
ವಾಷಿಂಗ್ಟನ್: ಅಮೆಜಾನ್‌ನ ಕ್ಲೌಡ್ ಸೇವೆಗಳ ವಿಭಾಗವಾದ ಎಡಬ್ಲ್ಯುಎಸ್‌ನಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಸೋಮವಾರ ಫೋರ್ಟ್‌ನೈಟ್, ರಾಬಿನ್‌ಹುಡ್, ಸ್ನ್ಯಾಪ್‌ಚಾಟ್ ಸೇರಿ ವಿಶ್ವಾದ್ಯಂತ ಹಲವು ಜನಪ್ರಿಯ ವೆಬ್‌ಸೈಟ್‌ಗಳು, ಆ್ಯಪ್‌ಗಳ ಕಾರ್ಯಾಚರಣೆಯಲ್ಲಿ ತಾಂತ್ರಿಕ ಅಡಚಣೆ ಉಂಟಾಯಿತು.
ಎಡಬ್ಲ್ಯುಎಸ್‌ನಿಂದ ಕ್ಲೌಡ್ ಸೇವೆ ಪಡೆಯುತ್ತಿರುವ ಎಐ ಸ್ಟಾರ್ಟ್‌ಅಪ್ ಆದ ಪರ್ಪ್‌ಪ್ಲೆಕ್ಸಿಟಿ, ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್ ಕಾಯಿನ್‌ಬೇಸ್ ಮತ್ತು ಟ್ರೇಡಿಂಗ್ ಆ್ಯಪ್ ರಾಬಿನ್‌ಹುಡ್‌ನಂಥ ಕಂಪನಿಗೂ ಸಮಸ್ಯೆ ಎದುರಾಯಿತು.
‘ನಾವು ಈ ತಾಂತ್ರಿಕ ಸಮಸ್ಯೆ ಪರಿಹರಿಸಲು ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಪರ್ಪ್‌ಪ್ಲೆಕ್ಸಿಟಿ ಸಿಇಒ ಅರವಿಂದ್ ಶ್ರೀನಿವಾಸ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.
ಎಡಬ್ಲ್ಯುಎಸ್ ಆನ್ ಡಿಮಾಂಡ್ ಕಂಪ್ಯೂಟಿಂಗ್ ಪವರ್, ಡೇಟಾ ಸ್ಟೋರೇಜ್ ಮತ್ತು ಇತರೆ ಡಿಜಿಟಲ್ ಸೇವೆಗಳನ್ನು ವಿಶ್ವಾದ್ಯಂತ ಹಲವು ಕಂಪನಿಗಳಿಗೆ ಒದಗಿಸುತ್ತಿದೆ. ಗೂಗಲ್ ಮತ್ತು ಮೈಕ್ರೋಸಾಫ್ಟ್ ಕ್ಲೌಡ್ ಸೇವೆಗಳಂತೆ ಅಮೆಜಾನ್‌ನ ಎಡಬ್ಲ್ಯುಎಸ್ ಕೂಡ ವಿಶ್ವದ ಪ್ರಮುಖ ಕ್ಲೌಡ್ ಸೇವಾದಾರ ಸಂಸ್ಥೆಯಾಗಿದೆ. ಈ ಎಡಬ್ಲ್ಯುಎಸ್‌ನ ಸರ್ವರ್‌ನಲ್ಲಿ ಯಾವುದೇ ಸಮಸ್ಯೆ ಎದುರಾದರೂ ಅದರ ಪರಿಣಾಮ ವಿಶ್ವಾದ್ಯಂತ ಹಲವು ವೆಬ್‌ಸೈಟ್‌ಗಳು, ಪ್ಲಾಟ್‌ಫಾರಂಗಳ ಮೇಲೆ ಆಗುತ್ತದೆ.
ಡೌನ್ ಆದ ವೆಬ್ ಸೇವೆಗಳು
ಅಮೆಜಾನ್.ಕಾಮ್, ಪ್ರೈಮ್ ವಿಡಿಯೋ, ಅಲೆಕ್ಸಾ, ರಾಬಿನ್‌ಹುಡ್, ಸ್ನ್ಯಾಪ್‌ಚಾಟ್, ದಿ ನ್ಯೂಯಾರ್ಕ್ ಟೈಮ್ಸ್, ಆಪಲ್ ಟಿವಿ, ಫೋರ್ಟ್‌ನೈಟ್- ಇತ್ಯಾದಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ