ಭಾರತೀಯ IT ಉದ್ಯೋಗಿಗಳಿಗೆ ಬಿಗ್ ರಿಲೀಫ್; ಕಠಿಣ H-1B ವೀಸಾ ನಿಷೇಧ ತೆರವು !

By Suvarna NewsFirst Published May 20, 2021, 2:39 PM IST
Highlights
  • H-1B ವೀಸಾ ನಿಷೇಧ ತೆರವಿಗೆ ಸೂಚಿಸಿದ ಜೋ ಬೈಡನ್ ಸರ್ಕಾರ  
  • ಅಮೆರಿಕದ ನಿರ್ಧಾರದಿಂದ ಭಾರತೀಯ ಉದ್ಯೋಗಿಗಳಿಗೆ ಬಿಗ್ ರಿಲೀಫ್
  • ಡೋನಾಲ್ಡ್ ಟ್ರಂಪ್ ಹೇರಿದ್ದ ಕಟ್ಟು ನಿಟ್ಟಿನ ನಿಯಮ ಸಡಿಲ

ವಾಷಿಂಗ್ಟನ್(ಮೇ.20): ಸ್ಥಳೀಯರಿಗೆ ಉದ್ಯೋಗ ಭದ್ರತೆ ನೀಡಲು ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇರಲಾಗಿದ್ದ H-1B ವೀಸಾ ನಿಷೇಧ ಕಾಯ್ದೆಯನ್ನು ತೆರವುಗೊಳಿಸಲಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೂಲಕ ಅಮೆರಿಕದಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಭಾರತ ಸೇರಿದಂತೆ ಇತರ ರಾಷ್ಟ್ರಗಳ ಉದ್ಯೋಗಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಸಂಗಾತಿ ವೀಸಾ ನಿಷೇಧ ಹಿಂದಕ್ಕೆ: ಬೈಡೆನ್ ಆದೇಶ, 1 ಲಕ್ಷ ಭಾರತೀಯರಿಗೆ ಅನುಕೂಲ!.

ಎಚ್-1ಬಿ ವೀಸಾ ಮೇಲೆ ಅಮೆರಿಕಾಗೆ ಪ್ರವೇಶಿಸುವ ಉದ್ಯೋಗಿಗಳು, ಕಾರ್ಮಿಕರನ್ನು ನಿಯಂತ್ರಿಸಲು ಪ್ರಯತ್ನಿಸಿದ ಪ್ರಾಸ್ತಾವಿತ ನಿಯಮವನ್ನು ತೆಗೆದುಹಾಕಲು ಜೋ ಬೈಡನ್ ನಿರ್ಧರಿಸಿದ್ದಾರೆ. ಈ ನಿರ್ಧಾರ ಅಮೆರಿಕದಲ್ಲಿ ಐಟಿ ಉದ್ಯೋಗದಲ್ಲಿ ಭಾರತೀಯರಿಗೆ ಸಮಾಧಾನ ತಂದಿದೆ.

ಟ್ರಂಪ್ ಆದೇಶದ ಬೆನ್ನಲ್ಲೇ ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯೂರಿಟಿ H-1B ವೀಸಾ ನಿಯಮಗಳನ್ನು ಜಾರಿಗೆ ತಂದಿತ್ತು. ಇದು ಅಮೆರಿಕದ ಉದ್ಯೋಗ ಹಾಗೂ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರು. ಇದೀಗ ತೆರವಿನ ಕುರಿತು ಅಮೆರಿಕ ಜನರಲ್ ಫೆಡರಲ್ ರಿಜಿಸ್ಟರ್ ವೀಸಾ ನಿರ್ಬಂಧ ತೆರವು ಪ್ರಕಟಿಸಿದೆ.

ವ್ಯಾಕ್ಸೀನ್ ಹಾಕಿಸ್ಕೊಂಡೋರು ಮಾಸ್ಕ್ ಹಾಕ್ಬೇಕಾಗಿಲ್ಲ: ಅಮೆರಿಕದಲ್ಲಿ ಹೊಸ ರೂಲ್ಸ್

ಈ ಕುರಿತು ಮಂಗಳವಾರ(ಮೇ.18)  ಯುಎಸ್ ಸಿಟಿಜನ್‌ಶಿಪ್ ಅಂಡ್ ಇಮಿಗ್ರೇಷನ್ ಸರ್ವೀಸಸ್ (USCIS), DHS ಅಂತಿಮ ನಿಯಮವನ್ನು ಹೊರಡಿಸಿದೆ. 2020 ರ ಅಕ್ಟೋಬರ್ ತಿಂಗಳಲ್ಲಿ ಡೋನಾಲ್ಡ್ ಟ್ರಂಪ್ ಹೊರಡಿಸಿದ ನಿಯಮವನ್ನು (IFR) ತೆಗೆದುಹಾಕುತ್ತದೆ, ಇದನ್ನು ಫೆಡರಲ್ ಜಿಲ್ಲಾ ನ್ಯಾಯಾಲಯವು ವಜಾ ಮಾಡಿದೆ ಎಂದು ಸ್ಪಷ್ಟಪಡಿಸಿದೆ.

ಕೊರೋನಾ ವೈರಸ್ ಹೊಡೆತದಿಂದ ಸ್ಥಳೀಯರು ಉದ್ಯೋಗ ವಂಚಿತರಾಗಬಾರದು, ಅಮೆರಿಕ ನಿವಾಸಿಗಳಿಗೆ ಯಾವುದೇ ಸಮಸ್ಯೆ ಬರಬಾರದು  ಎಂದು ವಲಸೆಯೇತರ ವೀಸಾಗಳ ಮೇಲೆ ನಿರ್ಬಂಧ ಹೇರಲು ಟ್ರಂಪ್  H-1B ವೀಸಾ ನಿಯಮ ಜಾರಿಗೆ ತಂದಿದ್ದರು.

click me!