ಲಸಿಕೆ ಹಾಕಿದರೆ ಮಾಸ್ಕ್, ಅಂತರ ಅಗತ್ಯವಿಲ್ಲ; ಅಮೆರಿಕ CDC ಪ್ರಕಟಣೆಯಿಂದ ಜನ ನಿರಾಳ!

By Suvarna News  |  First Published May 18, 2021, 10:01 PM IST
  • ಪೂರ್ಣ ಡೋಸ್ ತೆಗೆದುಕೊಂಡವರಿಗೆ ಗುಡ್‌ನ್ಯೂಸ್
  • ಕೋವಿಡ್ ಲಸಿಕೆ ಹಾಕಿದವರು ಮಾಸ್ಕ್ ಹಾಕಬೇಕಿಲ್ಲ, ಅಂತರ ಬೇಕಿಲ್ಲ
  • ಅಮೆರಿಕ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಪ್ರಕಟಣೆ

ನ್ಯೂಯಾರ್ಕ್(ಮೇ.18): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಶುಚಿತ್ವಕ್ಕೆ ಅದ್ಯತೆ ನೀಡುವುದು ಅತೀ ಅಗತ್ಯ. ಅದರಲ್ಲೂ ಮಾಸ್ಕ್  ಕಾರಣಕ್ಕೆ ಭಾರತದಲ್ಲಿ ಕೇಸ್, ಲಾಠಿ ಏಟು, ದಂಡ ಕಟ್ಟಿದ ಅದೆಷ್ಟೋ ಉದಾಹರಣೆಗಳಿವೆ. ಇದೀಗ ಅಮೆರಿಕದಲ್ಲಿ ಕೊರೋನಾ ಲಸಿಕೆ ಹಾಕಿದವರಿಗೆ ಮಾಸ್ಕ್ ಕಡ್ಡಾಯವಲ್ಲ, ಸಾಮಾಜಿಕ ಅಂತರ ಬೇಕಿಲ್ಲ ಎಂದು ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಹಾಗೂ ಪ್ರಿವೆನ್ಶನ್(CDC) ನಿರ್ದೇಶಕ ಪ್ರಕಟಿಸಿದ್ದಾರೆ.

ಲಸಿಕೆ ಪಡೆದವರಿಗೆ ಮಾಸ್ಕ್‌ ಬೇಡ, ಅಂತರ ಬೇಕಿಲ್ಲ: ಅಮೆರಿಕ!.

Latest Videos

undefined

ಸಂಪೂರ್ಣವಾಗಿ ಲಸಿಕೆ ಹಾಕಿದರೆ ಅಂದರೆ ಎರಡೂ ಡೋಸ್ ತಗೆದುಕೊಂಡಿದ್ದರೆ, ಮಾಸ್ಕ್ ಧರಿಸುವುದನ್ನು ನಿಲ್ಲಿಸಬಹುದು, ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಅಗತ್ಯವಿಲ್ಲ ಎಂದು ಶ್ವೇತಭವನದಲ್ಲಿ ನಡೆದ ಕೋವಿಡ್ 19 ಸ್ಥಿತಿಗತಿ ಸಭೆಯಲ್ಲಿ CDC ನಿರ್ದೇಶಕ ರೋಚೆಲ್ ವಾಲೆನ್‌ಸ್ಕೈ ಹೇಳಿದ್ದಾರೆ. ಎರಡು ಡೋಸ್ ಕೋವಿಡ್ ಲಸಿಕೆ ಪಡೆದವರು ಅತ್ಯಂತ ಸೇಫ್, ಅವರಿಂದ ಕೊರೋನಾ ಹರಡುವುದಿಲ್ಲ, ಅವರಿಗೆ ಕೊರೋನಾ ಅಂಟಿಕೊಳ್ಳುವುದಿಲ್ಲ ಎಂದಿದ್ದಾರೆ.

ಅನ್‍ಲಾಕ್ ಆರಂಭ; ಮಾಸ್ಕ್- ಅಂತರ ಇಲ್ಲ, ಒಂದು ವರ್ಷಗಳ ಬಳಿಕ ನೈಟ್‌ಕ್ಲಬ್‌ನಲ್ಲಿ ಜನಸಾಗರ!.

ಹಲವು ಅಧ್ಯಯನಗಳು, ಸದ್ಯ ಇಳಿಮುಖವಾಗಿರುವ ಕೊರೋನಾ ಪ್ರಕರಣ ಸಂಖ್ಯೆಗಳನ್ನು ಆಧರಿಸಿ ಅಮೆರಿಕ CDC ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದು ರೋಚೆಲ್ ಹೇಳಿದ್ದಾರೆ.  ಆದರೆ ಲಸಿಕೆ ಪಡೆಯದ ಅಥವಾ ಪೂರ್ಣ ಡೋಸ್ ಪಡೆಯದವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಅಂತರ ಪಾಲಿಸಬೇಕು ಎಂದು ರೋಚೆಲ್ ಎಚ್ಚರಿಸಿದ್ದಾರೆ.

CDC ನಿರ್ದೇಶಕ ಹೇಳಿಕೆ ಇದೀಗ ಅಮೆರಿಕ ಸಹಜ ಸ್ಥಿತಿಗೆ ಮರಳುತ್ತಿರುವ ಸೂಚನೆ ನೀಡಿದೆ. ಅಮೆರಿಕದಲ್ಲಿ ಇದೀಗ 12 ರಿಂದ 15 ವರ್ಷದ ಮಕ್ಕಳಿಗೂ ಲಸಿಕೆ ನೀಡಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ಸದ್ಯ ಶಾಲೆಯಲ್ಲಿ ಮಕ್ಕಳಿಗೆ ಮಾಸ್ಕ್ ಕಡ್ಡಾಯವಾಗಿದೆ. 

click me!