ಸರ್ವಾಧಿಕಾರಿ ಟ್ರಂಪ್‌ ವಿರುದ್ಧ ಮತ್ತೆ ನೋ ಕಿಂಗ್ಸ್ ಪ್ರತಿಭಟನೆ

Kannadaprabha News   | Kannada Prabha
Published : Oct 20, 2025, 05:09 AM IST
Millions Join No Kings Protest Against Trump Policies Across America

ಸಾರಾಂಶ

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸರ್ವಾಧಿಕಾರಿ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಅಮೆರಿಕದಲ್ಲಿ ಮತ್ತೆ ‘ನೋ ಕಿಂಗ್ಸ್‌’ (ಯಾರೂ ರಾಜನಲ್ಲ) ಪ್ರತಿಭಟನೆ ಮತ್ತೆ ಭುಗಿಲೆದ್ದಿದೆ. ಶನಿವಾರ ದೇಶಾದ್ಯಂತ ಸುಮಾರು 70 ಲಕ್ಷ ಜನ 2,500 ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ವಾಷಿಂಗ್ಟನ್ : ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸರ್ವಾಧಿಕಾರಿ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಅಮೆರಿಕದಲ್ಲಿ ಮತ್ತೆ ‘ನೋ ಕಿಂಗ್ಸ್‌’ (ಯಾರೂ ರಾಜನಲ್ಲ) ಪ್ರತಿಭಟನೆ ಮತ್ತೆ ಭುಗಿಲೆದ್ದಿದೆ. ಶನಿವಾರ ದೇಶಾದ್ಯಂತ ಸುಮಾರು 70 ಲಕ್ಷ ಜನ 2,500 ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಟ್ರಂಪ್‌ ಅವರ ವಲಸೆ ನೀತಿ, ಮಾಧ್ಯಮಗಳ ಮೇಲಿನ ನಿಯಂತ್ರಣ, ರಾಜಕೀಯ ವಿರೋಧಿಗಳ ಮೇಲಿನ ಕಠಿಣ ಕ್ರಮಗಳನ್ನು ವಿರೋಧಿಸಿ ಇದು 3ನೇ ಬಾರಿ ಜನ ಬೀದಿಗಿಳಿದಿದ್ದಾರೆ.

ವಾಷಿಂಗ್ಟನ್‌, ಬೋಸ್ಟನ್‌, ಅಟ್ಲಾಂಟಾ, ಶಿಕಾಗೊ, ಲಾಸ್‌ ಏಂಜಲೀಸ್‌ ಮೊದಲಾದ ಪ್ರಮುಖ ನಗರಗಳು ಸೇರಿದಂತೆ 2,500 ನಗರಗಳಲ್ಲಿ ಪ್ರತಿಭಟನೆ ನಡೆದಿದೆ. ‘ನೋ ಕಿಂಗ್’, ‘ಪ್ರತಿಭಟಿಸುವುದಕ್ಕಿಂತ ಹೆಚ್ಚಿನ ದೇಶಭಕ್ತಿ ಮತ್ತೊಂದಿಲ್ಲ’, ‘ಫ್ಯಾಸಿಸಂ ಅನ್ನು ವಿರೋಧಿಸಿ’ ಮೊದಲಾದ ಘೋಷಣೆಗಳನ್ನು ಕೂಗುತ್ತಾ ಬೃಹತ್‌ ಸಂಖ್ಯೆಯ ಜನ ಪ್ರತಿಭಟನೆಯಲ್ಲಿ ಭಾಗಿಯಾದರು.

ಕ್ಲೋನ್ ವೇಷ ಧರಿಸಿ ಟ್ರಂಪ್‌ ತಿರುಗೇಟು!ತಮ್ಮ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಒಂದೇ ವಾಕ್ಯದಲ್ಲಿ ಉತ್ತರಿಸುವ ಮೂಲಕ ಟ್ರಂಪ್‌ ತೆರೆ ಎಳೆದಿದ್ದಾರೆ. ‘ಅವರು ನನ್ನನ್ನು ರಾಜ ಎನ್ನುತ್ತಿದ್ದಾರೆ. ಆದರೆ ನಾನು ರಾಜನಲ್ಲ’ ಎಂದಿದ್ದು, ಕ್ಲೋನ್ ವೇಷ ಧರಿಸಿ ಪ್ರತಿಭಟನಾಕಾರರನ್ನು ಟೀಕಿಸುವ ಹಲವು ಎಐ ರಚಿತ ವಿಡಿಯೋಗಳನ್ನು ಟ್ರುಥ್‌ ಸೋಶಿಯಲ್‌ನಲ್ಲಿ ಹಂಚಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!