* ಕೆಲಸ ಬಿಡಲು ವಿಶ್ವದ ನಂ.1 ಶ್ರೀಮಂತ ಮಸ್ಕ್ ಚಿಂತನೆ!
* ಪೂರ್ಣಾವಧಿ ‘ಇನ್‌ಪ್ಲೂಯೆನ್ಸರ್’ ಆಗಲು ಒಲವು
* ಸೋಶಿಯಲ್ ಮೀಡಿಯಾ ಹಿಂಬಾಲಕರ ಮಾತು ಕೇಳಿ ಶೇರು ಮಾರಿದ್ದರು
ವಾಷಿಂಗ್ಟನ್(ಡಿ. 11) ಟ್ವೀಟರ್ (Twitter)ಹಿಂಬಾಲಕರ ಅಭಿಪ್ರಾಯ ಕೇಳಿ ತನ್ನದೇ ಕಂಪನಿಯಲ್ಲಿನ(Tesla) ನೂರಾರು ಕೋಟಿ ರು. ಮೌಲ್ಯದ ಷೇರುಗಳನ್ನು(Share) ಮಾರಿದ್ದ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್(Elon Musk), ಇದೀಗ ತಮ್ಮ ಕಂಪನಿಯಲ್ಲಿ ತಾವು ಹೊಂದಿರುವ ವಿವಿಧ ಹುದ್ದೆಗಳನ್ನೇ ತೊರೆಯುವ ಮಾತುಗಳನ್ನು ಆಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಮತ್ತೊಮ್ಮೆ ತಮ್ಮ ಟ್ವೀಟರ್ ಹಿಂಬಾಲಕರನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಶುಕ್ರವಾರ ಟ್ವೀಟ್ ಮಾಡಿರುವ ಮಸ್ಕ್ ‘ನನ್ನ ಕೆಲಸ ಬಿಟ್ಟು, ಪೂರ್ಣಾವಧಿ ಇನ್ ಫ್ಲೂಯೆನ್ಸರ್(Influencer) ಆಗುವ ಬಗ್ಗೆ ಚಿಂತಿಸುತ್ತಿದ್ದೇನೆ, ಈ ಬಗ್ಗೆ ನೀವೇನು ಹೇಳುತ್ತೀರಿ?’ ಎಂದು ತಮ್ಮ ಹಿಂಬಾಲಕರನ್ನು ಪ್ರಶ್ನಿಸಿದ್ದಾರೆ. ಅವರ ಈ ವಿಚಿತ್ರ ಮತ್ತು ಅಚ್ಚರಿಯ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
undefined
ಕಾರು ಉತ್ಪಾದಿಸುವ ಟೆಸ್ಲಾ, ರಾಕೆಟ್ ಉತ್ಪಾದಿಸುವ ಸ್ಪೇಸ್ ಎಕ್ಸ್, ಮೂಲಸೌಕರ್ಯ ಅಭಿವೃದ್ಧಿಯ ಬೋರಿಂಗ್ ಕಂಪನಿ, ಬ್ರೈನ್-ಚಿಪ್ ಸ್ಟಾರ್ಟಪ್ ನ್ಯೂರಾಲಿಂಕ್ ಸೇರಿದಂತೆ ಹಲವು ಕಂಪನಿಗಳ ಸಿಇಒ ಆಗಿರುವ ಎಲಾನ್ ಮಸ್ಕ್, ದಿಢೀರನೆ ಇಂಥದ್ದೊಂದು ಪ್ರಶ್ನೆ ಕೇಳಿರುವ ಉದ್ದೇಶವೇನು? ಅವರು ನಿಜವಾಗಿಯೂ ಹುದ್ದೆ ತೊರೆಯುವ ಒಲವು ಹೊಂದಿದ್ದಾರಾ? ಎಂಬ ಪ್ರಶ್ನೆಗಳು ಎದ್ದಿವೆ.
ಕಳೆದ ಜನವರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ತಾವು ಇನ್ನೂ ಹಲವು ವರ್ಷ ಟೆಸ್ಲಾದ ಸಿಇಒ ಆಗಿ ಮುಂದುವರೆಯುವ ಮಾತುಗಳನ್ನು ಮಸ್ಕ್ ಆಡಿದ್ದರು. ಆದರೆ ಅದರ ಜೊತೆಗೆ ‘ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಹಗಲೂ, ರಾತ್ರಿ ವಾರದ ಏಲೂ ದಿನ ಕೆಲಸ ಮಾಡುವುದರ ಬದಲಾಗಿ ನಾನು ನನ್ನ ಕೈಯಲ್ಲಿ ಒಂದಿಷ್ಟುವಿರಾಮದ ಸಮಯ ಹೊಂದಿದ್ದರೆ ಚೆನ್ನಾಗಿರುತ್ತಿತ್ತು, ಬಹಳ ತೀವ್ರತರವಾದ ಕೆಲಸ’ ಎಂದು ಹೇಳುವ ಮೂಲಕ ನಿಗೂಢವಾಗಿ ಮಾತನಾಡಿದ್ದರು. ಅದರ ಬೆನ್ನಲ್ಲೇ ಅವರಿಂದ ಇಂಥ ಹೇಳಿಕೆ ಹೊರಬಿದ್ದಿದೆ.
ಟೆಸ್ಲಾಗೆ ಸಂಕಷ್ಟ ತಂದ ಕ್ರಿಸ್ಟೀನಾ ಕೇಸ್
ಕಳೆದ ತಿಂಗಳು ತಮ್ಮ ಟ್ವೀಟರ್ ಹಿಂಬಾಲಕರ ಅಭಿಪ್ರಾಯ ಕೇಳಿ ಮಸ್ಕ್ ಶೇ.10ರಷ್ಟು ಷೇರುಗಳನ್ನು ಮಾರಾಟ ಮಾಡಿದ್ದರು. ಇದರ ಹೊರತಾಗಿಯೂ ಈಗಲೂ 20 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಎಲಾನ್ ಮಸ್ಕ್ ವಿಶ್ವದ ನಂ.1 ಶ್ರೀಮಂತರಾಗಿಯೇ ಉಳಿದಿದ್ದಾರೆ.
ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಎಂಬ ಹಿರಿಮೆ ಹೊಂದಿರುವ ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ 300 ಶತಕೋಟಿ ಡಾಲರ್ (22.50 ಲಕ್ಷ ಕೋಟಿ ರು.) ಆಸ್ತಿ ಹೊಂದಿರುವ ವಿಶ್ವದ ಮೊದಲ ಧನಿಕ 300 ಶತಕೋಟಿ ಡಾಲರ್ ಕ್ಲಬ್ ದಾಟಿದ ಮೊದಲ ವ್ಯಕ್ತಿ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದರು.
ಲೈಂಗಿಕ ಕಿರುಕುಳ ಆರೋಪ: ಮಹಿಳಾ ಉದ್ಯೋಗಿಯೊಬ್ಬರು ಎಲಾನ್ ಮಸ್ಕ್ (Elon Musk) ಒಡೆತನದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿಯ ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಮೊಕದ್ದಮೆ ದಾಖಲಿಸಿದ್ದರು.
‘ಟೆಸ್ಲಾ ಮಾಡಲ್ 3’ (Tesla Model 3) ಯೋಜನೆಯ ಪ್ರೊಡಕ್ಷನ್ ಅಸೋಸಿಯೇಟ್ ಜೆಸ್ಸಿಕಾ ಬರ್ರಾಜಾ ಎಂಬಾಕೆ, ‘ಕ್ಯಾಲಿಫೋರ್ನಿಯಾದ ?(california) ಫೀಮಾಂಟ್‌ನಲ್ಲಿರುವ ಟೆಸ್ಲಾ ಕಾರ್ಖಾನೆಯಲ್ಲಿ (Telsa Factory) ಸಹೊದ್ಯೋಗಿಗಳು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿದ್ದರು.