna News   | Asianet News
Published : Dec 11, 2021, 12:22 PM ISTUpdated : Dec 11, 2021, 03:31 PM IST
NRI's In White House: ಜೋ ಬೈಡನ್ ತಂಡಕ್ಕೆ ಇನ್ನೊಬ್ಬ ಭಾರತೀಯ ಸೇರ್ಪಡೆ

ಸಾರಾಂಶ

ತಮ್ಮ ತಂಡಕ್ಕೆ ಮತ್ತೊಬ್ಬ ಭಾರತೀಯನನ್ನು ಸೇರಿಸಿಕೊಂಡ ಜೋ ಬೈಡನ್ ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಮುಖ್ಯಸ್ಥರಾಗಿ ನೇಮಕ ಭಾರತೀಯ ಅಮೆರಿಕನ್ ಗೌತಮ್ ರಾಘವನ್‌ಗೆ ಮುಂಬಡ್ತಿ

ನ್ಯೂಯಾರ್ಕ್‌: ಮತ್ತೊಬ್ಬ ಭಾರತೀಯ ಮೂಲದ ಅಮೆರಿಕ ಪ್ರಜೆಯೊಬ್ಬರನ್ನು ಜೋ ಬೈಡನ್ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಜೋ ಬೈಡನ್ ತಂಡದಲ್ಲಿ ಈಗಾಗಲೇ ಹಲವು ಭಾರತೀಯರಿದ್ದಾರೆ.  ಭಾರತೀಯ ಅಮೆರಿಕನ್ ಗೌತಮ್ ರಾಘವನ್ ಅವರನ್ನು ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಮುಖ್ಯಸ್ಥರನ್ನಾಗಿ ಹೊಸ ಸ್ಥಾನಕ್ಕೆ ಬಡ್ತಿ ನೀಡಿದ್ದಾರೆ. ಯುನಿಸೆಫ್‌ನ ಮುಂದಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕ್ಯಾಥಿ ರಸೆಲ್ ಅವರನ್ನು ನೇಮಿಸುವ ಉದ್ದೇಶವನ್ನು ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್( Antonio Guterre) ಘೋಷಿಸಿದ ನಂತರ ಜೋ ಬೈಡನ್ ಶ್ವೇತಭವನದ ಹುದ್ದೆಗೆ ಗೌತಮ್‌ ರಾಘವನ್‌ ಅವರನ್ನು ಬಡ್ತಿಗೊಳಿಸಿದ್ದನ್ನು ಘೋಷಣೆ ಮಾಡಿದರು. ರಸ್ಸೆಲ್ ಪ್ರಸ್ತುತ ಡಬ್ಲ್ಯೂ ಹೆಚ್‌ PPOದ ಮುಖ್ಯಸ್ಥರಾಗಿದ್ದಾರೆ.

ಕ್ಯಾಥಿ ಅವರ ನಾಯಕತ್ವದಲ್ಲಿ, ಶ್ವೇತಭವನದ ಕಚೇರಿಯ ಅಧ್ಯಕ್ಷೀಯ ಸಿಬ್ಬಂದಿ (ಪಿಪಿಒ) ವೇಗವಾದ ನೇಮಕಾತಿ  ಹಾಗೂ ವೈವಿಧ್ಯತೆ ಎರಡರಲ್ಲೂ ದಾಖಲೆಗಳನ್ನು ಮುರಿದಿದೆ. ನಮ್ಮ ಫೆಡರಲ್ ಸರ್ಕಾರವು ಅಮೆರಿಕವನ್ನು ಪ್ರತಿಬಿಂಬಿಸುತ್ತದೆ ಮತ್ತು ಅಮೆರಿಕನ್ ಜನರಿಗಾಗಿಯೇ ಇದೆ ಎಂಬುದನ್ನು  ಖಚಿತಪಡಿಸಿಕೊಳ್ಳಲು ಪಟ್ಟುಬಿಡದೆ ಕೆಲಸ ಮಾಡಿದೆ ಎಂದು ಜೋ ಬೈಡನ್ ಹೇಳಿದರು. ಗೌತಮ್ ರಾಘವನ್ ಅವರು ಮೊದಲ ದಿನದಿಂದಲೂ ಕ್ಯಾಥಿ ಅವರೊಂದಿಗೆ ಕೆಲಸ ಮಾಡಿರುವುದು ನನಗೆ ಖುಷಿ ತಂದಿದೆ. ಗೌತಮ್ ರಾಘವನ್‌ ಶ್ವೇತ ಭವನದ PPO ಅಧ್ಯಕ್ಷರಾಗುತ್ತಿದ್ದು, ತಡೆರಹಿತ ಪರಿವರ್ತನೆಯ ಜೊತೆ ಸಮರ್ಥ, ಪರಿಣಾಮಕಾರಿ, ವಿಶ್ವಾಸಾರ್ಹ ಮತ್ತು ವೈವಿಧ್ಯಮಯವಾದ ಫೆಡರಲ್ ಕಾರ್ಯಪಡೆಯನ್ನು ನಿರ್ಮಿಸುವುದನ್ನು ಮುಂದುವರಿಸಲು ನಮಗೆ ಅನುವು ಮಾಡಿಕೊಡುತ್ತಾರೆ ಎಂದು ಜೋ ಬೈಡನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜೋ ಬೈಡೆನ್‌, ಕಮಲಾ ಹ್ಯಾರಿಸ್‌ ಮಧ್ಯೆ ಬಿರುಕು?: ಹೀಗಿದೆ ಕಾರಣ

ಇನ್ನು ಗೌತಮ್ ರಾಘವನ್‌(Gautam Raghavan) ಅವರ ಬಗ್ಗೆ ಹೇಳುವುದಾದರೆ. ಅವರು ಭಾರತದಲ್ಲಿ ಜನಿಸಿ ನಂತರದಲ್ಲಿ ಅಮೆರಿಕಾಗೆ ವಲಸೆ ಹೋದವರು.  ಅಮೆರಿಕಾದ ಸಿಯಾಟಲ್‌ನಲ್ಲಿ ಬೆಳೆದ ರಾಘವನ್‌.  ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಅವರು "ವೆಸ್ಟ್ ವಿಂಗರ್ಸ್: ಸ್ಟೋರೀಸ್ ಫ್ರಮ್ ದಿ ಡ್ರೀಮ್ ಚೇಸರ್ಸ್, ಚೇಂಜ್ ಮೇಕರ್ಸ್ ಮತ್ತು ಹೋಪ್ ಕ್ರಿಯೇಟರ್ಸ್ ಇನ್ಸೈಡ್ ದಿ ಒಬಾಮಾ ವೈಟ್ ಹೌಸ್" ಮುಂತಾದ ಪುಸ್ತಕಗಳ ಸಂಪಾದಕರಾಗಿದ್ದಾರೆ. ಪ್ರಸ್ತುತ ಅವರು ವಾಷಿಂಗ್ಟನ್, DC ಯಲ್ಲಿ ತಮ್ಮ ಪತಿ ಮತ್ತು  ಮಗಳೊಂದಿಗೆ ವಾಸಿಸುತ್ತಿದ್ದಾರೆ.

ಗೌತಮ್ ರಾಘವನ್, ಅವರು ಜನವರಿ 20, 2021 ರಿಂದ ಅಧ್ಯಕ್ಷರ ಉಪ ಸಹಾಯಕರಾಗಿ ಮತ್ತು ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ, ಬೈಡೆನ್-ಹ್ಯಾರಿಸ್ ಪರಿವರ್ತನಾ ತಂಡದ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಮೊದಲ ಉದ್ಯೋಗಿಯೂ ಆಗಿದ್ದಲ್ಲದೇ ಅಲ್ಲಿ  ಅಧ್ಯಕ್ಷೀಯ ನೇಮಕಾತಿಗಳ ಡೆಪ್ಯೂಟಿ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೇ ರಾಘವನ್‌ ಅವರು, ಅಮೆರಿಕಾ ಕಾಂಗ್ರೆಷನಲ್ ಪ್ರೋಗ್ರೆಸ್ಸಿವ್ ಕಾಕಸ್‌ನ ಅಧ್ಯಕ್ಷರಾದ US ಪ್ರತಿನಿಧಿ ಪ್ರಮೀಳಾ ಜಯಪಾಲ್ (WA-07) ಅವರಿಗೆ ಸಿಬ್ಬಂದಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಜೊತೆಗೆ ನಾಗರಿಕ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯವನ್ನು ಮುನ್ನಡೆಸುವಲ್ಲಿ ಗಮನಹರಿಸುವ ಸಂಸ್ಥೆಗಳಿಗೆ ಸಲಹೆ ನೀಡುತ್ತಿದ್ದರು. ಬಿಡೆನ್ ಫೌಂಡೇಶನ್‌ನ ಸಲಹೆಗಾರರಾಗಿ ಮತ್ತು ಗಿಲ್ ಫೌಂಡೇಶನ್‌ಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು ಎಂದು ಶ್ವೇತಭವನ ಹೇಳಿದೆ.

US President; ಕಮಲಾ ಹ್ಯಾರಿಸ್‌ಗೆ ಅಧಿಕಾರ ಹಸ್ತಾಂತರಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್!
ಒಬಾಮಾ ಬಿಡೆನ್‌ ಆಡಳಿತಾವಧಿಯಲ್ಲಿ ರಾಘವನ್‌ ಅವರು  ಶ್ವೇತಭವನ(The White House)ದ ಸಾರ್ವಜನಿಕ ಎಂಗೇಜ್‌ಮೆಂಟ್ ಕಚೇರಿಯಲ್ಲಿ LGBTQ ಸಮುದಾಯಕ್ಕೆ ಮತ್ತು ಏಷ್ಯನ್ ಅಮರಿಕನ್ ಮತ್ತು ಪೆಸಿಫಿಕ್ ಐಲ್ಯಾಂಡರ್ ಸಮುದಾಯಕ್ಕೆ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಅಮೆರಿಕಾದ ರಕ್ಷಣಾ ವಿಭಾಗಕ್ಕೆ ಶ್ವೇತಭವನದ ಸಂಪರ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.  ಈಗಾಗಲೇ ಬಿಡೆನ್‌ ಸಂಪುಟದಲ್ಲಿ ಹಲವು ಭಾರತೀಯರು ಸ್ಥಾನ ಪಡೆದಿದ್ದಾರೆ.  ಚುನಾವಣೆಗೆ ಮೊದಲೇ ಭಾರತ ಮೂಲದವರಿಗೆ ಆದ್ಯತೆ ನೀಡುತ್ತೇನೆಂದು ಮಾತುಕೊಟ್ಟಿದ್ದ ಅಮೆರಿಕದ 46ನೇ ಅಧ್ಯಕ್ಷ ಬೈಡನ್ ತಮ್ಮ  ಸಂಪುಟದಲ್ಲಿ ಈಗಾಗಲೇ 20 ಭಾರತೀಯರಿಗೆ ಅವಕಾಶ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ